ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಫ್ಘಾನಿಸ್ತಾನ ತಾಲಿಬಾನ್‌ ಸಂಘಟನೆಯಿಂದ ಖಂಡನೆ

Last Updated 17 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಕಾಬೂಲ್‌ (ಐಎಎನ್‌ಎಸ್‌): ಪೆಶಾವರದ ಸೈನಿಕ ಶಾಲೆಯ ಮೇಲೆ ದಾಳಿ ನಡೆಸಿ 148 ಮಂದಿಯನ್ನು ಹತ್ಯೆ ಮಾಡಿರುವ ಘಟನೆಯನ್ನು ಆಪ್ಘಾನಿಸ್ತಾನದ ತಾಲಿಬಾನ್‌ ಸಂಘಟನೆ ತೀವ್ರವಾಗಿ ಖಂಡಿಸಿದೆ. ದುರಂತದ ಬಗ್ಗೆ ಆತಂಕ ವ್ಯಕ್ತಪಡಿಸಿರುವ ತಾಲಿಬಾನ್‌ ಸಂಘಟನೆಯ ವಕ್ತಾರ ಜಬಿವುಲ್ಲಾ ಮುಜಾಹೀದ್‌, ‘ಸತ್ತವರ  ಸಂಬಂಧಿಕರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ಕರುಣಿಸಲಿ’ ಎಂದು ಹಾರೈಸಿದ್ದಾನೆ.

ಮುಗ್ಧ ಮಕ್ಕಳು, ಮಹಿಳೆಯರನ್ನು ಉದ್ದೇಶ ಪೂರ್ವಕವಾಗಿ ಹತ್ಯೆ ಮಾಡಿರುವುದು ಇಸ್ಲಾಂ ಧರ್ಮಕ್ಕೆ ವಿರುದ್ಧವಾಗಿದೆ. ಪ್ರತಿಯೊಂದು ಇಸ್ಲಾಮಿಕ್ ಪಕ್ಷ ಮತ್ತು ಸರ್ಕಾರ ಇದನ್ನು ಗಂಭೀರ­ವಾಗಿ ಪರಿಗಣಿಸುತ್ತದೆ ಎಂದಿದ್ದಾನೆ.

ಅಮಾಯಕರು ಮತ್ತು ಮಕ್ಕಳನ್ನು ಹತ್ಯೆ ಮಾಡುವುದನ್ನು ಆಫ್ಘಾನಿಸ್ತಾನ್‌ ತಾಲಿಬಾನ್‌ ಸಂಘಟನೆ ಸದಾ ಖಂಡಿಸುತ್ತದೆ ಎಂದು  ಹೇಳಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT