ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದೇ 30ಕ್ಕೆ ಐದು ವಿದೇಶಿ ಉಪಗ್ರಹಗಳ ಉಡಾವಣೆ

Last Updated 22 ಜೂನ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಇದೇ 30ರಂದು ವಿದೇಶಗಳ ಐದು ಕೃತಕ ಉಪಗ್ರಹಗಳನ್ನು ಉಡಾವಣೆ ಮಾಡಲಿದೆ.

ಜರ್ಮನಿ, ಫ್ರಾನ್ಸ್‌, ಸಿಂಗಪುರಗಳ ತಲಾ ಒಂದು ಮತ್ತು ಕೆನಡಾದ ಎರಡು ಸೇರಿ ಐದು ಉಪಗ್ರಹಗಳನ್ನು ದೇಶೀಯವಾಗಿ ನಿರ್ಮಿಸಿರುವ ಪಿಎಸ್‌ಎಲ್‌ವಿಸಿ23 ಉಪಗ್ರಹ ವಾಹಕದ (ರಾಕೆಟ್‌) ಮೂಲಕ ಶ್ರೀಹರಿ­ಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಉಡ್ಡಯನ ಕೇಂದ್ರದಿಂದ (ಎಸ್‌ಎಚ್‌ಎಆರ್‌) ಉಡಾವಣೆ ಮಾಡ­ಲಾಗುವುದು ಎಂದು ಇಸ್ರೊ ಭಾನುವಾರ ತಿಳಿಸಿದೆ.

ಇಸ್ರೊ ಮಾರುಕಟ್ಟೆ ವಿಭಾಗದ ಅಂಗಸಂಸ್ಥೆಯಾದ ‘ಅಂತರಿಕ್ಷ್‌ ಕಾರ್ಪೊರೇಷನ್‌’ ವಿದೇಶಿ ಬಾಹ್ಯಾಕಾಶ ಸಂಸ್ಥೆಗಳ ಜೊತೆಗೆ ಮಾಡಿಕೊಂಡಿರುವ ವಾಣಿಜ್ಯ ಒಪ್ಪಂದದ ಅನ್ವಯ ಈ ಉಪಗ್ರಹಗಳನ್ನು ಉಡಾವಣೆ ಮಾಡಲಾಗುತ್ತಿದೆ. ಅಂತಿಮ ಹಂತದ ಪರೀಕ್ಷಾ ಪ್ರಕ್ರಿಯೆಗಳು ನಡೆಯುತ್ತಿದ್ದು, ಜೂನ್‌ 28ರ ಬೆಳಿಗ್ಗೆ 8:49ರಿಂದ 49 ಗಂಟೆಗಳ ಉಡಾವಣೆಯ ಕ್ಷಣಗಣನೆ ಆರಂಭವಾಗಲಿದೆ ಎಂದು ಇಸ್ರೊ ವಕ್ತಾರ ಬಿ.ಆರ್‌.ಗುರುಪ್ರಸಾದ್‌ ತಿಳಿಸಿದ್ದಾರೆ.

‘ಅಂತರಿಕ್ಷ್ ಕಾರ್ಪೊರೇಷನ್‌’ ಸಹಯೋಗದಲ್ಲಿ 1999ರಿಂದ ಈವರೆಗೆ ವಿದೇಶಗಳ 35 ಉಪಗ್ರಹಗಳನ್ನು ಇಸ್ರೊ ಉಡಾವಣೆ ಮಾಡಿದೆ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT