ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡಿಯಾನಾ: ತುರ್ತುಚಿಕಿತ್ಸೆ ವಿಭಾಗ ಆರಂಭ

Last Updated 23 ಆಗಸ್ಟ್ 2014, 11:17 IST
ಅಕ್ಷರ ಗಾತ್ರ

ಮಂಗಳೂರು: ನಗರದ ಪಂಪ್‌ವೆಲ್‌ನ ಇಂಡಿಯಾನಾ ಆಸ್ಪತ್ರೆ ಹಾಗೂ ಹೃದಯಾಲಯವು ಎರಡು ವರ್ಷಗಳ­ನ್ನು ಪೂರೈಸಿರುವ ಸಂದರ್ಭದಲ್ಲಿ ಅಪಘಾತ ಮತ್ತು ತುರ್ತು ಚಿಕಿತ್ಸೆ ವಿಭಾಗವನ್ನು ಗುರುವಾರ ಆರಂಭಿಸಿದೆ. ಉಪ ವಿಭಾಗಾಧಿಕಾರಿ ಡಾ.ಡಿ.ಆರ್.­ಅಶೋಕ್ ಅವರು ಉದ್ಘಾಟಿಸಿದರು.

ಅಪಘಾತಕ್ಕೆ ಒಳಗಾದವರಿಗೆ ಇಲ್ಲಿ ತುರ್ತು ಚಿಕಿತ್ಸೆ ನೀಡುವುದಕ್ಕೆ ಅಂತರ­ರಾಷ್ಟ್ರೀಯ ಮಟ್ಟದಲ್ಲಿ ಅನುಭವ ಪಡೆ­ದ ವೈದ್ಯರಿದ್ದಾರೆ. ತುರ್ತು ಚಿಕಿತ್ಸೆ, ­ ಚಿಕಿತ್ಸೆ, ಎಲುಬಿನ ಚಿಕಿತ್ಸೆ ಮೊದಲಾ­ದವುಗಳಿಗೆ ಬೇಕಾದ ಎಲ್ಲ ಸವಲತ್ತು­ಗಳಿವೆ ಎಂದು ವ್ಯವಸ್ಥಾಪಕ ನಿರ್ದೇಶಕ ಡಾ. ಯೂಸುಫ್‌ ಕುಂಬ್ಳೆ ತಿಳಿಸಿದ್ದಾರೆ.
ಇಲ್ಲಿನ ಹೃದಯಾಲಯವು ದಕ್ಷಿಣ ಭಾರತದ ಅತ್ಯುತ್ತಮ ಹೃದಯಾಲ­ಯ­ಗಳಲ್ಲಿ ಒಂದಾಗಿದೆ. ಆಸ್ಪತ್ರೆಯು ಮಂ­ಗ­­ಳೂ­ರು ಹಾಗೂ ಸುತ್ತಲಿನ ಪ್ರದೇಶ­ಗಳಲ್ಲಿ ಆಪಘಾತ ಚಿಕಿತ್ಸಾ ಕೇಂದ್ರ­ಗಳನ್ನು ತೆರೆಯುವ ಯೋಜನೆ­ಯನ್ನು ಹಾಕಿಕೊಂಡಿದೆ ಎಂದು ಹೇಳಿದರು.

ಸಂಸ್ಥೆಯ ಅಧ್ಯಕ್ಷ ಡಾ.ಅಲಿ ಕುಂಬ್ಳೆ ಅವರು, ಈ ಸಂಸ್ಥೆಯು ಯಾವುದೇ ರೀತಿಯ ಕಠಿಣ ಶಸ್ತ್ರಚಿಕಿತ್ಸೆಗಳನ್ನೂ ನಿಭಾ­ಯಿಸಬಲ್ಲುದು. ಮುಖ್ಯವಾಗಿ ಮಿದುಳು, ಬೆನ್ನೆಲುಬು ಇತ್ಯಾದಿ ಸಮಸ್ಯೆಗಳಿಗೆ ಬೇಕಾದ ಸಕಲ ಸೌಕರ್ಯ ಇಲ್ಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT