ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಜಿ ವಜಾ: ₨50 ಸಾವಿರ ದಂಡ

Last Updated 4 ಮಾರ್ಚ್ 2015, 20:05 IST
ಅಕ್ಷರ ಗಾತ್ರ

ಬೆಂಗಳೂರು: ಸ್ಥಿರಾಸ್ತಿಯ ಆನ್‌ಲೈನ್‌ ನೋಂದಣಿ ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್‌ ಬುಧವಾರ ವಜಾ ಮಾಡಿದ್ದು ಅರ್ಜಿದಾರರಿಗೆ ₨ 50 ಸಾವಿರ ದಂಡ ವಿಧಿಸಿದೆ.

ಈ ಕುರಿತು ಬೆಂಗಳೂರಿನ ನಿವಾಸಿ ಎ.ರಾಜಶೇಖರ್‌ ಎಂಬುವವರು ಸಲ್ಲಿ­ಸಿದ್ದ ಅರ್ಜಿಯನ್ನು ಹಿರಿಯ ನ್ಯಾಯ­ಮೂರ್ತಿ ಕೆ.ಎಲ್‌.ಮಂಜು­ನಾಥ್‌ ಮತ್ತು ಪಿ.ಬಿ. ಬಜಂತ್ರಿ ಅವರಿದ್ದ ವಿಭಾ­ಗೀಯ ಪೀಠವು  ವಿಲೇವಾರಿ ಮಾಡಿತು.

‘ಸ್ಥಿರಾಸ್ತಿಗಳ ಆನ್‌ಲೈನ್‌ ನೋಂದಣಿ­ಗಾಗಿ  ರಾಜ್ಯ ಸರ್ಕಾರವು 2011ರಲ್ಲಿ ಹೊರಡಿಸಿರುವ ಅಧಿಸೂಚನೆ ರದ್ದು­ಗೊ­ಳಿ­ಸಬೇಕು. ಈ ವ್ಯವಸ್ಥೆಯಿಂದ ನೋಂದಣಿ ಪುನರಾರ್ತನೆ ಆಗುವ ಸಂಭವ ಇರುತ್ತದೆ’ ಎಂಬ ಅರ್ಜಿದಾರರ ವಾದವನ್ನು ಪ್ರಧಾನ ಸರ್ಕಾರಿ ವಕೀಲ ಆರ್.ದೇವದಾಸ್‌ ಅಲ್ಲಗಳೆದರು.

‘ಈ ವ್ಯವಸ್ಥೆಯಿಂದ ಸರ್ಕಾರದ ಬೊಕ್ಕಸಕ್ಕೆ ಯಾವುದೇ ನಷ್ಟವಿಲ್ಲ. ಆದಾಗ್ಯೂ ಈ ಪದ್ಧತಿ ಸಾರ್ವಜನಿಕರಿಗೆ ಅನುಕೂಲ ಆಗಲಿ ಎಂಬ ಏಕಮೇವ ಉದ್ದೇಶದಿಂದಲೇ ರೂಪುಗೊಂಡಿದೆ’ ಎಂದು ದೇವದಾಸ್‌ ನ್ಯಾಯಪೀಠಕ್ಕೆ ಮನವರಿಕೆ ಮಾಡಿಕೊಟ್ಟರು.

ಈ ಪ್ರಕರಣದಲ್ಲಿ ಮಧ್ಯಾಂತರ  ಅರ್ಜಿ ಸಲ್ಲಿಸಿ ಪ್ರತಿವಾದಿಯಾಗಿದ್ದ ವಕೀ­ಲ­ರಾದ ಎನ್‌.ಪಿ.ಅಮೃತೇಶ್‌ ಅವರು, ‘ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯ ಹಿಂದೆ ಹಲವು ಪಟ್ಟಭದ್ರ ನೋಂದಣಿ ಅಧಿಕಾರಿಗಳ ಕುಮ್ಮಕ್ಕಿದೆ. ಆನ್‌ಲೈನ್ ನೋಂದಣಿ ವ್ಯವಸ್ಥೆ ಮುಂದು­­ವರಿಯಬೇಕು’ ಎಂದು ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT