ಅಕ್ಟೋಬರ್ 16 ವಿಶ್ವ ಆಹಾರ ದಿನ. ತಲೆಯ ಮೇಲೆ ಸೂರು ಇಲ್ಲದ ಕುಟುಂಬವೊಂದು ಹೈದರಾಬಾದ್ ನ ರಸ್ತೆ ಬದಿ ಸಂಸಾರ ಹೂಡಿದ್ದು, ಆಹಾರ ಸೇವಿಸುತ್ತಿರುವ ದೃಶ್ಯ ಗುರುವಾರ ಕಂಡದ್ದು ಹೀಗೆ. ವಿಶ್ವ ಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆಯನ್ನು ಸ್ಥಾಪಿಸಿದ ಸಂಕೇತವಾಗಿ ಈ ದಿನವನ್ನು ಆಚರಿಸಲಾಗುತ್ತಿದೆ. ಕೌಟುಂಬಿಕ ಬೇಸಾಯ, ‘ವಿಶ್ವಜನತೆಗೆ ಆಹಾರ ಪೂರೈಕೆ, ಪೃಥ್ವಿಯ ರಕ್ಷಣೆ’ ಪ್ರಸಕ್ತ ವರ್ಷದ ಆಶಯ. -ಎಎಫ್ ಪಿ ಚಿತ್ರ