ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಯತಪ್ಪಿದ ಕತ್ರಿನಾಗೆ ನೋವು

ಪಂಚರಂಗಿ
Last Updated 22 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಫಿತೂರ್‌ ಸಿನಿಮಾ ಚಿತ್ರೀಕರಣದ ವೇಳೆ ಎರಡನೇ ಬಾರಿ ರಣಬೀರ್‌ ಕಪೂರ್‌ನ ಕನಸಿನ ರಾಣಿ ಕತ್ರಿನಾ ಕೈಫ್‌ ಅಪಘಾತಕ್ಕೀಡಾಗಿದ್ದಾರೆ. ಅಭಿಷೇಕ್‌ ಕಪೂರ್‌ ನಿರ್ದೇಶಿಸುತ್ತಿರುವ ‘ಫಿತೂರ್‌’ ಚಿತ್ರದಲ್ಲಿ ಕತ್ರಿನಾ ಕೈಫ್‌ ಕುದರೆ ಸವಾರಿ ಮಾಡುವ ದೃಶ್ಯವಿದೆ. ಈ ದೃಶ್ಯ ಚಿತ್ರೀಕರಿಸುವಾಗ ಕತ್ರಿನಾ ಏರಿದ್ದ ಕುದುರೆ ನಿಯಂತ್ರಣ ತಪ್ಪಿದ್ದರಿಂದ ಅಪಘಾತವಾಯಿತು.

ನಿಯಂತ್ರಣ ತಪ್ಪಿ ಕುದುರೆ ಮೇಲಿನಿಂದ ಅರ್ಧ ದೇಹ ಕೆಳಗೆ ಬಿದ್ದರೂ, ಧೈರ್ಯ ಕಳೆದುಕೊಳ್ಳದ ‘ಕ್ಯಾಟ್‌’ ಮತ್ತೆ ಕುದುರೆ ಏರಿ ದೃಶ್ಯವನ್ನು ಪೂರ್ಣಗೊಳಿಸಿದ್ದಾರೆ. ಆದರೆ ಚಿತ್ರೀಕರಣ ಮುಗಿದ ಬಳಿಕ ಅವರ ಬೆನ್ನು ಹಾಗೂ ಕುತ್ತಿಗೆಯಲ್ಲಿ ನೋವು ಕಾಣಿಸಿಕೊಂಡಿದೆ ಎಂದು ಚಿತ್ರ ತಂಡದ ಮೂಲಗಳಿಂದ ತಿಳಿದುಬಂದಿದೆ. ‘ಫಿತೂರ್‌’ ಸಿನಿಮಾ ಚಿತ್ರೀಕರಣ ಪ್ರಾರಂಭವಾದಾಗಿನಿಂದ ಇದು ಎರಡನೇ ಬಾರಿ ಕತ್ರಿನಾ ಅಪಘಾತಕ್ಕೆ ಒಳಗಾಗಿರುವುದು.

ಕಳೆದ ಮಾರ್ಚ್‌ನಲ್ಲಿ ಕಾರು ಚಾಲನೆಯ ದೃಶ್ಯದ ಚಿತ್ರೀಕರಣದ ವೇಳೆ ಕಾರು ಗೋಡೆಗೆ ಡಿಕ್ಕಿ ಹೊಡೆದಿತ್ತು. ಕಾರಿನ ಡೋರ್‌ ಸರಿಯಾಗಿ ಹಾಕದೇ ಇದ್ದುದರಿಂದ ಆ ಅಪಘಾತ ಸಂಭವಿಸಿತ್ತು. ಅದೃಷ್ಟವಶಾತ್‌ ಅವರಿಗೆ ಯಾವುದೇ ಗಾಯಗಳಾಗಿರಲಿಲ್ಲ. ಕುದುರೆಯಿಂದ ಆಯತಪ್ಪಿದ ನೋವು ನೀಗಿಕೊಳ್ಳಲು ಒಂದು ದಿನ ವಿಶ್ರಾಂತಿ ತೆಗೆದುಕೊಳ್ಳುವಂತೆ ನಿರ್ದೇಶಕರು ತಿಳಿಸಿದ್ದಾರೆ.  ಈ ಚಿತ್ರದಲ್ಲಿ ರೇಖಾ, ಅದಿತ್ಯ ರಾಯ್ ಕಪೂರ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT