ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವೈಜ್ಞಾನಿಕ ಶುಲ್ಕ

ಅಕ್ಷರ ಗಾತ್ರ

ಕೊಳವೆ ಬಾವಿ ಇರುವವರು ಒಳಚರಂಡಿ ಉಪಯೋಗಿಸಿದ್ದಕ್ಕೆ ಜಲಮಂಡಳಿ ‘ಕೊಳವೆ ಬಾವಿ ಸ್ಯಾನಿಟರಿ ವೆಚ್ಚ’ವೆಂದು ಮಾಸಿಕ ₹ 50 ಶುಲ್ಕ ವಿಧಿಸುತ್ತಿತ್ತು.  2014ರ ಡಿಸೆಂಬರ್‌ನಿಂದ ಅದನ್ನು ₹ 100ಕ್ಕೆ ಏರಿಸಿದ್ದು, ಈಗ ಏಕಾಏಕಿ ಕುಟುಂಬವೊಂದಕ್ಕೆ ₹ 100 ಮತ್ತು ಬೋರ್‌ವೆಲ್‌ಗೆ ₹ 100 ಶುಲ್ಕ ವಿಧಿಸುತ್ತಿದೆ. 

ಅಂದರೆ, ಕಟ್ಟಡದಲ್ಲಿ ಎರಡು ಮನೆಗಳಿದ್ದರೆ ಒಟ್ಟು ₹ 300 ಶುಲ್ಕ ತೆರಬೇಕಾಗುತ್ತದೆ. ಕೊಳವೆ ಬಾವಿ ಇರಲಿ ಬಿಡಲಿ, ಒಳಚರಂಡಿಗೆ ಬಿಡುವ ನೀರಿನ ಪ್ರಮಾಣ ಹೆಚ್ಚೂಕಡಿಮೆ ಒಂದೇ ಪ್ರಮಾಣದಲ್ಲಿ ಇರುತ್ತದೆ.

ಜಲಮಂಡಳಿಯವರು ಸಮರ್ಪಕವಾಗಿ ನೀರು  ಸರಬರಾಜು ಮಾಡದೇ ಇರುವುದಕ್ಕೆ ತಾನೆ ಜನ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕೊಳವೆ ಬಾವಿ ತೆಗೆಸಿ ಪಂಪನ್ನು ಅಳವಡಿಸಿರುವುದು? ಒಂದೊಮ್ಮೆ ಜನ ಜಲಮಂಡಳಿಯಿಂದ ನೀರಿನ ಸಂಪರ್ಕವನ್ನೇ ಪಡೆಯದೆ ತಾವು ಉಪಯೋಗಿಸಿದ ಕೊಳವೆಬಾವಿಯ ನೀರನ್ನು ಒಳಚರಂಡಿಗೆ ಬಿಟ್ಟರೆ ಆಗ ಈ ಶುಲ್ಕ ವಿಧಿಸುವುದು ನ್ಯಾಯ.

ಸೌರಶಕ್ತಿಯಿಂದ ನೀರು ಕಾಯಿಸುವ ವ್ಯವಸ್ಥೆಯಿದ್ದರೆ, ವಿದ್ಯುತ್ ಮಂಡಳಿ ಶುಲ್ಕದಲ್ಲಿ ರಿಯಾಯಿತಿ ಕೊಡುತ್ತಿದೆ. ಆದರೆ ಜಲಮಂಡಳಿಯೂ ಇದೇ ರೀತಿ ರಿಯಾಯಿತಿ ಕೊಡುವ ಬದಲು ಹೆಚ್ಚುವರಿ ಶುಲ್ಕ ವಿಧಿಸುವುದು ಅವೈಜ್ಞಾನಿಕ ಮತ್ತು ಅನ್ಯಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT