ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತ್ಮಹತ್ಯೆಗೆ ರೈತ ಯತ್ನ: ಮುಖಂಡರ ಸಾಂತ್ವನ

Last Updated 1 ಸೆಪ್ಟೆಂಬರ್ 2015, 10:22 IST
ಅಕ್ಷರ ಗಾತ್ರ

ಕೂಡ್ಲಿಗಿ: ಸಾಲ ಕೊಟ್ಟವರ ಕಾಟ ತಾಳ ಲಾರದೆ ರೈತನೊಬ್ಬ ಸೋಮವಾರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ತಾಲ್ಲೂಕಿನ ಕಸಾಪುರ ಗ್ರಾಮದಲ್ಲಿ ನಡೆದಿದೆ. ನಾಗಪ್ಪ ಆತ್ಮಹತ್ಯೆಗೆ ಯತ್ನಿಸಿದ ರೈತ. ಹೊಲದಲ್ಲಿ ವಿಷ ಸೇವಿಸಿದ್ದ ನಾಗಪ್ಪ ನನ್ನು ಅಕ್ಕ ಪಕ್ಕದ ಹೊಲದಲ್ಲಿದ್ದ ರೈತರು ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ತನ್ನ ಗ್ರಾಮದ ಖಾಸಗಿ ವ್ಯಕ್ತಿಯಿಂದ ₨ 60 ಸಾವಿರ ಸಾಲ ಪಡೆದಿದ್ದೆ. ಆದರೆ ಈಗಾಗಲೇ ಬಡ್ಡಿ ಅಸಲು ಸೇರಿ ಸುಮಾರು ₨ ೮೭ ಸಾವಿರ ಸಾಲ ಮರಳಿಸಿದ್ದೇನೆ. ಆದರೆ ಸಾಲ ಕೊಟ್ಟ ವ್ಯಕ್ತಿ ಇನ್ನೂ ನನಗೆ ಎರಡು ಲಕ್ಷ ಬಾಕಿ ಬರಬೇಕಾಗಿದ್ದು, ಕೂಡಲೆ ಕೊಡಬೇಕು, ಇಲ್ಲವಾದಲ್ಲಿ ನಿನ್ನ ಹೊಲವನ್ನು ನನ್ನ ಹೆಸರಿಗೆ ಬರೆದು ಕೊಡು ಎಂದು ಪೀಡಿಸುತ್ತಿದ್ದಾನೆ. ಇದರಿಂದ ಮನನೊಂದು ಸೋಮವಾರ ಬೆಳಿಗ್ಗೆ ಹೊಲದಲ್ಲಿ ವಿಷ ಸೇವಿಸಿದ್ದಾಗಿ ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಾಗಪ್ಪ ಪ್ರಜಾವಾಣಿಗೆ ತಿಳಿಸಿದ್ದಾನೆ.

ವಿಷಯ ತಿಳಿದ ರಾಜ್ಯ ರೈತ ಸಂಘದ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಂ. ಬಸವರಾಜ, ಎಚ್.ಎಂ.ಚಂದ್ರಯ್ಯ ಸ್ವಾಮಿ, ಭರ್ಮಪ್ಪ, ಕೈವಲ್ಯಾಪುರ ನಾಗರಾಜ, ಕೊಟ್ರೇಶಪ್ಪ, ಬಾಷಾಸಾಬ್ ಮುಂತಾದವರು ಆಸ್ಪತ್ರಗೆ ಭೇಟಿ ನೀಡಿ ರೈತನಿಗೆ ಸಾಂತ್ವನ ಹೇಳಿದ್ದಾರೆ.

ಕ್ರಮ ಕೈಗೊಳ್ಳಲು ತಹಶೀಲ್ದಾರ್ ಸೂಚನೆ: ಕಸಾಪುರ ರೈತ ವಿಷ ಸೇವಿಸಿ ಪಟ್ಟಣದ ಸರ್ಕಾರಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂಬ ವಿಷಯ ತಿಳಿದು ತಹಶೀಲ್ದಾರ್ ಎಲ್.ಕೃಷ್ಣಮೂರ್ತಿ ಆಸ್ಪತ್ರೆಗೆ ಭೇಟಿ ನೀಡಿ ಅರೋಗ್ಯ ವಿಚಾರಿಸಿದ್ದಾರೆ. ನಂತರ ಕೂಡ್ಲಿಗಿ ಸಿಪಿಐ ಜೆ.ರಮೇಶ ಅವರಿಗೆ ಪ್ರಕಣದ ಬಗ್ಗೆ ಪರಿಶಿಲಿಸುವಂತೆ ಸೂಚಿಸಿದ್ದಾರೆ.

ಕಾಲುವೆಗೆ ಸ್ನಾನಕ್ಕೆ ತೆರಳಿದ್ದ ವ್ಯಕ್ತಿ ಶವವಾಗಿ ಪತ್ತೆ
ಕಂಪ್ಲಿ:
ಸಮೀಪದ ಮೆಟ್ರಿ ಬಳಿಯ ಜವುಕು ಕ್ಯಾಂಪ್‌ನ ಹತ್ತಿರ ಹರಿಯುವ ತುಂಗಭದ್ರಾ ಬಲದಂಡೆ ಮೇಲ್ಮಟ್ಟದ ವಿತರಣಾ ನಾಲೆಯಲ್ಲಿ ಭಾನುವಾರ ತಡ ರಾತ್ರಿ ಪುರುಷನ ಶವ ಪತ್ತೆಯಾಗಿದೆ.

ಮೃತನನ್ನು ಹೊಸಪೇಟೆ ನಗರದ ಪ್ರಥಮ ದರ್ಜೆ ಗುತ್ತಿಗೆದಾರ ಮುರಳೀ ಧರರೆಡ್ಡಿ (51) ಎಂದು ಗುರುತಿಸಲಾ ಗಿದೆ. ವಿಷಯ ತಿಳಿದ ಕಂಪ್ಲಿ ಪೊಲೀಸರು ಎಚ್‌.ಎಲ್‌.ಸಿ ವಿತರಣಾ ನಾಲೆಯಲ್ಲಿ ತೇಲಿ ಬಂದ ಶವವನ್ನು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮರಣೋತ್ತರ ಪರೀಕ್ಷೆಗಾಗಿ ತಂದಿದ್ದಾರೆ. ಈ ಸಂದರ್ಭ ದಲ್ಲಿ ಶವದ ಚಹರೆ ಗುರುತಿಸಿದ ಪರಿ ಚಿತರು ಹೊಸಪೇಟೆಯಲ್ಲಿರುವ ಸಂಬಂ ಧಿಕರಿಗೆ ವಿಷಯ ತಿಳಿಸಿದ್ದಾರೆ.

ಮರಣೋತ್ತರ ಪರೀಕ್ಷೆ ನಂತರ ಮೃತ ದೇಹವನ್ನು ಸಂಬಂಧಿಕರಿಗೆ ಒಪ್ಪಿಸಲಾ ಯಿತು. ಈ ಕುರಿತು ಇಲ್ಲಿನ ಪೊಲೀಸ್ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ.

ಹೊಸಪೇಟೆಯ ತುಂಗಭದ್ರಾ ಬಲ ದಂಡೆ ಮೇಲ್ಮಟ್ಟದ ಕಾಲುವೆಗೆ ಭಾನು ವಾರ ಬೆಳಿಗ್ಗೆ ಸ್ನಾನಕ್ಕೆ ತೆರಳಿದಾಗ ಆಕಸ್ಮಿಕ ಈ ಘಟನೆ ನಡೆದಿದೆ. ಈ ಸಂಬಂಧ ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ಇಲ್ಲಿನ ಪೊಲೀಸರು ತಿಳಿಸಿದ್ದಾರೆ.

ಗುಡಿಸಲು ಭಸ್ಮ: ಎತ್ತುಗಳಿಗೆ ಗಾಯ
ಕುರುಗೋಡು:
ಆಕಸ್ಮಿಕವಾಗಿ ಬೆಂಕಿ ತಗುಲಿ ಗುಡಿಸಲು ಭಸ್ಮವಾದ ಘಟನೆ ಇಲ್ಲಿಗೆ ಸಮೀಪದ ಎರಿಂಗಳಿಗಿ ಗ್ರಾಮ ದಲ್ಲಿ ಭಾನುವಾರ ತಡರಾತ್ರಿ ಸಂಭವಿಸಿದೆ.

ಎರಿಂಗಳಿಗಿ ಗ್ರಾಮದ ಪರಶುರಾಮ ಎನ್ನುವ ವ್ಯಕ್ತಿಗೆ ಸೇರಿದ ಗುಡಿಸಲು.
ಘಟನೆಯಲ್ಲಿ ಎರಡು ಎತ್ತುಗಳಿಗೆ ಸುಟ್ಟ ಗಾಯಗಳಾಗಿವೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖ ಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT