ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನಂದಕರ ಸಮಯ

ಅಂಕುರ- 34
Last Updated 27 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ಸಾಮಾನ್ಯವಾಗಿ ಲೈಂಗಿಕ ಬಯಕೆಗಳನ್ನು ತೃಪ್ತಿ ಪಡಿಸಿಕೊಳ್ಳುವ ಅತಿ ಸಹಜ ಮತ್ತು ಆರೋಗ್ಯವಂತ ಮಾರ್ಗವೆಂದರೆ ಹಸ್ತಮೈಥುನ.
ತಮ್ಮನ್ನು ತಾವೇ ಪ್ರೀತಿಸುತ್ತ, ಅಕ್ಕರೆಯ ಆರೈಕೆ ನೀಡುತ್ತ, ಸುಖದ ಪರಾಕಾಷ್ಠೆಗೆ ಸಾಗುವ ಈ ಪ್ರಕ್ರಿಯೆ ಆನಂದವನ್ನು ನೀಡುವಂಥದ್ದು. ಮಾನಸಿಕವಾಗಿ ಮತ್ತು ದೈಹಿಕವಾಗಿ ನಿರಾಳವೆನಿಸುವ ಅನುಭವ ನೀಡುವಂಥದ್ದು.

ಕೆಲವರು ತಮ್ಮ ಬಯಕೆಗಳ ತೃಪ್ತಿಗಾಗಿ ಕಾಲ್ಪನಿಕ ಲೋಕಕ್ಕೆ ಜಾರುತ್ತಾರೆ. ಜಾರಕಗಳನ್ನು ಬಳಸುತ್ತಾರೆ. ಕೆಲವೊಬ್ಬರು ಸ್ಖಲನ ಸಮೀಪಿಸಿದಂತೆಲ್ಲ ಸುಮ್ಮನಾಗುತ್ತಾರೆ. ಉದ್ರೇಕದ ಉಬ್ಬರ ಇಳಿದ ನಂತರ ಮತ್ತೆ ಸುಖದಾಟದಲ್ಲಿ ತೊಡಗಿಸಿಕೊಳ್ಳುತ್ತಾರೆ. ಸ್ಖಲನವನ್ನು ಮುಂದೂಡತ್ತಲೇ ಸುಖದ ಪರಾಕಾಷ್ಠೆಯನ್ನು ತಲುಪುವ ತಂತ್ರ ಅದು. ಆದರೆ ಇದು ಸಾಮಾನ್ಯವಾಗಿ ಸರ್ವರಿಗೂ ಅನ್ವಯವಾಗುವ ತಂತ್ರವಲ್ಲ ಎನ್ನುವುದೂ ನೆನಪಿನಲ್ಲಿರಲಿ.

ಕೆಲವರು ಸುಖಾನುಭವವನ್ನು ಹೊಂದುವ ಭರದಲ್ಲಿ ಸಾಮಾಗ್ರಿಗಳನ್ನೂ ಬಳಸುತ್ತಾರೆ. ಮೂತ್ರನಾಳದಲ್ಲಿ ಬಾಲ್‌ ಪಾಯಿಂಟ್‌ಗಳನ್ನು ತೂರಿಸುವುದು, ತಂತಿ, ಕೆಲವು ಕಂಪಿಸುವ ಸೂಕ್ಷ್ಮಯಂತ್ರಗಳನ್ನೂ ಬಳಸುತ್ತಾರೆ. ಇಂಥ ಕೃತ್ಯಗಳು ಶಾಶ್ವತವಾಗಿ ಹಾನಿಯುಂಟಾಗಬಹುದು.   ತೀವ್ರತರನಾದ ಗಾಯವೂ ಆಗಬಹುದು.

ಮುಷ್ಟಿ ಮೈಥುನ: ಸಾಮಾನ್ಯವಾಗಿ ಭಾರತೀಯ ಪುರುಷರಲ್ಲಿ ಕಾಣಿಸಿಕೊಳ್ಳುವ ಅಭ್ಯಾಸವೆಂದರೆ ಮುಷ್ಠಿಮೈಥುನ. ಮುಷ್ಟಿಯಲ್ಲಿ ಶಿಶ್ನವನ್ನು ಹಿಡಿದು, ಮುಂದೊಗಲು ಹಿಂದೆ ಮುಂದೆ ಚಲಿಸುವಂತೆ ಮಾಡುವುದಾಗಿದೆ. ಅವರವರ ಅನುಕೂಲ ಮತ್ತು ಆನಂದಕ್ಕೆ ಅನುಸಾರವಾಗಿ ವೇಗ ಬದಲಾಗುತ್ತದೆ.

ಕೊಳಲಿನ ಹಿಡಿತ: ಜನನಾಂಗದ ಮುಂದೊಗಲನ್ನು ಹಿಂದಕ್ಕೆ ಸರಿಸಿ, ತೋರು ಬೆರಳು ಹಾಗೂ ಹೆಬ್ಬೆರಳಿನಿಂದ ಶಿಶ್ನದ ತುದಿಯನ್ನು ಕೊಳಲಿನಂತೆ ಹಿಡಿದು ಜಿಗುಟುವುದು.

ಉಜ್ಜುವುದು: ಸಮತಟ್ಟಾದ ನೆಲದ ಮೇಲೆ (ಮಂಚ, ಹಾಸಿಗೆ ಯಾವುದಾದರೂ ಸರಿ) ಬೆನ್ನು ಮೇಲೆ ಮಾಡಿಕೊಂಡು ಮಲಗಿ, ಶಿಶ್ನವನ್ನು ಉಜ್ಜುವುದು. ಬಹುತೇಕ ಜನರು ತಲೆದಿಂಬನ್ನು ಘರ್ಷಣೆಗೆ ಬಳಸುತ್ತಾರೆ.

ಮಸಾಜ್‌: ಕೆಲವರು ತಮ್ಮ ಜನನಾಂಗವನ್ನು, ವೃಷಣಗಳನ್ನು, ಶಿಶ್ನದ ಮೇಲಿನ ಚರ್ಮವನ್ನು ಒರಟೊರಟಾಗಿ ಮಸಾಜ್‌ ಮಾಡುತ್ತಾರೆ.
ಎರಡೂ ಕೈಗಳ ಬಳಕೆ: ಕೆಲವು ಪುರುಷರು ತಮ್ಮೆರಡೂ ಕೈಗಳನ್ನು ಮುಷ್ಠಿಮೈಥುನಕ್ಕೆ ಬಳಸುತ್ತಾರೆ. ಇನ್ನೂ ಕೆಲವರು ಒಂದು ಕೈಯಿಂದ ವೃಷಣಗಳನ್ನು ಸವರುವುದು, ಎದೆಯನ್ನು ಸವರಲು ಬಳಸಿಕೊಳ್ಳುತ್ತಾರೆ. ಬಿರುಸಾದ ಉದ್ರೇಕಕ್ಕೆ ಇಂಥ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾರೆ.

ಸ್ಥಾಯಿ ಭಾವ: ಸಂಭೋಗದ ಅನುಭವವನ್ನೇ ಹೊಂದಲು ಕೆಲವರು ತಮ್ಮ ಕೈಯಿಂದ ಚಲನೆಯನ್ನು ನಿಯಂತ್ರಿಸುತ್ತಲೇ ಸ್ಥಾಯಿಭಾವವನ್ನು ಹೊಂದುತ್ತಾರೆ.
ಡಿವೈಸ್‌ ಬಳಕೆ: ಮಹಿಳೆಯರು ಹಸ್ತಮೈಥುನಕ್ಕೆ ಬಳಸುವ ಡಿವೈಸ್‌ಗಳನ್ನೇ ಸಾಮಾನ್ಯವಾಗಿ ಪುರುಷರೂ ಬಳಸುತ್ತಾರೆ. ಕಂಪನ ಹಾಗೂ ಸಂವೇದನೆಗೆ ಅನುಕೂಲವಾಗುವಂಥ ಹಲವಾರು ಡಿವೈಸ್‌ಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ.

ಕಾಯಮಣಿತ: ಕೆಲವು ಪುರುಷರು ತಮ್ಮ ಶಿಶ್ನದವರೆಗೂ ಬಾಗುವಷ್ಟು ಸರಳ ಕಾಯವನ್ನು ಹೊಂದಿರುತ್ತಾರೆ. ಅವರು ಬಿಲ್ಲಿನಂತೆ ಬಾಗಿ, ಶಿಶ್ನದ ತುದಿಯನ್ನು ತುಟಿ ಹಾಗೂ ನಾಲಗೆಯಿಂದ ಸವರುತ್ತ ಸಂತೋಷಿಸುತ್ತಾರೆ.
ಒತ್ತಡ: ಇದೊಂದು ವಿವಾದಾಸ್ಪದ ತಂತ್ರವಾಗಿದೆ. ಸ್ಖಲನಕ್ಕೆ ಮುನ್ನ ಗುದದ್ವಾರ ಹಾಗೂ ಶಿಶ್ನದ ನಡುವಿನ ಜಾಗದ ಮೇಲೆ ನಿಧಾನವಾಗಿ ಒತ್ತಡ ಹೇರಿದರೆ, ವೀರ್ಯಾಣುವು ಹಿಮ್ಮುಖವಾಗಿ ಚಲಿಸಿ, ಮೂತ್ರಕೋಶಕ್ಕೆ ಸಾಗುವುದು. ವೀರ್ಯದ ಹಿಮ್ಮುಖ ಚಲನೆಗೆ ಇದು ಕಾರಣವಾಗುವುದು.

ಪರಸ್ಪರ ಹಸ್ತಮೈಥುನ: ಸಂಗಾತಿಗಳಿಬ್ಬರು ಸಂಭೋಗವಿಲ್ಲದೆ ಸುಖದ ಪರಾಕಾಷ್ಠೆಯನ್ನು ತಲುಪುವ ತಂತ್ರವಿದು. ಕನ್ಯತ್ವವನ್ನು ಉಳಿಸಿಕೊಳ್ಳಲು ಇಲ್ಲವೇ ಗರ್ಭಧಾರಣೆ ತಡೆಯಲು, ಶಿಶ್ನ ಮತ್ತು ಯೋನಿಯ ಸಂಪರ್ಕವಿಲ್ಲದೇ ಕೈಗಳನ್ನು ಬಳಸಿ ಪರಸ್ಪರ ಲೈಂಗಿಕ ಸಂತೋಷ ಪಡುವುದು ಈ ಬಗೆಯ ಮೈಥುನದ ಉದ್ದೇಶವಾಗಿರುತ್ತದೆ.

ಸಂಪರ್ಕವಿಲ್ಲದ ಪರಸ್ಪರ ಹಸ್ತಮೈಥುನ: ಇಬ್ಬರು ಜೊತೆಗಿದ್ದು, ಪರಸ್ಪರ ದೈಹಿಕ ಸಂಪರ್ಕಕ್ಕೆ ಬರದೇ ಸಂತೋಷಿಸುವುದು
ಪರಸ್ಪರ: ಇಬ್ಬರು ಜೊತೆಗಿದ್ದು ಪರಸ್ಪರ ಒಟ್ಟೊಟ್ಟಿಗೆ ಅಥವಾ ಒಬ್ಬರ ನಂತರ ಇನ್ನೊಬ್ಬರು ಹಸ್ತಮೈಥುನದಲ್ಲಿ ತೊಡಗುವುದು.
ಮುನ್ನಲಿವು: ಪರಸ್ಪರ ಹಸ್ತಮೈಥುನವು ಕ್ರಮೇಣ ಮುನ್ನಲಿವಿನ ರೂಪ ತಾಳಿ, ಅಂತಿಮವಾಗಿ ಸಂಭೋಗದಲ್ಲಿಯೇ ಕೊನೆಗೊಳ್ಳುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.

ವಯಸ್ಸು ಮತ್ತು ಲೈಂಗಿಕತೆ
ಎಷ್ಟು ಸಲ ಹಸ್ತಮೈಥುನದಲ್ಲಿ ತೊಡಗಿಸಿಕೊಳ್ಳಬಹುದು ಎನ್ನುವುದು ವೈಯಕ್ತಿಕ ಸಂಯಮದ ಮೇಲೆ ಅವಲಂಬಿಸಿರುತ್ತದೆ. ಲೈಂಗಿಕ ಉದ್ರೇಕ, ಲೈಂಗಿಕ ಹವ್ಯಾಸಗಳು, ಹಾರ್ಮೋನಿನ ಸ್ರವಿಸುವಿಕೆಯ ಮಟ್ಟ, ಹಸ್ತಮೈಥುನದ ಬಗ್ಗೆ ಸಾಂಸ್ಕೃತಿಕ ನಿಲುವು, ಧೋರಣೆ ಇವೆಲ್ಲವೂ ಒಬ್ಬ ವ್ಯಕ್ತಿಯ ಅಭ್ಯಾಸವನ್ನು ನಿರ್ಧರಿಸುವಲ್ಲಿಯ ಪ್ರಮುಖ ಅಂಶಗಳಾಗಿವೆ. ಇಂಗ್ಲೆಂಡ್‌ನ ಪುರುಷರಲ್ಲಿ 16ರಿಂದ 44 ವರ್ಷ ವಯೋಮಾನದವರಲ್ಲಿ ಶೇ 95ರಷ್ಟು ಪುರುಷರು, ಶೇ 71ರಷ್ಟು ಮಹಿಳೆಯರು ವಾರಕ್ಕೆ ಸರಾಸರಿ 23 ಸಲದಷ್ಟು ಹಸ್ತಮೈಥುನದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಬ್ರಿಟಿಷ್‌ ನ್ಯಾಶ್‌ನಲ್‌ ಪ್ರೊಬ್ಯಾಬ್ಲಿಟಿ ಸರ್ವೆ ತಿಳಿಸಿದೆ.

ಉಪಯೋಗ: 2009ರಲ್ಲಿ ಆಸ್ಟ್ರೇಲಿಯಾದಲ್ಲಿ ಕೈಗೊಂಡ ಅಧ್ಯಯನವೊಂದು ಹಸ್ತಮೈಥುನದಿಂದ ಗರ್ಭಧಾರಣೆಗೆ ಅನುಕೂಲವಾಗುತ್ತದೆ ಎಂದು ಹೇಳಿದೆ. ಹಳೆಯ ವೀರ್ಯಾಣು ಹೊರಚೆಲ್ಲುವುದರಿಂದ ಹೊಸದಾಗಿ ಹುಟ್ಟುವ ವೀರ್ಯಾಣುವು ಮಿಲನದ ಸಂದರ್ಭದಲ್ಲಿ ಸಂಗಾತಿಯನ್ನು ಪ್ರವೇಶಿಸಿ, ಗರ್ಭಧಾರಣೆಯ ಸಾಧ್ಯತೆ ಹೆಚ್ಚುತ್ತದೆ ಎಂದು ಹೇಳಿದೆ.

ವೈದ್ಯಕೀಯವಾಗಿಯೂ ಹಸ್ತಮೈಥುನದಿಂದ ಸಾಕಷ್ಟು ಲಾಭಗಳಿವೆ. 
* ಖಿನ್ನತೆಯಿಂದ ದೂರಮಾಡಿ,  ಆತ್ಮವಿಶ್ವಾಸವೂ ಹೆಚ್ಚಿಸುತ್ತದೆ.
* ಒಬ್ಬ ಸಂಗಾತಿಗೆ ಹೆಚ್ಚಿನ ಲೈಂಗಿಕ ಬಯಕೆಗಳಿದ್ದರೆ ಅವರನ್ನು ತೃಪ್ತಿ ಪಡಿಸಲು ಅನುಕೂಲವಾಗುತ್ತದೆ.
* ಪರಸ್ಪರ ಹಸ್ತಮೈಥುನದಿಂದ ಅವರ ಪರಮಾನಂದದ ಬಿಂದುಗಳನ್ನು ಅರ್ಥೈಸಿಕೊಳ್ಳುವಲ್ಲಿ ಸಹಾಯಕವಾಗುತ್ತದೆ.
* ರಕ್ತನಾಳಗಳಲ್ಲಿನ ಊತವನ್ನು ನಿವಾರಿಸಿ, ಸಹಜ ಸಾಮಾನ್ಯವಾದ ಉಸಿರಾಟಕ್ಕೆ ಅನುವು ಮಾಡಿಕೊಡುತ್ತದೆ.
* ಆಸ್ಟ್ರೇಲಿಯಾದ ಕ್ಯಾನ್ಸರ್ ಕೌನ್ಸಿಲ್‌ ಹಸ್ತಮೈಥುನದಿಂದ ವೃಷಣದ ಕ್ಯಾನ್ಸರ್‌ ಸಾಧ್ಯತೆ ಕಡಿಮೆಯಾಗುವುದೆಂದು ತಿಳಿಸಿದೆ.

ಇತ್ತೀಚಿನ ನಂಬಿಕೆಗಳ ಪ್ರಕಾರ ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾದವರೂ ಚಟುವಟಿಕೆಯ ಜೀವನ ನಿರ್ವಹಿಸಬೇಕು. ಹೃದಯಾಘಾತದ ನಂತರ ಲೈಂಗಿಕಕ್ರಿಯೆಗಳಾದ ಸಂಭೋಗ ಹಾಗೂ ಹಸ್ತಮೈಥುನದಲ್ಲಿ ನಿರತರಾಗಬೇಕು. ಇದರಿಂದಾಗಿ ರಕ್ತ ಸಂಚಾರ ಕ್ರಮೇಣವಾಗಿ ಸರಾಗವಾಗುತ್ತದೆ. ರಕ್ತದ ಏರೊತ್ತಡವನ್ನು ನಿಯಂತ್ರಿಸುತ್ತದೆ.

ಅಪಾಯಗಳು: ಅತಿಯಾದ ಹಸ್ತಮೈಥುನದ ಅಭ್ಯಾಸದಿಂದ ಕೆಲವು ಅಪಾಯಗಳೂ ಇವೆ. ಶಿಶ್ನ ಬಾಗಬಹುದು. ಮೊಂಡು ಎನಿಸಬಹುದು. ಶಿಶ್ನದಲ್ಲಿ ಫ್ರ್ಯಾಕ್ಷರ್‌ ಕಾಣಿಸಿಕೊಳ್ಳಬಹುದು. ಬಿರುಸುತನ, ಬಿರುಕು ಕಾಣಿಸಿಕೊಳ್ಳಬಹುದು. ಅತಿ ವಿರಳವಾಗಿ ಮೊಂಡಾದಂತೆ ಹಾಗೂ ಬಾಗಿದಂತೆಯೂ ಆಗಬಹುದು. ಸ್ತ್ರೀ ಪುರುಷರಿಬ್ಬರೂ ಪರಸ್ಪರ ಹಸ್ತಮೈಥುನದಲ್ಲಿ ತೊಡಗಿದಾಗ, ವೀರ್ಯಾಣುವು ಯೋನಿಯ ಸಂಪರ್ಕಕ್ಕೆ ಬಂದರೆ ಮಾತ್ರ ಗರ್ಭಧಾರಣೆಯಾಗಬಹುದು.

ಅತಿಕಾಮ: ಕೆಲವೊಮ್ಮೆ ಹಸ್ತಮೈಥುನವು ಗೀಳಾಗಿ ಪರಿವರ್ತನೆಯಾಗಬಹುದು. ಆಗ ಅತಿಕಾಮಿಯಂತೆ ವರ್ತಿಸಬಹುದು.
ಆತಂಕ: ಹಸ್ತಮೈಥುನದ ಬಗ್ಗೆ ಇರುವ ಮೌಢ್ಯಗಳಿವೆ. ಮುಷ್ಠಿಮೈಥುನದ ಮೂಲಕ ವೀರ್ಯನಾಶವಾದರೆ ಬುದ್ಧಿ ಭ್ರಮಣೆಯಾಗುತ್ತದೆ. ದೃಷ್ಟಿ ಮಂದವಾಗುತ್ತದೆ. ನರದೌರ್ಬಲ್ಯ ಉಂಟಾಗುತ್ತದೆ. ಹಸಿವು ಹಿಂಗಿ ಹೋಗುತ್ತದೆ. ಆದರೆ ಇವೆಲ್ಲವೂ ಮಿಥ್ಯಗಳಾಗಿವೆ. ಮಾಹಿತಿಗೆ: info@manipalankur.com (99450 48833)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT