ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದಾಯ ತೆರಿಗೆ ಇಲಾಖೆಯ ಹೊಸ ವೆಬ್‌ಸೈಟ್‌

Last Updated 21 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ತೆರಿಗೆ ಪಾವತಿದಾರರು ತೆರಿಗೆ ಮರು­ಪಾವತಿ ಮತ್ತು ಅದಕ್ಕೆ ಸಂಬಂ­ಧಿಸಿದ ಕಾರ್ಯಗಳು ಅಥವಾ ಪ್ಯಾನ್‌ ಕಾರ್ಡ್‌ ಪಡೆಯಲು ಅನುಕೂಲವಾಗುವಂತೆ ಆದಾಯ ತೆರಿಗೆ ಇಲಾಖೆಯು ಸುಧಾರಿತ ಏಕಗವಾಕ್ಷಿ ವ್ಯವಸ್ಥೆಯಡಿ ಹೊಸ ವೆಬ್‌ಸೈಟ್‌ ಅಭಿವೃದ್ಧಿ ಪಡಿಸಿದೆ.

ಹಣಕಾಸು ಸಚಿವ ಅರುಣ್‌ ಜೇಟ್ಲಿ ಸೋಮ­ವಾರ ಈ ವೆಬ್‌ಸೈಟ್‌ ಬಿಡುಗಡೆ ಮಾಡಲಿದ್ದಾರೆ.
ಈಗ ಚಾಲ್ತಿಯಲ್ಲಿರುವ ವೆಬ್‌­ಸೈಟ್‌ನ ಪರಿಷ್ಕೃತ ವೆಬ್‌ಸೈಟ್‌ (www.incometaxindia.gov.in)ಇದಾಗಿದೆ. ಇದು ಏಕಗವಾಕ್ಷಿ ವ್ಯವಸ್ಥೆ ಮೂಲಕ ಕಾರ್ಯನಿರ್ವಹಿ
ಸುತ್ತದೆ ಎಂದು ಆದಾಯ ತೆರಿಗೆ ಇಲಾಖೆ ಅಧಿ­ಕಾ­ರಿಗಳು ಹೇಳಿದ್ದಾರೆ.

ನೂತನ ವೆಬ್‌ಸೈಟ್‌ ಗ್ರಾಹಕರ ಸ್ನೇಹಿ­ಯಾಗಿದ್ದು ಒಂದೇ ಸಮಯದಲ್ಲಿ ಬಹು­ಸಂಖ್ಯೆಯ ಒತ್ತಡ ನಿಭಾಯಿ
ಸುವ ಸಾಮರ್ಥ್ಯ ಹೊಂದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT