ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಟಿಐ ಇ–ಮಾಹಿತಿ: ಸುಪ್ರೀಂ ಸೂಚನೆ

Last Updated 3 ನವೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಮಾಹಿತಿ ಹಕ್ಕು ಕಾಯ್ದೆ ಅನ್ವಯ ಕೇಳುವ ಮಾಹಿತಿ­ಗಳನ್ನು ವೆಬ್‌ಸೈಟ್‌ ಮೂಲಕ  ನೀಡು­ವಂತೆ ಕೋರಿ ಸಲ್ಲಿಕೆಯಾದ ಅರ್ಜಿಗೆ ಸಂಬಂಧಿಸಿ ನಿರ್ಧಾರ ತಳೆಯುವಂತೆ ಕೇಂದ್ರ ಹಾಗೂ ರಾಜ್ಯಗಳಿಗೆ ಸುಪ್ರೀಂ­ಕೋರ್ಟ್‌ ಸೋಮವಾರ ಸೂಚಿಸಿದೆ.

‘ಬಹಿರಂಗಪಡಿಸಬಹುದು‘

ನವದೆಹಲಿ (ಪಿಟಿಐ): ತನಿಖೆಗೆ ಅಡ್ಡಿ­ಯಾಗುತ್ತದೆ ಎನ್ನುವ ಕಾರ­ಣಕ್ಕೆ ಆರೋಪಟ್ಟಿ ಬಹಿರಂಗ­ಪ­ಡಿ­ಸ-­ದಿ­ರಲು ಸಾಧ್ಯವಿಲ್ಲ ಎಂದು ಕೇಂದ್ರ ಮಾಹಿತಿ ಆಯೋಗ ಸೋಮವಾರ ಹೇಳಿದೆ.

‘ಅರ್ಜಿಗೆ ಸಂಬಂಧಿಸಿ ಮೂರು ವಾರದೊಳಗೆ ನಿರ್ಧಾರ ತೆಗೆದುಕೊಳ್ಳು­ವಂತೆ  ರಾಜ್ಯಗಳು ಹಾಗೂ ಕೇಂದ್ರಾ­ಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡು­ತ್ತಿದ್ದೇವೆ’ ಎಂದು ಮುಖ್ಯನ್ಯಾಯ­ಮೂರ್ತಿ ಎಚ್.ಎಲ್‌.ದತ್ತು ಹಾಗೂ ನ್ಯಾಯಮೂರ್ತಿ ಎ.ಕೆ.ಸಿಕ್ರಿ ಅವರಿದ್ದ ಪೀಠ ಹೇಳಿದೆ.

ಆರ್‌ಟಿಐ ಅಡಿ ಮಾಹಿತಿ ಕೇಳಿ ಅಂತ­ರ್ಜಾಲದ ಮೂಲಕ ಅರ್ಜಿ ಸಲ್ಲಿಕೆ ಹಾಗೂ  ಶುಲ್ಕ ಪಾವತಿಗೆ ಸೂಕ್ತ ವೆಬ್‌­ಸೈಟ್‌್ ರೂಪಿಸುವಂತೆ  ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಬೇಕು ಎಂದು ಕೋರಿ ವಕೀಲ ಅಮಿತ್‌ ಕುಮಾರ್‌್ ಮೂಲಕ  ಸುಪ್ರೀಂ­ಕೋರ್ಟ್‌ಗೆ ಅರ್ಜಿ ಸಲ್ಲಿಸಲಾ­ಗಿತ್ತು. ಬಿಹಾರ ಸರ್ಕಾರ ಮಾಡಿರು­ವಂತೆ ಆರ್‌ಟಿಐ ಅರ್ಜಿ ಸಲ್ಲಿಸುವುದಕ್ಕೆ ಕಾಲ್‌್ ಸೆಂಟರ್‌್ ಸ್ಥಾಪಿಸಬೇಕು ಎಂದೂ ಅರ್ಜಿಯಲ್ಲಿ ಕೋರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT