ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಶಿಸ್ತಿಗೆ ಕ್ಷಮೆಯಿಲ್ಲ: ರಾಜ್ ಠಾಕ್ರೆ

Last Updated 22 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಪುಣೆ (ಪಿಟಿಐ): ಜನರೊಂದಿಗೆ ಸೌಹಾರ್ದದಿಂದ ನಡೆದು­ಕೊಳ್ಳ­ಬೇಕು ಎಂದು ತಮ್ಮ ಕಾರ್ಯಕರ್ತರಿಗೆ ಸ್ಪಷ್ಟವಾಗಿ ಹೇಳಿ­­ರುವ ಮಹಾ­ರಾಷ್ಟ್ರ ನವನಿರ್ಮಾಣ ಸೇನಾ ಮುಖ್ಯಸ್ಥ ರಾಜ್‌ ಠಾಕ್ರೆ ಅವರು, ಅಶಿಸ್ತಿನ ವರ್ತನೆಯನ್ನು ಸಹಿಸು­ವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಶನಿವಾರ ಇಲ್ಲಿನ ಪಕ್ಷದ ಕಚೇರಿಯಲ್ಲಿ ಮಾತನಾಡಿದ ಅವರು, ಪ್ರತಿ­ ಯೊಬ್ಬ ಕಾರ್ಯಕರ್ತನೂ ಜನರ  ಜೊತೆ ಒಡನಾಟ ಇಟ್ಟುಕೊಂಡು, ಪಕ್ಷದ ಕಾರ್ಯ­ಕ್ರಮಗಳನ್ನು ಜಾರಿಗೆ ತರುವ   ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.

ಅಗತ್ಯಬಿದ್ದಾಗ ಪಕ್ಷದ ಪದಾಧಿ­ಕಾರಿಗಳನ್ನು ಬದಲಾಯಿಸುವುದು ಅನಿ­­ವಾರ್ಯ­. ಕೇವಲ ಮತ ಗಳಿಕೆ ಉದ್ದೇಶವಾಗಬಾರದು. ಚುನಾ­ವಣೆ­­­ಯನ್ನು ಗಣನೆಯಲ್ಲಿ ಇಟ್ಟುಕೊಳ್ಳದೇ ಕೆಲಸ ಮಾಡಿದರೆ ಜನರು ತಾವಾ­­ಗಿಯೇ ಮತ ನೀಡುತ್ತಾರೆ ಎಂದು ಠಾಕ್ರೆ ಕಿವಿಮಾತು ಹೇಳಿದರು.

ಹುಟ್ಟುಹಬ್ಬ ಮತ್ತಿತ್ತರ ಸಂದರ್ಭದಲ್ಲಿ ನಗರದಾದ್ಯಂತ ಬ್ಯಾನರ್‌ ಹಾಗೂ ಕಟೌಟ್‌ಗಳನ್ನು ಹಾಕಿಕೊಳ್ಳುವವರನ್ನು ಪಕ್ಷದಿಂದ ಹೊರ ಹಾಕ­ಲಾಗುವುದು ಎಂದೂ ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT