ವಿಜಾಪುರ: `ಇಂಗ್ಲಿಷ್ ಮಾಧ್ಯಮ ಎಲ್ಲ ಅವಕಾಶಗಳನ್ನು ಕದಿಯುತ್ತಿದೆ. ಇಂಗ್ಲಿಷ್ ಒಂದೇ ಎಲ್ಲದಕ್ಕೂ ಪರಿಹಾರ ಎಂದು ತಿಳಿದ ಆಧುನಿಕ ಜಗತ್ತು ಅದರ ಹಿಂದೆ ಓಡುತ್ತಿದೆ. ಈ ಬಿಕ್ಕಟ್ಟಿನಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂಬುದನ್ನು ನಾವು ಈಗ ಯೋಚಿಸಬೇಕಾಗಿದೆ' ಎಂದು ಲೇಖಕಿ ಪಾರ್ವತಿ ಐತಾಳ ಹೇಳಿದರು.

ಕನ್ನಡ ಸಾಹಿತ್ಯ ಸಮ್ಮೇಳನದ ಸಮಾನಾಂತರ ವೇದಿಕೆಯಲ್ಲಿ ಭಾನುವಾರ ನಡೆದ `ಶಿಕ್ಷಣ ಹಾಗೂ ಮಾಧ್ಯಮದಲ್ಲಿ ಕನ್ನಡದ ಸವಾಲುಗಳು' ಗೋಷ್ಠಿಯಲ್ಲಿ ಆಶಯ ಭಾಷಣ ಮಾಡಿದ ಅವರು, `ಒಂದು ಭಾಷೆಯಾಗಿ ಇಂಗ್ಲಿಷ್ ಕಲಿಯೋಣ. ಇಂಗ್ಲಿಷ್ ಶಾಲೆಗಳು ಸಾಮಾಜಿಕ ಸಮಸ್ಯೆಯಾಗಿವೆ' ಎಂದರು.

`ಬಡವರ ಮಕ್ಕಳನ್ನೂ ಇಂಗ್ಲಿಷ್ ಶಾಲೆಗಳಿಗೆ ಸೇರಿಸಲಾಗುತ್ತಿದೆ. ಇದು ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಇದು ದುರಂತ. ಹಿರಿಯರು ಮಕ್ಕಳನ್ನು ಹಿಂಸೆಗೆ ಒಳಪಡಿಸುತ್ತಿದ್ದಾರೆ. ಅರೆನಿದ್ರೆಯಲ್ಲಿ ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ. ಇದಕ್ಕಿಂತ ದೊಡ್ಡ ದುರಂತ ಮತ್ತೊಂದಿಲ್ಲ' ಎಂದು ಹೇಳಿದರು.

`ಕೆಲವರು ತಮ್ಮ ಮಕ್ಕಳಿಗೆ ಕನ್ನಡ ಗೊತ್ತಿಲ್ಲ ಎಂದು ಹೇಳುವ ದುಃಸ್ಥಿತಿ ಇದೆ. ಮೂರು ಸಾವಿರ ಕನ್ನಡ ಶಾಲೆಗಳನ್ನು ಮುಚ್ಚುವ ಮಾತನಾಡಿದ ಸರ್ಕಾರ ಅವನ್ನು ಕೆಲವು ಶಾಲೆಗಳಲ್ಲಿ ವಿಲೀನಗೊಳಿಸಿತು. ಎಲ್ಲ ಇಂಗ್ಲಿಷ್ ಮಾಧ್ಯಮಿಕ ಶಾಲೆಗಳನ್ನು ಸರ್ಕಾರ ವಶಕ್ಕೆ ತೆಗೆದುಕೊಂಡು ಕನ್ನಡದ ಅನುಷ್ಠಾನ ಮಾಡಿ, ಇಂಗ್ಲಿಷ್ ಒಂದು ಭಾಷೆಯಾಗಿ ಕಲಿಸಬೇಕು. ಈ ಸಮಸ್ಯೆಗೆ ಇದೇ ಪರಿಹಾರ' ಎಂದರು.

`ಕನ್ನಡದ ಶೈಕ್ಷಣಿಕ ಪಠ್ಯಗಳು: ಜಾಗತೀಕರಣದ ಸವಾಲುಗಳು' ಎಂಬ ವಿಷಯದ ಕುರಿತಂತೆ ಮಾತನಾಡಿದ ವಿದ್ವಾಂಸ ಗುರುಪಾದ ಮರಿಗುದ್ದಿ, `ಜಾಗತೀಕರಣ ಈಗಾಗಲೇ ನಮ್ಮನ್ನು ಆವರಿಸಿಕೊಂಡಿದೆ. ಅದು ಒಡ್ಡಿರುವ ಸವಾಲಿಗೆ ಎದೆಯೊಡ್ಡಬೇಕಾದ ಅನಿವಾರ್ಯತೆ ಇದೆ. ಉನ್ನತ ಶಿಕ್ಷಣ ಬದಲಾವಣೆಗೆ ಒಳಪಡಬೇಕಾದ ಸನ್ನಿವೇಶ ಎದುರಾಗಿದೆ' ಎಂದು ತಿಳಿಸಿದರು.

`ವಿಶ್ವವಿದ್ಯಾಲಯಗಳ ಪಠ್ಯಕ್ರಮಗಳು ವಿದ್ಯಾರ್ಥಿಗಳ ಮನೋಭಾವನೆಗೆ ವಿರುದ್ಧವಾಗಿವೆ. ಅವಗಳ ಕುರಿತಂತೆ ನಕಾರಾತ್ಮಕ ಧೋರಣೆ ಇದೆ. ಪಠ್ಯಕ್ರಮವು ಸಾರ್ವಜನಿಕರನ್ನು, ಚಿಂತಕರನ್ನು, ಬುದ್ಧಿಜೀವಿಗಳನ್ನು ಒಳಗೊಂಡಿಲ್ಲ. ಇವೆಲ್ಲವೂ ವಿಶ್ವವಿದ್ಯಾಲಯದ ನಿಯಂತ್ರಣದಲ್ಲಿವೆ. ಅವು ತಮಗೆ ಬೇಕಾದಂತೆ ಪಠ್ಯಕ್ರಮ ರೂಪಿಸುತ್ತವೆ. ಇದಕ್ಕೆ ಸಾರ್ವಜನಿಕ ಚರ್ಚೆ ಅಗತ್ಯ' ಎಂದರು.

`ಸಮೂಹ ಮಾಧ್ಯಮ ಮತ್ತು ವಿಭಿನ್ನ ಭಾಷೆಯ ಬಳಕೆ' ವಿಷಯದ ಕುರಿತಂತೆ ಮಾತನಾಡಿದ ಪತ್ರಕರ್ತ ಬಿ.ಎನ್. ಮಲ್ಲೇಶ್, `ಪತ್ರಿಕೆಗಳು ಮಾತ್ರ ಕನ್ನಡವನ್ನು ಶುದ್ಧವಾಗಿ ಬಳಸುತ್ತವೆ. 24 ಗಂಟೆಯ ಸುದ್ದಿ ವಾಹಿನಿಗಳು ಬಂದ ಬಳಿಕ ಕನ್ನಡ ಬಳಕೆ ದಾರಿ ತಪ್ಪುತ್ತಿದೆ. ಸಂವಹನದ ಹೆಸರಿನಲ್ಲಿ ಬೇರೆ ಭಾಷೆಯ ಪದಗಳನ್ನು ಸೇರಿಸುವುದು ಸರಿಯಲ್ಲ' ಎಂದರು.

`ಶಿಕ್ಷಣ ಕ್ಷೇತ್ರದಲ್ಲಿ ಮಾತ್ರವಲ್ಲ, ಸಮೂಹ ಮಾಧ್ಯಮಗಳಲ್ಲೂ ಇಂಗಿಷ್ ವ್ಯಾಮೋಹ ಇದೆ. ಭಾಷೆಯ ಬೆಳವಣಿಗೆಯಲ್ಲಿ ಪತ್ರಿಕೆಗಳ ಕೊಡುಗೆ ದೊಡ್ಡದು. ಮಾಧ್ಯಮಗಳು ಗ್ರಾಮೀಣ ಭಾಷೆಯ ಸೊಗಡನ್ನು ಬಳಸಿದರೆ, ಅವನ್ನು ಉಳಿಸಬಹುದು. ಸಮೂಹ ಮಾಧ್ಯಮಗಳಲ್ಲಿ ವಿವಿಧ ದನಿಗಳ ಕನ್ನಡ ಭಾಷೆಯ ಬಳಕೆ ಮಾಡಬೇಕು. ಅನಿವಾರ್ಯವಾದರೆ ಬೇರೆ ಭಾಷೆಯ ಪದಗಳನ್ನು ಬಳಸಬೇಕು' ಎಂದರು. ಮಕ್ಕಳ ಸಾಹಿತಿ ಎಸ್. ಆರ್. ಮನಹಳ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.