ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ತಿ ಮಾಹಿತಿ ಕೊಡದ 401 ಸಂಸದರು

ಪಟ್ಟಿಯಲ್ಲಿ ಬಿಜೆಪಿಯ 209 ಸದಸ್ಯರು
Last Updated 26 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕರ್ನಾಟಕದ ಅನಂತ್‌ ಕುಮಾರ್‌ ಮತ್ತು ವೀರಪ್ಪ ಮೊಯಿಲಿ ಸೇರಿದಂತೆ 401 ಸಂಸದರು ನಿಗದಿತ ಗಡುವಿನ ಒಳಗೆ ತಮ್ಮ ಆಸ್ತಿ ವಿವರ ಘೋಷಣೆ ಮಾಡಿಲ್ಲ. ಮಾಹಿತಿ ಹಕ್ಕು ಕಾಯ್ದೆ ಅಡಿ ಸೆ.26 ರಂದು ಸಲ್ಲಿಸಿದ ಅರ್ಜಿಗೆ ಲೋಕ­ಸಭಾ ಸಚಿವಾಲಯ ಈ ಮಾಹಿತಿ ನೀಡಿದೆ. 401 ಸಂಸದರ ಆಸ್ತಿ ವಿವರಕ್ಕೆ ಕಾಯ­ಲಾ­ಗು­ತ್ತಿದೆ ಎಂದು ಸಚಿವಾಲಯ ತಿಳಿಸಿದೆ.

ಸಂಸದರ ಆಸ್ತಿ ವಿವರ ಘೋಷಣೆ ಕಾಯ್ದೆ 2004 ರ ಪ್ರಕಾರ ಸಂಸತ್‌ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿ 90 ದಿನಗಳ ಒಳಗೆ ತಮ್ಮ ಆಸ್ತಿ ವಿವರ ಘೋಷಣೆ ಮಾಡ­ಬೇಕು. ಆದರೆ ಆಸ್ತಿ ವಿವರ ಘೋಷಣೆ ಮಾಡು­­ವಂತೆ  ಸೆ.26ರ ವರೆಗೆ ಯಾವ ಸಂಸದ­ರಿಗೂ ನೆನಪಿನ ಪತ್ರ ಕಳುಹಿಸಿರ­ಲಿಲ್ಲ ಎಂದು ಲೋಕಸಭಾ ಸಚಿವಾಲಯ ಹೇಳಿದೆ.

ಆಸ್ತಿ ವಿವರ ಘೋಷಿಸದೇ ಇರು­ವವರ ಪಟ್ಟಿಯಲ್ಲಿ ರಾಹುಲ್‌, ಸೋನಿಯಾ ಗಾಂಧಿ, ಎಲ್‌.ಕೆ.­ ಅಡ್ವಾಣಿ, ಹಾಗೂ  ಸಚಿವರಾದ ರಾಜನಾಥ್‌ ಸಿಂಗ್, ಸುಷ್ಮಾ ಸ್ವರಾಜ್‌, ಉಮಾ­ಭಾರತಿ, ನಿತಿನ್‌ ಗಡ್ಕರಿ ಮತ್ತು ಎಸ್‌ಪಿ ನಾಯಕ ಮುಲಾ­ಯಂ ಸಿಂಗ್‌ ಯಾದವ್‌ ಸೇರಿದ್ದಾರೆ.

ಬಿಜೆಪಿ 209, ಕಾಂಗ್ರೆಸ್‌ನ 31, ಟಿಎಂಸಿಯ 27, ಬಿಜೆಡಿಯ 18, ಶಿವಸೇನಾದ 15, ಟಿಡಿಪಿಯ 14, ಎಐಎಡಿಎಂಕೆಯ 9, ಟಿಆರ್‌ಎಸ್‌ನ 8, ವೈಎಸ್‌ಆರ್‌ ಕಾಂಗ್ರೆಸ್‌ನ 7, ಲೋಕ­ಜನಶಕ್ತಿಯ 6, ಎನ್‌ಸಿಪಿ, ಸಿಪಿಎಂ ಮತ್ತು ಎಸ್‌ಪಿಯ ತಲಾ 4,  ಅಕಾಲಿ­ದಳ, ಆರ್‌ಜೆಡಿ ಮತ್ತು ಎಎಪಿಯ ತಲಾ ಮೂವರು ಮತ್ತು ಜೆಡಿಯು ಮತ್ತು ಅಪ್ನಾದಳದ ಇಬ್ಬರು ಇದುವರೆಗೂ ತಮ್ಮ ಆಸ್ತಿ ವಿವರ ಘೋಷಣೆ ಮಾಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT