ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸಂಘಟಿತ ಕಾರ್ಮಿಕರಿಗೆ ಉಚಿತ ಆರೋಗ್ಯ ಸೇವೆ

ರಾಜ್ಯದಲ್ಲಿ ಮತ್ತೆ ಆರ್ಎಸ್‌ಬಿವೈ ಯೋಜನೆ ಜಾರಿ
Last Updated 25 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಗದಗ: ತಾಂತ್ರಿಕ ಕಾರಣಗಳಿಂದಾಗಿ ಸ್ಥಗಿತ­ಗೊಂಡಿದ್ದ ಕೇಂದ್ರ ಸರ್ಕಾರದ ರಾಷ್ಟ್ರೀಯ ಸ್ವಾಸ್ಥ್ಯ ವಿಮಾ ಯೋಜನೆಯು (ಆರ್‌ಎಸ್‌ಬಿವೈ) ರಾಜ್ಯದಲ್ಲಿ ಮತ್ತೆ ಜಾರಿಯಾಗಲಿದೆ.

ಅಸಂಘಟಿತ ಕಾರ್ಮಿಕರಿಗೆ ಆರೋಗ್ಯ ರಕ್ಷಣೆ ಒದಗಿಸುವ ಈ ಯೋಜನೆ ಮೊದಲು 2009–10ನೇ ಸಾಲಿನಲ್ಲಿ ರಾಜ್ಯದ ಐದು ಜಿಲ್ಲೆಗಳಲ್ಲಿ ಜಾರಿಯಾ­ಗಿತ್ತು. ನಂತರದಲ್ಲಿ ಇಡೀ ರಾಜ್ಯಕ್ಕೆ ವಿಸ್ತರಿಸಲಾಗಿತ್ತು. ಆದರೆ 2012–13ನೇ ಸಾಲಿನಲ್ಲಿ ಕೇಂದ್ರ ಸರ್ಕಾರ ಅನುಮೋದನೆ ನೀಡದ ಕಾರಣ ಯೋಜನೆಯನ್ನು ಸ್ಥಗಿತಗೊಳಿ­ಸಲಾಗಿತ್ತು.

ಪ್ರಸಕ್ತ ವರ್ಷದಿಂದ ರಾಜ್ಯದಲ್ಲಿ ಮತ್ತೆ ಆರ್‌ಎಸ್‌­ಬಿವೈ ಅನುಷ್ಠಾನ­ಗೊಳಿಸು­ತ್ತಿದ್ದು, ಕೆಲ ಬದಲಾವಣೆ­ಗಳನ್ನು ಮಾಡ­ಲಾಗಿದೆ. ಚಿಕಿತ್ಸೆಗೆ ಅರ್ಹವಾದ ಕಾಯಿಲೆಗಳ ಸಂಖ್ಯೆಯನ್ನು 1,050 ರಿಂದ 1,516ಕ್ಕೆ ಹೆಚ್ಚಿಸ­ಲಾಗಿದೆ. 32 ಕೆಬಿಯಿಂದ 64 ಕೆಬಿ ಸ್ಮಾರ್ಟ್‌ ಕಾರ್ಡ್‌ ಹಾಗೂ ಕಾರ್ಡ್‌ ಅವಧಿಯನ್ನು ಒಂದು ವರ್ಷದಿಂದ 3 ವರ್ಷಕ್ಕೆ ವಿಸ್ತರಿಸಲಾಗಿದೆ.

ಬಿಪಿಎಲ್‌ ಕುಟುಂಬಗಳು, ನರೇಗಾ ಕಾರ್ಮಿಕರು, ಇಂದಿರಾ ಗಾಂಧಿ ವೃದ್ಧಾಪ್ಯ ವೇತನ ಪಡೆಯು­ವವರು, ರೈಲ್ವೆ ಇಲಾಖೆಯ ಚಿಲ್ಲರೆ ಮಾರಾಟ­ಗಾರರು, ಕಟ್ಟಡ ಕಾರ್ಮಿ­ಕರು, ಬೀದಿ ವ್ಯಾಪಾರಿಗಳು, ಬೀಡಿ ಕಾರ್ಮಿ­ಕರು, ಗೃಹ ಕಾರ್ಮಿಕರು, ಪೋಸ್ಟ್‌ಮನ್‌, ಆಟೊ, ಟ್ಯಾಕ್ಸಿ ಚಾಲ­ಕರು, ಸೈಕಲ್‌ ರಿಕ್ಷಾ ತಳ್ಳು ವವರು, ಚಿಂದಿ ಆಯು­ವವರು, ಗಣಿ ಕಾರ್ಮಿಕರು, ಸಫಾಯಿ ಕರ್ಮ­ಚಾರಿಗಳು ಯೋಜನೆಯ ಫಲಾನುಭವಿಗಳು.

ಫಲಾನುಭವಿಗಳಿಗೆ ಅವರ ಬೆರಳು­ಗುರುತು ಮತ್ತು ಛಾಯಾಚಿತ್ರ ಇರುವ ಸ್ಮಾರ್ಟ್‌ ಕಾರ್ಡ್‌ ನೀಡಲಾಗುತ್ತದೆ. ಕಾರ್ಡ್‌ ಹೊಂದಿದ ಫಲಾನುಭವಿ ದೇಶದ ಯಾವುದೇ ಭಾಗದಲ್ಲಿ ಆರ್‌ಎಸ್‌ಬಿವೈ ಗುರುತಿಸಿರುವ ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಒಳರೋಗಿಯಾಗಿ ಚಿಕಿತ್ಸೆ ಪಡೆಯ­ಬಹುದು. ಕುಟುಂಬದ ಸದಸ್ಯರು ಬೇರೆ ಕಡೆ ವಾಸವಿದ್ದಲ್ಲಿ, ಅಂತಹ ಸಂದರ್ಭದಲ್ಲಿ ವಿಭಜಸಿ (ಸ್ಪ್ಲಿಟ್‌) ಕಾರ್ಡ್‌ ನೀಡಲು ಅವಕಾಶ ಕಲ್ಪಿಸ­ಲಾಗಿದೆ. ಆದರೆ ವಿಮಾ ಮೊತ್ತ ಪ್ರತಿ ಕುಟುಂಬಕ್ಕೆ ವಾರ್ಷಿಕ ₨ 30,000 ಮಾತ್ರ. ಕುಟುಂಬದ ಮುಖ್ಯಸ್ಥ, ಪತ್ನಿ ಹಾಗೂ ಮೂವರು ಅವಲಂಬಿತರು (ಮಕ್ಕಳು ಸೇರಿದಂತೆ) ಒಟ್ಟು ಐದು ಮಂದಿ ಒಳರೋಗಿಗಳಾಗಿ ಈ ಹಣದ ಮಿತಿ­ಯೊಳಗೆ ವೈದ್ಯಕೀಯ ಸೌಲಭ್ಯ ಪಡೆಯಬಹುದು.

ಗುರುತಿಸಿರುವ 1,516 ಕಾಯಿಲೆ­ಗಳಿಗೆ ಚಿಕಿತ್ಸೆ ಇದೆ. ಹೆರಿಗೆ ಹಾಗೂ ನವಜಾತ ಶಿಶುಗಳಿಗೂ ಈ ಸೌಲಭ್ಯ ಅನ್ವಯಿಸಲಿದೆ. ಗದಗ ಜಿಲ್ಲೆಯ 2,39,752 ಫಲಾನುಭವಿಗಳು ಸೇರಿದಂತೆ ರಾಜ್ಯ­ದಾದ್ಯಂತ ಒಟ್ಟು 1,12,46,344 ಫಲಾನುಭ­ವಿಗಳು ಯೋಜನೆ ಸೌಲಭ್ಯ ಪಡೆಯಲಿದ್ದಾರೆ.   

ಕೇಂದ್ರ, ರಾಜ್ಯ ಸರ್ಕಾರ, ವಿಮಾ ಕಂಪೆನಿ ಹಾಗೂ ಟಿಪಿಎ ಸಹಕಾರ­ದೊಂದಿಗೆ ಗುರುತಿಸಿರುವ ಆಸ್ಪತ್ರೆ ಗಳಲ್ಲಿ ಫಲಾನುಭವಿ ಕುಟುಂಬದವರಿಗೆ ಆರೋಗ್ಯ ವಿಮಾ ಸೌಲಭ್ಯ ಒದಗಿಸುವುದು ಯೋಜನೆ ಉದ್ದೇಶ. ಯೋಜನೆಗೆ ತಗಲುವ ಪ್ರೀಮಿಯಂ ಮೊತ್ತದಲ್ಲಿ  ಶೇ 75ರಷ್ಟು ಕೇಂದ್ರದಿಂದ ಹಾಗೂ ಉಳಿದದ್ದನ್ನು ರಾಜ್ಯ ಸರ್ಕಾರ  ಭರಿಸುತ್ತದೆ.

ಹೈಟೆಕ್‌ ಆಸ್ಪತ್ರೆಗಳಲ್ಲೂ ಚಿಕಿತ್ಸೆ: ‘ಆರ್‌ಎಸ್‌ಬಿವೈ ಯೋಜನೆ ಅನು­ಷ್ಠಾನ ಸಂಬಂಧ ಬೆಂಗಳೂರಿನಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ನೀಡಲಾಗಿದೆ. ಚಿಕಿತ್ಸೆಗೆ ಸರ್ಕಾರಿ ಆಸ್ಪತ್ರೆಗಳಲ್ಲದೇ ಹೈಟೆಕ್‌ ಆಸ್ಪತ್ರೆಗಳನ್ನು ಗುರುತಿಸ­ಲಾಗಿದೆ. ಗದಗ ಜಿಲ್ಲೆಯಲ್ಲಿಯೇ 15 ಆಸ್ಪತ್ರೆಗಳನ್ನು ಪಟ್ಟಿ ಮಾಡ ಲಾಗಿದೆ. ತಹಶೀಲ್ದಾರ್‌, ಪಿಡಿಒ, ಗ್ರಾಮ­ಲೆಕ್ಕಿಗರನ್ನು ಒಳಗೊಂಡ ತಾಲ್ಲೂಕು ಅನುಷ್ಠಾನ ಸಮಿತಿ ಕಾರ್ಡ್‌­ಗಳನ್ನು ಫಲಾನುಭವಿಗಳಿಗೆ ವಿತರಿಸಲಿದೆ. ಜಿಲ್ಲೆ­ಯಲ್ಲೂ ಸಭೆ ನಡೆಸಿ ಯೋಜನೆ ಅನುಷ್ಠಾನ­ಗೊಳಿಸಲಾಗುವುದು’  ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಎಂ. ಬಾಲಕೃಷ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT