ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡಿಟರ್‌ ಹೆಸರಲ್ಲಿ ನಕಲಿ ಬಿಲ್‌!

ಕರ್ನಾಟಕ ವಿಶ್ವವಿದ್ಯಾಲಯ ಕುಲಪತಿ ಭ್ರಷ್ಟಾಚಾರ - (ನ್ಯಾ.ಬಿ.ಪದ್ಮರಾಜ್‌ ಸಮಿತಿ ವರದಿ-4)
Last Updated 11 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರಿ ಲೆಕ್ಕಪರಿ­ಶೋಧ­­­ಕರ ಹೆಸರಿ­ನಲ್ಲಿ ನಕಲಿ ಬಿಲ್‌್ ಸೃಷ್ಟಿ­­­ಸಿ­ರು­ವು­ದನ್ನು ಲೆಕ್ಕಪರಿ­ಶೋಧ­ಕರೇ ಪತ್ತೆ ಹಚ್ಚಿದ ಪ್ರಸಂಗವೂ ಕರ್ನಾಟಕ ವಿಶ್ವ­­­­­ವಿ­ದ್ಯಾ­ಲಯ­ದಲ್ಲಿ ನಡೆದಿದೆ. ಈ ಬಗ್ಗೆ ಕೂಡ ವಿಚಾರಣಾ ಆಯೋಗ ವಿಶ್ವ­ವಿದ್ಯಾ­ಲಯ­ವನ್ನು ತರಾಟೆಗೆ ತೆಗೆದುಕೊಂಡಿದೆ.

2011ರ ಮೇ 30ರಿಂದ ಜೂನ್‌ 1ರ ವರೆಗೆ ಯುಜಿಸಿ ತಜ್ಞರ ಸಮಿತಿ­ಯೊಂದು ಧಾರವಾಡದ ಕರ್ನಾ­ಟಕ ವಿಶ್ವ­­­ವಿದ್ಯಾಲಯಕ್ಕೆ ಭೇಟಿ ನೀಡಿತ್ತು. ಈ ಸಮಿ­­ತಿಯ ಆತಿಥ್ಯಕ್ಕಾಗಿ ವಿಶ್ವವಿದ್ಯಾಲ­ಯದ ಯೋಜನಾ ಮತ್ತು ಅಭಿವೃದ್ಧಿ ಅಧಿ­­ಕಾರಿ ಎಸ್‌.ಟಿ. ಬಾಗಲ­ಕೋಟೆ ಅವರು 2011ರ ಮೇ 20ರಂದು ₨ 18.07 ಲಕ್ಷ  ಮುಂಗಡವನ್ನು ವಿವಿ ಲೆಕ್ಕ­ಶೀರ್ಷಿಕೆ 1471ರಲ್ಲಿ ಮಂಜೂರು ಪಡೆದು­ಕೊಂಡಿದ್ದರು. ಈ ಪೈಕಿ ಖರ್ಚಾ­ಗದೇ  ಉಳಿದ ₨ 6.25 ಲಕ್ಷವನ್ನು 2011ರ­ ಆಗಸ್ಟ್ 24ರಂದು ವಿವಿ ನಿಧಿಗೆ ಮರಳಿಸಿದ್ದರು.

ವೆಚ್ಚವಾಗದೇ ಇರುವ ಹಣವನ್ನು ವಿವಿ ನಿಧಿಗೆ ಮರ­ಳಿ­ಸಲು 2 ತಿಂಗಳು ವಿಳಂಬ ಮಾಡಲಾಗಿತ್ತು. ಅಲ್ಲದೆ ವೆಚ್ಚ ಮಾಡಿದ ಹಣದ ವೋಚರ್‌ಗಳನ್ನು ಒಂದು ವರ್ಷ 10 ತಿಂಗಳ ನಂತರ ಹೊಂದಾ­ಣಿಕೆ ಮಾಡಲಾಗಿದೆ. ಯುಜಿಸಿ ಸಮಿತಿ ಸದಸ್ಯರಿಗಾಗಿ ಮಯೂರ ಆದಿತ್ಯ ರೆಸಾರ್ಟ್‌­ನಲ್ಲಿ ಕೊಠಡಿ ಕಾಯ್ದಿರಿಸಲಾಗಿತ್ತು. ಅಲ್ಲದೆ ಕೊಠಡಿ ಸಂಖ್ಯೆ 407 ಮತ್ತು 408ನ್ನು ಸರ್ಕಾರಿ ಲೆಕ್ಕ­ಪರಿ­ಶೋ­ಧಕರಿಗಾಗಿ ಕಾಯ್ದಿ­­ರಿ­­­ಸಿದ್ದು ಇದರ ಬಾಬ್ತು ₨ 77, 500 ವೆಚ್ಚ ಮಾಡಲಾಗಿದೆ ಎಂದು ವೋಚರ್‌­­ಗ­ಳನ್ನು ವಿವಿ ನಿಧಿಗೆ ಒಪ್ಪಿಸ­ಲಾ­ಗಿದೆ.

ಬಿಲ್‌ ನೋಡಿ ಅಚ್ಚರಿ: 2012–13ನೇ ಸಾಲಿನ ಲೆಕ್ಕ ಪರಿಶೋಧನೆ ನಡೆಸುತ್ತಿದ್ದ ಸರ್ಕಾರಿ ಲೆಕ್ಕಪರಿಶೋಧ­ಕ­ರಿಗೆ, ತಮ್ಮ ಹೆಸರಿನ­ಲ್ಲಿಯೇ ಹಣ ಖರ್ಚು ಮಾಡಿ ಅದಕ್ಕೆ ಸಂಬಂಧಿಸಿದ ವೋಚರ್‌ಗಳನ್ನು ಹಾಜರು­ಪಡಿ­ಸಿದ್ದು ಬೆರಗು ಮೂಡಿಸಿತು. ಯುಜಿಸಿ ತಜ್ಞರ ಸಮಿತಿ ವಿಶ್ವ­ವಿದ್ಯಾ­ಲಯಕ್ಕೆ ಭೇಟಿ ನೀಡು­ವುದಕ್ಕೂ ತಮಗೂ ಯಾವುದೇ ಸಂಬಂಧ­ವಿಲ್ಲ­ದಿ­ದ್ದ­ರೂ ಹಾಗೂ ತಾವು ಈ ಸಂದರ್ಭದಲ್ಲಿ ಭೇಟಿ ನೀಡದೇ ಇದ್ದರೂ ತಮ್ಮ ಹೆಸರಿ­ನಲ್ಲಿ ಬಿಲ್‌ ಪಾವತಿ ಆಗಿ­ರುವ ಬಗ್ಗೆ ಲೆಕ್ಕ ಪರಿ­ಶೋಧಕರು ಆಕ್ಷೇಪ ವ್ಯಕ್ತ­ಪಡಿಸಿದರು.

ಬಾರದ ಉತ್ತರ: ಸರ್ಕಾರಿ ಲೆಕ್ಕ ಪರಿಶೋಧಕರಾದ ಎಂ.ಪಿ.ಅನಿತಾ ಈ ಬಗ್ಗೆ ವಿಶ್ವ­ವಿದ್ಯಾ­ಲಯದ ಅಧಿಕಾರಿಗ­ಳಿಂದ ವಿವರಣೆ ಕೇಳಿದರೂ ಸೂಕ್ತ ಉತ್ತರ ಬಂದಿಲ್ಲ. ಆದ್ದರಿಂದ ಅನಿತಾ ಅವರು ಈ ಬಗ್ಗೆ ಮಹಾ ಲೆಕ್ಕ ನಿಯಂತ್ರ­ಕರಿಗೆ ದೂರು ಸಲ್ಲಿಸಿದ್ದಾರೆ. ಇದ­ಲ್ಲದೆ ವಿಶ್ವವಿದ್ಯಾಲಯದ ಕುಲಸಚಿವರಿಗೂ ಪತ್ರ ಬರೆದು ನಕಲಿ ಬಿಲ್‌ ಸೃಷ್ಟಿಗೆ ಕಾರಣ­ರಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಲೆಕ್ಕಪರಿಶೋಧಕರು ವಿಶ್ವವಿದ್ಯಾ­ಲ­ಯಕ್ಕೆ ಹಾಜ­ರಾಗಿ ಲೆಕ್ಕವನ್ನು ಪರಿ­ಶೋಧಿ­­­ಸುತ್ತಾರೆ ಎನ್ನುವುದು ಗೊತ್ತಿ­ದ್ದರೂ ಅವರ ಹೆಸರಿನಲ್ಲಿಯೇ ನಕಲಿ ಬಿಲ್‌ ಸೃಷ್ಟಿಸಿ ವಿಶ್ವವಿದ್ಯಾಲಯಕ್ಕೆ ನೀಡಿ­ರು­­­ವುದು ಯೋಜನಾ ಮತ್ತು ಅಭಿವೃದ್ಧಿ ಅಧಿ­­ಕಾರಿಗಳು ಹಾಗೂ ಹಣಕಾಸು ಅಧಿ­ಕಾ­­­ರಿ­ಗಳ ಜವಾಬ್ದಾರಿ ನಿರ್ವಹಣೆಯಲ್ಲಿ ತೀವ್ರ ನಿರ್ಲಕ್ಷ್ಯ­ವನ್ನು ತೋರಿಸುತ್ತದೆ ಎಂದು ಲೆಕ್ಕಪರಿಶೋಧ­ಕರು ಹೇಳಿದ್ದಾರೆ.

ಈ ಕುರಿತಂತೆ ಪದ್ಮರಾಜ್‌ ಸಮಿತಿ ವಿಚಾರಣೆ ನಡೆಸಿ­ದಾ­ಗಲೂ ವಿಶ್ವ­ವಿದ್ಯಾ­ಲ­­ಯದ ಸಂಬಂಧಿಸಿದ ಅಧಿಕಾರಿ­ಗ­ಳಿಂದ ಸೂಕ್ತ ಉತ್ತರ ಬಂದಿಲ್ಲ. ವಿಶ್ವವಿದ್ಯಾಲ­ಯದ ಅತಿಥಿ ಗೃಹದಲ್ಲಿಯೇ ಸಾಕಷ್ಟು ಕೊಠಡಿ­ಗಳು ಇದ್ದರೂ ಖಾಸಗಿ ಹೊಟೇಲ್‌­ಗಳಿಗೆ ಹಣ ವೆಚ್ಚ ಮಾಡಿರು­ವುದು ಸಮರ್ಥನೀಯವಲ್ಲ. ಅನಗತ್ಯ­ವಾಗಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡುವ ಮೂಲಕ ವಿಶ್ವ­ವಿದ್ಯಾ­ಲ­ಯಕ್ಕೆ ನಷ್ಟ ಉಂಟು ಮಾಡಲಾಗಿದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

‘ದೂರು ನೀಡಿದ್ದು ನಾವಷ್ಟೇ ಅಲ್ಲ’
ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಡಾ.ಎಚ್‌.ಬಿ.­ವಾಲಿ­ಕಾರ್‌ ಅವರ ವಿರುದ್ಧ ದೂರು ನೀಡಿದ್ದು  ನಾವು ನಾಲ್ಕು ಮಂದಿ ಮಾತ್ರ ಅಲ್ಲ. ವಿಶ್ವವಿದ್ಯಾಲಯದ ಕುಲ­ಸಚಿವರೇ ಕುಲಪತಿ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿ­ದ್ದರು. ಇದರ ಆಧಾರದಲ್ಲಿಯೇ ರಾಜ್ಯ­ಪಾಲರು ತನಿಖಾ ಆಯೋಗ ರಚಿಸಿದ್ದಾರೆ. ರಾಜ್ಯಪಾಲರ ಆದೇಶ­­ದಲ್ಲಿ ಇದನ್ನು ಉಲ್ಲೇಖಿ­ಸ­ಲಾಗಿದೆ ಎಂದು ಕೆ.ಎಸ್‌.­ಜಯಂತ್‌, ಈರೇಶ ಅಂಚಟಗೇರಿ, ಅರುಣ ಜೋಶಿ, ಡಾ. ರಘು ಅಕ­ಮಂಚಿ ಸ್ಪಷ್ಟಪಡಿಸಿದ್ದಾರೆ.

ಕುಲಸಚಿವರ ವಿರುದ್ಧ ಕುಲಪತಿ ದೂರು
ಕುಲಸಚಿವೆ ಡಾ.ಚಂದ್ರಮಾ ಕಣಗಲಿ ವಿರುದ್ಧ ಕುಲಪತಿ ಡಾ.ಎಚ್‌.ಬಿ.­ವಾಲಿ­ಕಾರ ಅವರು ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ದೂರು ಸಲ್ಲಿಸಿದ್ದಾರೆ. ‘ಚಂದ್ರಮಾ ಕಣಗಲಿ ಅವರು ಅಧಿಕಾರ ದುರುಪಯೋಗ ಮಾಡಿ­ಕೊಂಡಿ­ದ್ದಾರೆ.  ಪ್ರಕರಣಕ್ಕೆ ಸಂಬಂಧವೇ ಇಲ್ಲದ ವ್ಯಕ್ತಿಗಳ ಬಗ್ಗೆಯೂ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.

ರಾಜ್ಯಪಾಲರು ವಿಶ್ವವಿದ್ಯಾಲಯದಲ್ಲಿ ನಡೆದಿರುವ ಅಕ್ರಮ­­ಗಳ ಬಗ್ಗೆ ಕುಲಪತಿ ಮತ್ತು ಇತರರ ವಿರುದ್ಧ ದೂರು ನೀಡುವಂತೆ ಸೂಚಿ­ಸಿ­ದ್ದರೆ ಚಂದ್ರಮಾ ಅವರು ತಮಗೆ ಆಗದವರ ಹೆಸರುಗಳನ್ನು ಅದರಲ್ಲಿ ಸೇರಿಸಿ­ದ್ದಾರೆ’ ಎಂದು ವಾಲೀಕಾರ್‌ ಅವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ‘ಚಂದ್ರಮಾ ಕಣಗಲಿ ವಿರುದ್ಧದ ಆರೋಪಗಳ ಬಗ್ಗೆ ತನಿಖೆಗೆ ಸಿಂಡಿಕೇಟ್‌ ಉಪ ಸಮಿತಿ ರಚಿಸಲಾಗಿತ್ತು.

ಅದರಲ್ಲಿ ಶಂಕರಗೌಡ ಪಾಟೀಲ, ಎಲ್‌.ಕೆ. ಬೀರಗೌಡರ, ಡಾ.ಎನ್‌.ಆರ್‌. ಬಾಳೀಕಾಯಿ ಇದ್ದರು. ಲೋಕಾಯಕ್ತದಲ್ಲಿ ದೂರು ದಾಖಲಿಸುವಾಗ ಈ ನಾಲ್ವರ ಹೆಸರನ್ನೂ ವಿನಾಕಾರಣ ಸೇರಿಸಿದ್ದಾರೆ. ಆದ್ದರಿಂದ ಚಂದ್ರಮಾ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಕುಲಪತಿ ಶಿಫಾರಸು ಮಾಡಿದ್ದಾರೆ.

ನ್ಯಾಕ್‌ ಸಮಿತಿಗೆ ತಪ್ಪು ಮಾಹಿತಿ
ಅಕ್ಟೋಬರ್‌ 8ರಿಂದ 11ರವರೆಗೆ ವಿಶ್ವವಿದ್ಯಾಲಯಕ್ಕೆ ನ್ಯಾಕ್‌ ಸಮಿತಿ  ಭೇಟಿ  ನಿಗದಿಯಾಗಿತ್ತು. ಆದರೆ ಚಂದ್ರಮಾ ಕಣಗಲಿ ಅವರು ನ್ಯಾಕ್‌ ಸಮಿತಿ ಅಧ್ಯಕ್ಷ ಡಾ.ಲಕ್ಷ್ಮಣ ಚತುರ್ವೇದಿ ಅವರನ್ನು 98802 29505 ಸಂಖ್ಯೆಯ ಮೊಬೈಲ್‌ ಮೂಲಕ ಸಂಪರ್ಕಿಸಿ ‘ನ್ಯಾಕ್‌ ಸಮಿತಿ ಭೇಟಿ ಮುಂದೂಡುವಂತೆ ಕುಲಪತಿ ತಿಳಿಸಿದ್ದಾರೆ.

ಅದಕ್ಕಾಗಿ ತಾವು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡುವ ಅಗತ್ಯವಿಲ್ಲ’ ಎಂದು ಅನಧಿಕೃತವಾಗಿ ಹೇಳಿದ್ದಾರೆ ಎಂದು ವಾಲಿಕಾರ ಅವರು ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ತಾವು ಸ್ವತಃ ಕಚೇರಿ ದಾಖಲೆಗಳನ್ನು ಪರಿಶೀಲಿಸಿದ್ದು 98802 29505 ದೂರವಾಣಿ ಸಂಖ್ಯೆ ಚಂದ್ರಮಾ ಕಣಗಲಿ ಅವರಿಗೆ ಸೇರಿದ್ದು ಎಂದು ಅವರು ಹೇಳಿದ್ದಾರೆ.

(ಮುಂದುವರಿಯುವುದು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT