ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಫ್ರಿಕಾ ಸವಾಲಿನ ಮೊತ್ತ

Last Updated 18 ಡಿಸೆಂಬರ್ 2014, 19:59 IST
ಅಕ್ಷರ ಗಾತ್ರ

ಸೆಂಚೂರಿಯನ್‌ (ಎಎಫ್‌ಪಿ): ನಾಯಕ ಹಾಶಿಮ್‌ ಆಮ್ಲಾ ದ್ವಿಶತಕ ಮತ್ತು ಎ.ಬಿ. ಡಿವಿಲಿಯರ್ಸ್‌ ಅವರ ಶತಕದ ಬಲದಿಂದ ದಕ್ಷಿಣ ಆಫ್ರಿಕಾ ತಂಡ ಇಲ್ಲಿ ನಡೆಯುತ್ತಿರುವ ವೆಸ್ಟ್‌ ಇಂಡೀಸ್‌ ವಿರುದ್ಧದ ಮೊದಲ ಟೆಸ್ಟ್‌ ಕ್ರಿಕೆಟ್‌ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಸವಾಲಿನ ಮೊತ್ತ ಕಲೆ ಹಾಕಿದೆ.

ಇಲ್ಲಿನ ಸೂಪರ್‌ ಸ್ಪೋರ್ಟ್‌ ಪಾರ್ಕ್‌ ಕ್ರೀಡಾಂಗಣದಲ್ಲಿ ಬುಧವಾರ ಆರಂಭವಾದ ಪಂದ್ಯದಲ್ಲಿ ಟಾಸ್‌ ಗೆದ್ದ ಪ್ರವಾಸಿ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಈ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡ ಆತಿಥೇಯರು 140.3 ಓವರ್‌ಗಳಲ್ಲಿ ಐದು ವಿಕೆಟ್‌ಗೆ 552 ರನ್‌ ಗಳಿಸಿ ಡಿಕ್ಲೇರ್ಡ್‌ ಮಾಡಿಕೊಂಡಿದೆ.

371ಎಸೆತಗಳನ್ನು ಎದುರಿಸಿದ ಆಮ್ಲಾ 22 ಬೌಂಡರಿ ಸೇರಿದಂತೆ 208 ರನ್‌ ಬಾರಿಸಿ ತಂಡ ಬೃಹತ್‌ ಮೊತ್ತ ಕಲೆ ಹಾಕಲು ನೆರವಾದರು. ಡಿವಿಲಿಯರ್ಸ್‌ ಮತ್ತು ಆಮ್ಲಾ ನಾಲ್ಕನೇ ವಿಕೆಟ್‌ಗೆ 308 ರನ್‌ಗಳ ಜೊತೆಯಾಟವಾಡಿದರು.

ಸಂಕ್ಷಿಪ್ತ ಸ್ಕೋರು: ದಕ್ಷಿಣ ಆಫ್ರಿಕಾ ಮೊದಲ ಇನಿಂಗ್ಸ್‌ 140.3 ಓವರ್‌ಗಳಲ್ಲಿ 552ಕ್ಕೆ5. (ಅಲ್ವಿರೊ ಪೀಟರಸನ್‌ 27, ಹಾಶಿಮ್‌ ಆಮ್ಲಾ 208, ಎ.ಬಿ. ಡಿವಿಲಿಯರ್ಸ್‌ 152, ಸ್ಟಿಯನ್‌ ವಾನ್ ಜಲ್‌ 101, ಕ್ವಿಂಟನ್‌ ಡಿ ಕ್ಲಾಕ್‌ ಔಟಾಗದೆ 18; ಕೆಮರ್‌ ರೋಚ್‌ 52ಕ್ಕೆ2).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT