ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಟಿಒ ಭ್ರಷ್ಟತೆಗೆ ಕಡಿವಾಣ: ಗಡ್ಕರಿ

ಮೋಟಾರು ವಾಹನ ತಿದ್ದುಪಡಿ ಮಸೂದೆ ಮಂಡನೆಗೆ ನಿರ್ಧಾರ
Last Updated 19 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಪ್ರಾದೇಶಿಕ ಸಾರಿಗೆ ಕಚೇರಿಗಳ (ಆರ್‌ಟಿಒ) ಕಾನೂನುಬಾಹಿರ ಚಟುವ­ಟಿಕೆ­ಗಳನ್ನು ಕೊನೆಗೊಳಿಸುವ  ಉದ್ದೇಶದ ಮೋಟಾರು ವಾಹನಗಳ ತಿದ್ದುಪಡಿ ಮಸೂದೆಯನ್ನು ಮುಂದಿನ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಮಂಗಳವಾರ ತಿಳಿಸಿದರು.

‘ಅಮೆರಿಕ, ಕೆನಡಾ, ಸಿಂಗಪುರ, ಜಪಾನ್‌, ಜರ್ಮನಿ ಮತ್ತು ಬ್ರಿಟನ್‌­ಗಳಲ್ಲಿ ಇರುವ ಮೋಟಾರು ವಾಹನಗಳ ಕಾಯ್ದೆಗಳನ್ನು ಅಭ್ಯಸಿಸಿ ಈ ಮಸೂದೆ ಸಿದ್ಧ­ಪಡಿಸಲಾ­ಗಿದೆ. ಪಾರ­ದರ್ಶಕ­ವಾಗಿರುವ ಈ ಮಸೂದೆ, ಆರ್‌ಟಿಒ­ದಲ್ಲಿರುವ ಭ್ರಷ್ಟಾಚಾರ ಕಿತ್ತೊಗೆ­ಯುತ್ತದೆ’ ಎಂದು ಅವರು ಭಾರತೀಯ ರಸ್ತೆ ಕಾಂಗ್ರೆಸ್‌ ಸಭೆಯ ಸಂದರ್ಭ­ದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

‘ಸದ್ಯ ಜಾರಿಯಲ್ಲಿರುವ ಕಾಯ್ದೆ­ಯನ್ನು ಆಮೂಲಾ­ಗ್ರ­ವಾಗಿ ಪರಿಷ್ಕರಿ­ಸುವ ಉದ್ದೇಶದಿಂದ ಈ ಮಸೂದೆ ಸಿದ್ಧಪಡಿಸಲಾಗಿದೆ. ಪ್ರಸ್ತಾವಿತ ಮಸೂದೆ­ಯಲ್ಲಿ ಪರವಾನಗಿಯನ್ನು ಆನ್‌ಲೈನ್‌ ಮೂಲಕ ನೀಡಲು ಅವಕಾಶ ಕಲ್ಪಿಸ­ಲಾಗಿದೆ.  ಚಾಲನಾ ಪರವಾನಗಿಯ ಸೂಕ್ತ ದಾಖಲೀಕರಣ, ಈ ಮಾಹಿತಿ­ಯನ್ನು ಇ–ಆಡಳಿತ ಮೂಲಕ ಬಳಸಲು ಸೂಕ್ತ ವ್ಯವಸ್ಥೆ ಕಲ್ಪಿಸುವ ಪ್ರಸ್ತಾವ ಇದೆ. ಸಂಚಾರ ನಿಯಮಗಳನ್ನು ಉಲ್ಲಂಘಿಸಿದ­ವರಿಗೆ ಕ್ಯಾಮೆರಾಗಳು ಸೆರೆ ಹಿಡಿದ ದೃಶ್ಯಗಳನ್ನು ಆಧರಿಸಿ ದಂಡ ವಿಧಿಸುವ ಅಂಶವೂ ಇದೆ’ ಎಂದರು.

ಪಾರದರ್ಶ­ಕ­ವಾಗಿ­ರುವ ಮಸೂದೆ

‘ಅಂತರರಾಷ್ಟ್ರೀಯ ಮಾದರಿಯಂತೆ ವಾಹನಗಳ ವಿನ್ಯಾಸ, ಆರು ಮುಂದು­ವರಿದ ದೇಶಗಳಲ್ಲಿ ಚಾಲ್ತಿಯಲ್ಲಿರು­ವಂತೆ ಮಾಲಿನ್ಯ ನಿಯಂತ್ರಣಕ್ಕೆ ಕ್ರಮ ವಹಿಸುವ ಪ್ರಸ್ತಾವ ಕೂಡ ಈ ಮಸೂದೆಯಲ್ಲಿದೆ’ ಎಂದರು. ಮುಂದುವರಿದ ಆರು ರಾಷ್ಟ್ರಗಳ ಸಾರಿಗೆ ಕಾಯ್ದೆ­­ಗಳನ್ನು ಅಭ್ಯಸಿಸಿ ಈ  ಮಸೂದೆ ರೂಪಿಸ­ಲಾ­ಗಿದೆ. ಪಾರದರ್ಶ­ಕ­ವಾಗಿ­ರುವ ಮಸೂದೆ ಆರ್‌.ಟಿ.ಒ ದ­ಲ್ಲಿ­ರುವ ಭ್ರಷ್ಟಾಚಾರ ಕಿತ್ತೊಗೆ­ಯುತ್ತದೆ ಎಂಬ ವಿಶ್ವಾಸ ನನಗಿದೆ

– -ನಿತಿನ್‌ ಗಡ್ಕರಿ, ಸಾರಿಗೆ ಮತ್ತು ಹೆದ್ದಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT