ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದ ಬ್ಲಾಗರ್‌ ಹತ್ಯೆ ಪ್ರಕರಣ: ಒಬ್ಬ ಆರೋಪಿ ಸೆರೆ

Last Updated 2 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಢಾಕಾ (ಪಿಟಿಐ): ಅಮೆರಿಕದ ಜನಪ್ರಿಯ ಬ್ಲಾಗರ್‌ ಹಾಗೂ ಧಾರ್ಮಿಕ ತೀವ್ರವಾ­ದಿ­­ಗಳ ವಿಮರ್ಶಕ ಅವಿಜಿತ್‌ ರಾಯ್‌ ಅವರ ಕೊಲೆ ಪ್ರಕರಣದ ಪ್ರಮುಖ ಆರೋಪಿ­ಯೆನ್ನಲಾದ ಇಸ್ಲಾಮಿಕ್‌ ಮೂಲಭೂತವಾದಿಯೊಬ್ಬನನ್ನು ಬಾಂಗ್ಲಾದೇಶದ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ರಾಯ್‌ಗೆ ಹಲವು ಬಾರಿ ಆನ್‌ಲೈನ್‌­ನಲ್ಲಿ ಕೊಲೆ ಬೆದರಿಕೆಯೊಡ್ಡಿದ್ದನ್ನು ವಿಚಾ­ರಣೆ ವೇಳೆ ಬಂಧಿತ ಫರಾಬಿ ಶಫೀ­ಯುರ್‌ ರಹಮಾನ್‌ ಒಪ್ಪಿಕೊಂಡಿದ್ದಾನೆ ಎಂದು ರ್‍್ಯಾಪಿಡ್‌ ಆ್ಯಕ್ಷನ್‌ ಬೆಟಾಲಿ­ಯನ್‌ನ ಕಾನೂನು ಮತ್ತು ಮಾಧ್ಯಮ ವಿಭಾಗದ ನಿರ್ದೇಶಕ ಕಮಾಂಡರ್‌ ಮುಫ್ತಿ ಮಹ್ಮೂದ್‌ ಖಾನ್‌ ತಿಳಿಸಿದ್ದಾರೆ.

ಧಾರ್ಮಿಕ ತೀವ್ರವಾದಿಗಳ ವಿರುದ್ಧ ಕಟು ಟೀಕೆ ವ್ಯಕ್ತಪಡಿಸಿದ್ದ ರಾಯ್‌ ಕಳೆದ ವಾರ ಢಾಕಾದಲ್ಲಿ ಪತ್ನಿಯೊಂದಿಗೆ ಬರು-ತ್ತಿದ್ದ ವೇಳೆ ಅಮಾನುಷವಾಗಿ ಹತ್ಯೆ ಮಾಡಲಾಗಿತ್ತು. ಪತ್ನಿ ರಫೀದಾ ಅಹ್ಮದ್‌ ಬೋನ್ಯಾ ಅವರೂ ಘಟನೆ­ಯಲ್ಲಿ ತೀವ್ರವಾಗಿ ಗಾಯಗೊಂಡಿದ್ದರು.

ಫರಾಬಿಯನ್ನು ಸೋಮವಾರ ಬೆಳಿಗ್ಗೆ ಇಲ್ಲಿನ ಜತ್ರಾಬರಿ ಬಸ್‌ ನಿಲ್ದಾಣದ ಬಳಿ ಬಂಧಿಸಲಾಯಿತು. ಚಿತ್ತಗಾಂಗ್‌ ವಿ.ವಿ ಭೌತವಿಜ್ಞಾನ ವಿಭಾಗದಿಂದ ಹೊರ­ಬಿದ್ದಿದ್ದ ಫರಾಬಿ ಹಲವು ಬಾರಿ ಕೊಲೆ ಬೆದರಿಕೆ ಒಡ್ಡಿದ್ದರಿಂದ ರಾಯ್‌ ತಂದೆ ಪೊಲೀಸರ ಬಳಿ ಆತನ ಹೆಸರನ್ನು ಪ್ರಸ್ತಾಪಿಸಿದ್ದರು.

ಐದು ವರ್ಷಗಳ ಹಿಂದೆ ಫೇಸ್‌ಬುಕ್‌ ಮೂಲಕ ಪರಿಚಯವಾಗಿ ಪರಸ್ಪರ ಚರ್ಚೆ ನಡೆಸುತ್ತಿದ್ದರು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT