ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂಧ್ರ, ತೆಲಂಗಾಣದಲ್ಲಿ ರಣ ಬಿಸಿಲಿಗೆ 153 ಬಲಿ

Last Updated 23 ಮೇ 2015, 10:38 IST
ಅಕ್ಷರ ಗಾತ್ರ

ಹೈದರಾಬಾದ್‌ (ಪಿಟಿಐ): ಆಂಧ್ರಪ್ರದೇಶ ಮತ್ತು ತೆಲಂಗಾಣದ ವಿವಿಧ ಭಾಗಗಳಲ್ಲಿ ರಣ ಬಿಸಿಲಿಗೆ ಕಳೆದ ಒಂದು ವಾರದಲ್ಲಿ 153 ಮಂದಿ ಬಲಿಯಾಗಿದ್ದಾರೆ.

ಕಳೆದೊಂದು ವಾರದಿಂದ ಬಿಸಿಲಿನ ಹೊಡೆತಕ್ಕೆ ಸಿಲುಕಿ ತೆಲಂಗಾಣದಲ್ಲಿ 73 ಮಂದಿ ಮತ್ತು ಆಂಧ್ರದಲ್ಲಿ 80 ಮಂದಿ ಮೃತಪಟ್ಟಿದ್ದಾರೆ.  ಆಂಧ್ರ ಕರಾವಳಿಯ ಪ್ರಕಾಶಂ ಜಿಲ್ಲೆಯೊಂದರಲ್ಲೇ 40 ಮಂದಿ ರಣ ಬಿಸಿಲಿಗೆ ಜೀವ ಕಳೆದುಕೊಂಡಿದ್ದಾರೆ.   ವಿಶಾಖಪಟ್ಟಣಂನಲ್ಲಿ 12, ಶ್ರೀಕಾಕುಳಂನಲ್ಲಿ 8 ನಲ್ಗೊಂಡ ಜಿಲ್ಲೆಯಲ್ಲಿ 28 ಸಾವುಗಳು ವರದಿಯಾಗಿವೆ.

ರಾಜ್ಯದಾದ್ಯಂತ ಉಷ್ಣ ಗಾಳಿ ಬೀಸುತ್ತಿದ್ದು, ಜನರು ಹೈರಾಣಾಗಿದ್ದಾರೆ. ಅದಿಲಾಬಾದ್‌, ವಾರಂಗಲ್‌,  ಹೈದರಾಬಾದ್‌,  ಮಹಬೂಬ್‌ನಗರ್‌, ನಿಜಾಮಾಬಾದ್‌ ಕರೀಂನಗರ್‌ ನಗರಗಳಲ್ಲಿ ಬಿಸಿಲಿನ ನರ್ತನ ಮುಂದುವರಿದೆ.  ಹೈದರಾಬಾದ್‌ನಲ್ಲಿ 44 ಡಿಗ್ರಿ ಮತ್ತು ತೆಲಂಗಾಣದ ನಲ್ಗೊಂಡ  ಜಿಲ್ಲೆಯಲ್ಲಿ ಗರಿಷ್ಠ 47 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದೆ ಎಂದು ಕಂದಾಯ ಕಾರ್ಯದರ್ಶಿ ಬಿ.ಆರ್‌. ಮೀನಾ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT