ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾರ ಸುರಕ್ಷೆ ಗುಮ್ಮ

ಅಕ್ಷರ ಗಾತ್ರ

ಆಧುನಿಕತೆಯ ಭರಾಟೆಯಲ್ಲಿ, ಜಾಗತೀಕರಣದ ಪ್ರವಾಹದಲ್ಲಿ ಮುನ್ನಡೆಯುತ್ತಿರುವ ಬದುಕಿನ ಶೈಲಿಯಲ್ಲಿ ನಮ್ಮ ಸಾಂಪ್ರದಾಯಿಕ ಆಹಾರಗಳ ಸ್ಥಾನವನ್ನು ಭಿನ್ನ ಭಿನ್ನ ದೇಶಗಳ ಆಹಾರಗಳು ಆಕ್ರಮಿಸುತ್ತಿವೆ.

ಕೇವಲ ಸ್ವಾರ್ಥ, ಹಣ ಗಳಿಕೆ, ಉದ್ಯಮದ ವಿಸ್ತರಣೆಯನ್ನು ಮಾನದಂಡವನ್ನಾಗಿ ಮಾಡಿಕೊಂಡಿರುವ ಹತ್ತು ಹಲವು ಬಹುರಾಷ್ಟ್ರೀಯ ಕಂಪೆನಿಗಳು ತಮ್ಮ ಕಪಿಮುಷ್ಟಿಯಲ್ಲಿ ಮಾರುಕಟ್ಟೆಯನ್ನು ನಿಯಂತ್ರಿಸುತ್ತಿವೆ.

ಬ್ರೆಡ್, ಬನ್ನು, ಬೇಕರಿ ತಿನಿಸುಗಳು, ನೂಡಲ್ಸ್, ಪಿಜ್ಜಾ, ಬರ್ಗರ್‌ನಂತಹ ಹಲವಾರು ಸಿದ್ಧ ಆಹಾರಗಳ ರೂಪದಲ್ಲಿ ನಾವೆಲ್ಲ ನಮಗಿರವಿದ್ದೋ ಇಲ್ಲದೆಯೋ ವಿಷಪ್ರಾಷನ ಮಾಡುತ್ತಿದ್ದೇವೆ. ಯಾವುದೇ ನಿಯಂತ್ರಣಕ್ಕೆ ಸಿಗದೆ ಸ್ಥಳೀಯವಾಗಿ ಉತ್ಪಾದನೆ ಮಾಡಿ ಮಾರಾಟ ಮಾಡುವ ನೂರೆಂಟು ಉತ್ಪನ್ನಗಳಲ್ಲಿಯೂ ಅಪಾಯಕಾರಿ ವಿಷಕಾರಿ ಅಂಶಗಳು ಮಿಶ್ರಣವಾಗಿರುತ್ತವೆ ಎಂಬುದನ್ನು  ಮರೆಯುವಂತಿಲ್ಲ.

ಆಹಾರ ಸುರಕ್ಷತೆ ಗುಣಮಟ್ಟ ಪರೀಕ್ಷೆ ವ್ಯವಸ್ಥೆಯನ್ನು ಮುಲಾಜಿಲ್ಲದೆ ಇನ್ನಷ್ಟು ಬಲಪಡಿಸಿ, ಕಾಲಕಾಲಕ್ಕೆ  ಸುರಕ್ಷತಾ ಮಾನದಂಡಗಳನ್ನು ಪುನರ್‌ ವಿಮರ್ಶಿಸಬೇಕಾಗಿದೆ.

ಜೊತೆಗೆ ಸ್ಥಳೀಯವಾಗಿ ತಯಾರಾಗಿ ಮಾರಾಟವಾಗುವ ಉತ್ಪನ್ನಗಳ ಮೇಲೂ ಯಾವುದೇ ಲಾಬಿಗೆ ಒಳಗಾಗದೆ ಸಂಪೂರ್ಣ ಕಟ್ಟುನಿಟ್ಟಿನ ನಿಗಾ ವಹಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ತುರ್ತು ಕ್ರಮಗಳನ್ನು ಕೈಗೊಳ್ಳುವುದರ ಜೊತೆಗೆ ಸಂಘ ಸಂಸ್ಥೆಗಳು ಕೂಡ ಜನಜಾಗೃತಿ ಮೂಡಿಸುವ ಮೂಲಕ ಕೈಜೋಡಿಸಬೇಕಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT