ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಸಾಂ: ಉಗ್ರರಿಂದ ಎಸ್‌.ಪಿ ಹತ್ಯೆ

Last Updated 7 ಜೂನ್ 2014, 19:30 IST
ಅಕ್ಷರ ಗಾತ್ರ

ಗುವಾಹಟಿ (ಪಿಟಿಐ): ಎಸ್‌ಪಿ ನಿತ್ಯಾನಂದ ಗೋಸ್ವಾಮಿ ಹಾಗೂ ಅವರ  ಖಾಸಗಿ ಭದ್ರತಾ ಅಧಿಕಾರಿ (ಪಿಎಸ್‌ಒ) ನುಸಿನಾ ಅವರನ್ನು ಉಗ್ರರು ಗುಂಡಿಟ್ಟು ಹತ್ಯೆ ಮಾಡಿ­ರುವ ಹಿನ್ನೆಲೆಯಲ್ಲಿ ರಾಜ್ಯ­ದಲ್ಲಿ ಕಾನೂನು ಸುವ್ಯವಸ್ಥೆ ಪರಿಶೀಲಿ­ಸು­­ವುದಕ್ಕೆ ಗೃಹ ಖಾತೆ ರಾಜ್ಯ ಸಚಿವ ಕಿರಣ್‌ ರಿಜಿಜು ಗುವಾಹಟಿಗೆ ಧಾವಿಸಿದ್ದಾರೆ.

ಕಬ್ರಿ ಆಂಗ್ಲಾಂಗ್‌ ಜಿಲ್ಲೆಯಲ್ಲಿ ಗುರುವಾರ ರಾತ್ರಿ ನಡೆದ ಕಾರ್ಯಾ­­ಚರ­ಣೆಯಲ್ಲಿ ಈ ಇಬ್ಬರು ಅಧಿಕಾರಿ­ಗಳು ಉಗ್ರರಿಗೆ ಬಲಿ­­ಯಾದರು.  ಅಸ್ಸಾಂನಲ್ಲಿ ಇನ್ನೂ ಮೂರು ತಿಂಗಳ ವರೆಗೆ ಕೇಂದ್ರ ಸಶಸ್ತ್ರ ಪೊಲೀಸ್‌ ಪಡೆ ಸಿಬ್ಬಂದಿ ನಿಯೋ­ಜನೆ­ಯನ್ನು ಮುಂದು­­ವರಿಸು­ವಂತೆ ರಾಜ್ಯ ಸರ್ಕಾರ ಮಾಡಿ­ಕೊಂಡ ಕೋರಿ­ಕೆಗೆ ಕೇಂದ್ರ ಗೃಹ ಸಚಿವಾ­ಲಯ ಒಪ್ಪಿಗೆ ನೀಡಿದೆ.

ರಿಜಿಜು ಹಾಗೂ ಅಸ್ಸಾಂ ಮುಖ್ಯ­ಮಂತ್ರಿ ತರುಣ್‌ ಗೊಗೋಯ್‌ ಮಧ್ಯೆ ನಡೆದ ಸಭೆ­ಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT