ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ, ಯುರೋಪ್‌ ಮೇಲೆ ಉಗ್ರರ ದಾಳಿ: ಎಚ್ಚರಿಕೆ

Last Updated 21 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಲಂಡನ್‌ (ಪಿಟಿಐ): ಒಸಾಮ ಬಿನ್‌ ಲಾಡೆನ್‌ ಆಪ್ತ ವಲಯದಲ್ಲಿ ಗುರುತಿ­ಸಿ­­ಕೊಂಡಿದ್ದ ಭಯೋತ್ಪಾದಕ ಮುಹಿ­ಸಿನ್‌ ಅಲ್‌ ಫದಾಲಿ ನೇತೃತ್ವದ ಖೋರಾ­ಸನ್‌  ಭಯೋ­ತ್ಪಾದಕ ಸಂಘ­ಟ­ನೆಯು ಅಮೆ­ರಿಕ ಮತ್ತು ಯುರೋಪ್‌ ಮೇಲೆ ದಾಳಿ ನಡೆಸುವ ಬೆದರಿಕೆ­­ಯೊಡ್ಡಿದೆ ಎಂದು ಅಮೆರಿಕದ ಅಧಿಕಾ­ರಿಗಳು ಹೇಳಿದ್ದಾರೆ.

ಸಿರಿಯಾದಲ್ಲಿ ಘಟಕ ಹೊಂದಿರುವ ಖೊರಾಸನ್‌ ಸಂಘಟನೆ ಕಳೆದ ವರ್ಷ­ದಿಂದೀಚೆಗೆ ಕ್ರಿಯಾಶೀಲವಾಗಿದೆ.

ಸಿರಿಯಾ ಮತ್ತು ಇರಾಕ್‌ನಲ್ಲಿರುವ ಇಸ್ಲಾಮಿಕ್‌ ಸ್ಟೇಟ್‌ ಉಗ್ರರ ಮೇಲೆ ಅಮೆರಿಕ ದಾಳಿ ಆರಂಭಿಸಿದ ನಂತರ ಆ ದೇಶ ಮತ್ತು ಬೇರೆ ದೇಶಗಳಲ್ಲಿ ಭಯೋ­ತ್ಪಾದಕರ ವಿರುದ್ಧ ದಾಳಿ ನಡೆ­ಸಲು ನಿಯೋಜಿಸಿ­ರುವ  ಪಡೆ­ಗಳ ಮೇಲೆ ಈ ಸಂಘಟನೆ ದಾಳಿ ನಡೆಸು­ತ್ತಿದೆ ಎಂದು ಗುಪ್ತಚರ ಮತ್ತು ಕಾನೂನು ಜಾರಿ ಇಲಾಖೆ ಅಧಿಕಾರಿ­ಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT