ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲಿಷ್ ಹೊರಕ್ಕೆ

Last Updated 29 ಜೂನ್ 2016, 19:30 IST
ಅಕ್ಷರ ಗಾತ್ರ

ಐರೋಪ್ಯ ಒಕ್ಕೂಟದಿಂದ ಹೊರಬರಲು ಬ್ರಿಟನ್‌ ಮತದಾನದ ಮೂಲಕ ಜನಬೆಂಬಲ ಪಡೆದ ಬೆನ್ನಿಗೇ, ಒಕ್ಕೂಟದಿಂದ ಇಂಗ್ಲಿಷ್ ಭಾಷೆಯನ್ನು ಹೊರಹಾಕುವ  ಸಾಧ್ಯತೆ ಕಂಡುಬಂದಿದೆ (ಪ್ರ.ವಾ., ಜೂನ್ 29). ‘ನೀ ನನಗಿದ್ದರೆ ನಾ ನಿನಗೆ’ ಎಂಬ ನಾಣ್ಣುಡಿಯಂತೆ ಐರೋಪ್ಯ ಒಕ್ಕೂಟದ ಈ ಪ್ರತಿಕ್ರಿಯೆ ಸಹಜವಾಗಿಯೇ ಸಮಂಜಸವಾಗಿದೆ.

‘ಬ್ರಿಟಿಷರೇ, ಭಾರತ ಬಿಟ್ಟು ತೊಲಗಿ’ ಎಂಬುದು ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಧ್ಯೇಯ ವಾಕ್ಯವಾಗಿತ್ತು. ಭಾರತದಿಂದ ಬ್ರಿಟಿಷರೇನೋ ತೊಲಗಿದರು. ಆದರೆ, ಅವರ ಭಾಷೆಯಾದ ಇಂಗ್ಲಿಷ್ ನಮ್ಮನ್ನು ಬೆಂಬಿಡದ ಭೂತದಂತೆ ಅಂಟಿಕೊಂಡೇ ಇದೆ.

ನಮ್ಮ ದೇಶದಲ್ಲಿ ಇಂಗ್ಲಿಷ್ ಪ್ರಭಾವ ಎಷ್ಟಿದೆ ಎಂಬುದನ್ನು ವಿವರಿಸಬೇಕಿಲ್ಲ. ಕನ್ನಡ ನಾಡಿನ ಯಾವ ಊರಿಗೆ ಹೋದರೂ ಅಂಗಡಿ ಮುಂಗಟ್ಟುಗಳಲ್ಲಿ ಇಂಗ್ಲಿಷ್ ನಾಮಫಲಕವೇ ರಾರಾಜಿಸುತ್ತಿರುತ್ತದೆ. ಟಿ.ವಿ. ಮಾಧ್ಯಮಗಳಲ್ಲಂತೂ ಇಂಗ್ಲಿಷ್ ಭಾಷೆ ಮತ್ತು ಲಿಪಿ ಕನ್ನಡದೊಂದಿಗೆ ಯಾವುದೇ ಸಂಕೋಚವಿಲ್ಲದೆ ಹಾಸಿ, ಹೊದೆದು ಬೆಸೆದುಕೊಂಡುಬಿಟ್ಟಿದೆ.

ಬೆಂಗಳೂರಿನಲ್ಲಿ ಗಲ್ಲಿ ಗಲ್ಲಿಗಳಲ್ಲೂ ಇರುವ ಇಂಗ್ಲಿಷ್ ಮಾಧ್ಯಮ ಶಾಲೆಗಳು ಇಂಗ್ಲಿಷ್ ಪ್ರಭಾವವನ್ನು ಮಕ್ಕಳ ಮೇಲೆ ಎಷ್ಟರ ಮಟ್ಟಿಗೆ ಬೀರಿವೆ ಎಂದರೆ, ಅವರು  ಶಾಲೆಯಿಂದ ಹೊರಗೆ ಆಟವಾಡುವಾಗಲೂ ಇಂಗ್ಲಿಷ್‌ ನಲ್ಲಿಯೇ ಮಾತನಾಡುತ್ತಾರೆ! ಪರಿಸ್ಥಿತಿ ಹೀಗಿರುವಾಗ, ನಾವು ಇಂಗ್ಲಿಷ್ ಭಾಷೆಯನ್ನು ನಮ್ಮ ದೇಶದಿಂದ ಹೊರಕ್ಕೆ ಹಾಕುವುದು ಯಾವಾಗ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT