ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಶಯಕ್ಕೆ ಪೂರಕ

Last Updated 30 ಆಗಸ್ಟ್ 2015, 19:30 IST
ಅಕ್ಷರ ಗಾತ್ರ

‘ರಾಜ್ಯದ ಮುಖ್ಯಮಂತ್ರಿಯೇ, ನಾನೊಬ್ಬ ಅಹಿಂದ ನಾಯಕ ಎಂದು ಹೇಳಿಕೊಳ್ಳುತ್ತಿರುವುದು ಸರಿಯಲ್ಲ’ ಎಂದಿದ್ದಾರೆ ವಿಶ್ವ ವೀರಶೈವ ಲಿಂಗಾಯತ ಒಕ್ಕೂಟದ ಅಧ್ಯಕ್ಷ ಜ್ಯೋತಿಪ್ರಕಾಶ್‌ ಮಿರ್ಜಿ (ಪ್ರ.ವಾ., ಆ. 24). ಹೀಗೆ ಹೇಳುವುದು ಏಕೆ ಸರಿಯಲ್ಲವೆಂಬುದು ಅರ್ಥವಾಗಲಿಲ್ಲ!

ಅಲ್ಪಸಂಖ್ಯಾತ, ಹಿಂದುಳಿದ, ದಲಿತರಲ್ಲಿ ಆತ್ಮವಿಶ್ವಾಸ ಮೂಡಿಸುವುದು  ಸಾಮಾಜಿಕ ನ್ಯಾಯವೇ ಆಗಿದೆ.  ಶೋಷಣೆಗೆ ಗುರಿಯಾದ ಹಿಂದುಳಿದ ಸಮುದಾಯಗಳಿಗೆ  ಹಾಗೂ ದಲಿತರಿಗೆ ಮೀಸಲು ಸೌಲಭ್ಯ ಕಲ್ಪಿಸಿ ಅಂತಹ ಶೋಷಣೆಯನ್ನು ತಡೆಗಟ್ಟಬೇಕೆಂಬುದು ನಮ್ಮ ಸಂವಿಧಾನದ ಆಶಯ. ಆದ್ದರಿಂದ ಯಾರೇ ಇರಲಿ ಅವರು ಅಹಿಂದ ನಾಯಕನೆಂದು ಹೇಳಿಕೊಂಡು,  ಶ್ರಮಿಸಿದರೆ  ಅದು ಸ್ವಾಗತಾರ್ಹ; ಸಂವಿಧಾನದ ಆಶಯಕ್ಕೆ ಅದು ಪೂರಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT