ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ವಿಜ್ಞಾನಿಗಳ ಸಮ್ಮೇಳನ

Last Updated 24 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕಾಮನ್‌ವೆಲ್ತ್‌ ದೇಶಗಳ ವಿಜ್ಞಾನಿಗಳ ಸಮ್ಮೇ­ಳನ ಬೆಂಗಳೂರಿ­ನಲ್ಲಿ ಮಂಗಳವಾರ ಆರಂಭವಾಗಲಿದೆ. ಇದನ್ನು ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಉದ್ಘಾಟಿಸ­ಲಿದ್ದಾರೆ. 50 ವರ್ಷಗಳ ಅವಧಿಯಲ್ಲಿ ಕಾಮನ್‌­ವೆಲ್ತ್‌ ದೇಶಗಳ ವಿಜ್ಞಾನಿಗಳ ಸಮ್ಮೇಳನ ನಡೆಯುತ್ತಿರುವುದು ಇದೇ ಮೊದಲು.

‘ಉದ್ಘಾಟನಾ ಕಾರ್ಯಕ್ರಮ ಭಾರತೀಯ ವಿಜ್ಞಾನ ಸಂಸ್ಥೆಯ ಜೆ.ಎನ್‌. ಟಾಟಾ ಸಭಾಂಗಣ­ದಲ್ಲಿ ನಡೆಯಲಿದೆ. ಕಾಮನ್‌ವೆಲ್ತ್‌ ದೇಶಗಳ ಪೈಕಿ ಭಾರತದ ವೈಜ್ಞಾನಿಕ ಸಾಧನೆ ಸಾಕಷ್ಟು ಗಮನಾರ್ಹ­ವಾಗಿದೆ. ಹಾಗಾಗಿ ಈ ಬಾರಿಯ ಸಮ್ಮೇಳನ ನಮ್ಮ ದೇಶದಲ್ಲಿ ನಡೆಯಲಿದೆ’ ಎಂದು ಜವಾ­ಹರಲಾಲ್‌ ನೆಹರೂ ಉನ್ನತ ವಿಜ್ಞಾನ ಸಂಶೋಧನಾ ಕೇಂದ್ರದ (ಜೆಎನ್‌ಸಿಎಎಸ್‌ಆರ್‌) ಗೌರವಾಧ್ಯಕ್ಷ ಪ್ರೊ.ಸಿ.ಎನ್‌.ಆರ್‌.ರಾವ್‌ ಸೋಮ­ವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವೈಜ್ಞಾನಿಕ ಕ್ಷೇತ್ರದಲ್ಲಿ ಭಾರತದ ಸಾಧನೆಗಳ ಕುರಿತು ವಿಶೇಷ ಉಪನ್ಯಾಸ ಇರಲಿದೆ. ಇನ್ಫೊಸಿಸ್‌ ಸಹ ಸಂಸ್ಥಾಪಕ ಎನ್‌.ಆರ್‌. ನಾರಾಯಣಮೂರ್ತಿ, ಬಯೋಕಾನ್‌ ಕಂಪೆನಿಯ ಮುಖ್ಯಸ್ಥೆ ಕಿರಣ್‌ ಮಜುಂದಾರ್‌ ಷಾ, ಬಾಹ್ಯಾ­ಕಾಶ ವಿಜ್ಞಾನಿ ಡಾ.ಕೆ. ಕಸ್ತೂರಿರಂಗನ್‌ ಉಪನ್ಯಾಸ ನೀಡಲಿದ್ದಾರೆ ಎಂದು ಪ್ರೊ. ರಾವ್‌ ಹೇಳಿದರು.

ಕಾಮನ್‌ವೆಲ್ತ್‌ ವ್ಯಾಪ್ತಿಯ, ಕಡಿಮೆ ಅಭಿವೃದ್ಧಿ ಹೊಂದಿದ ದೇಶಗಳ ವಿಜ್ಞಾನ ಕ್ಷೇತ್ರಕ್ಕೆ ಬಲ ತುಂಬುವುದೂ ಈ ಸಮ್ಮೇಳನದ ಉದ್ದೇಶಗಳಲ್ಲಿ ಒಂದು ಎಂದು ಲಂಡನ್‌ನ ರಾಯಲ್‌ ಸೊಸೈಟಿಯ ಫೆಲೊ ಪ್ರೊ. ಆ್ಯಂಟನಿ ಚೀತಂ ಹೇಳಿದರು.

ಸಮ್ಮೇಳನವನ್ನು ರಾಯಲ್‌ ಸೊಸೈಟಿ ಆಯೋಜಿಸುತ್ತಿದೆ. ಜೆಎನ್‌­ಸಿಎ­ಎಸ್‌ಆರ್‌, ಕೇಂದ್ರ ಸರ್ಕಾರ ಸಹಕಾರ ನೀಡುತ್ತಿವೆ. ಗುರುವಾರದ ವರೆಗಿನ ಸಮಾವೇಶ ಲಲಿತ್‌ ಅಶೋಕ್‌ ಹೋಟೆಲ್‌ನಲ್ಲಿ ನಡೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT