ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಯೋಗ ರದ್ದತಿಗೆ ಎಚ್‌ಡಿಕೆ ಒತ್ತಾಯ

Last Updated 5 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ತನಿಖಾ ಆಯೋಗಗಳು ಕೊಡುವ ವರದಿಗಳ ಮೇಲೆ ಈ ಸರ್ಕಾ­ರಕ್ಕೆ ವಿಶ್ವಾ­ಸವೇ ಇಲ್ಲ. ಹೀಗಾಗಿ ಅರ್ಕಾವತಿ ಡಿನೋಟಿ­ಫಿ­ಕೇ­ಷನ್‌ ಅಕ್ರಮ ಸಂಬಂಧ ತನಿಖೆ ನಡೆ­ಸಲು ನೇಮಿ­ಸಿರುವ ನ್ಯಾಯಮೂರ್ತಿ ಎಚ್‌.ಎಸ್‌.­ಕೆಂಪಣ್ಣ ನೇತೃತ್ವದ ಆಯೋಗವನ್ನು  ರದ್ದು­ಪಡಿಸಬೇಕು’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಗುರುವಾರ ಇಲ್ಲಿ ಆಗ್ರಹಪಡಿಸಿದರು.

‘ಜಿ–ಕೋಟಾ ನಿವೇಶನಗಳ ಅಕ್ರಮ ಹಂಚಿಕೆ ಸಂಬಂಧ ತನಿಖೆ ನಡೆಸಿದ್ದ ನ್ಯಾಯಮೂರ್ತಿ ಪದ್ಮ­ರಾಜ್‌  ಆಯೋ­ಗದ ವರದಿಯನ್ನೇ ತಿರ­ಸ್ಕರಿಸಿರುವ ಮುಖ್ಯಮಂತ್ರಿ ಸಿದ್ದ­ರಾಮಯ್ಯ ಅವರು, ಇನ್ನು ತಮ್ಮ ರಕ್ಷಣೆ ಸಲುವಾಗಿ ರಚಿ­ಸಿ­ಕೊಂಡಿರುವ ಕೆಂಪಣ್ಣ ಆಯೋ­ಗದ ವರದಿ­ಯನ್ನು ಅನು­ಷ್ಠಾನಗೊಳಿಸು­ತ್ತಾ­ರೆಯೇ’ ಎಂದು ಪತ್ರಿಕಾಗೋಷ್ಠಿ­ಯಲ್ಲಿ ಪ್ರಶ್ನಿಸಿದರು.

‘ಪದ್ಮರಾಜ್ ಆಯೋಗ ಕೊಟ್ಟ  ವರದಿ ಹೈಕೋರ್ಟ್‌ ಮಾರ್ಗಸೂಚಿ ಪ್ರಕಾರ ಇಲ್ಲ’ ಎಂದು ಸಬೂಬು ಹೇಳಿ, ಮತ್ತೊಂದು ಸಮಿತಿ ರಚಿಸ­ಲಾಗಿದೆ. ಇದೇ ಪರಿಸ್ಥಿತಿ ಕೆಂಪಣ್ಣ ಆಯೋಗದ ವರದಿಗೂ ಬರುವುದಿಲ್ಲ ಎನ್ನುವುದಕ್ಕೆ ಏನು ಗ್ಯಾರಂಟಿ? ಕಾಲಹರಣ ಮಾಡಲು ಮತ್ತು ಬೀಸೋ ದೊಣ್ಣೆ­ಯಿಂದ ತಪ್ಪಿಸಿ­ಕೊಳ್ಳಲು ಮುಖ್ಯಮಂತ್ರಿ­ಯವರು ಕೆಂಪಣ್ಣ ಆಯೋಗ ರಚಿಸಿದ್ದಾರೆ’ ಎಂದು ದೂರಿದರು.

ಕೋರ್ಟ್‌ನಲ್ಲಿ ಆಗಲಿ: ‘ಮುಖ್ಯ­ಮಂತ್ರಿ­­ಗಳೇ ಯಾವ ಆಯೋಗವೂ ಬೇಡ. ಅದರ ಬದಲು ಅರ್ಕಾ­ವತಿಯಲ್ಲಿ ಅಕ್ರಮ ನಡೆದಿದೆಯೊ ಇಲ್ಲವೊ ಎನ್ನು­ವುದು ಕೋರ್ಟ್‌ನಲ್ಲೇ ತೀರ್ಮಾನ ಆಗಲಿ. ನನ್ನ ತಪ್ಪಿದ್ದರೆ ನನಗೂ ಶಿಕ್ಷೆ ಆಗಲಿ. ಇಂತಹ ಆಯೋಗಗಳನ್ನು ರಚಿ­ಸುವುದರಿಂದ ಅಕ್ರಮ ಎಸಗಿದ­ವರಿಗೆ ಶಿಕ್ಷೆ ಆಗಲ್ಲ. ಕಾಲಹರಣಕ್ಕೆ ತೆರಿಗೆ ಹಣ ಪೋಲು ಮಾಡುವುದು ಎಷ್ಟರಮಟ್ಟಿಗೆ’ ಎಂದು ಅವರು ಪ್ರಶ್ನಿಸಿದರು.

‘ಅನುಭವ ಇರಲಿಲ್ಲ..’
ನನ್ನ ವಿರುದ್ಧವೂ ಡಿನೋಟಿಫಿ­ಕೇಷನ್‌ ಆಪಾದನೆ ಇದೆ. ಆಕ­ಸ್ಮಿಕವಾಗಿ ಮುಖ್ಯಮಂತ್ರಿ­ಯಾದ ನನಗೆ ಆಡಳಿತದ ಅನುಭವ ಇರ­ಲಿಲ್ಲ. ಕಡತ ನೋಡುವ ತಿಳಿ­ವ­ಳಿ­ಕೆಯೂ ಇರಲಿಲ್ಲ. ಈಗಿನ ಅನು­ಭವ ಆಗ ಇದ್ದಿದ್ದರೆ ಅಂತಹ ಕಡತ­ಗಳಿಗೆ ಎಚ್ಚರಿಕೆಯಿಂದ ಸಹಿ ಹಾಕು­ತ್ತಿದ್ದೆ. ಒಳ್ಳೆ ಉದ್ದೇಶದಿಂದ ವಿವೇ­ಚ­ನಾಧಿಕಾರ ಬಳಸಿ ಡಿನೋಟಿಫೈ ಮಾಡಿದ್ದೇನೆ. ತಪ್ಪಾಗಿದ್ದರೆ ಅದನ್ನು ಕೋರ್ಟ್‌ ಹೇಳಲಿ.
– ಎಚ್‌.ಡಿ.ಕುಮಾರಸ್ವಾಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT