ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನೊಂದು ಮಹಾತ್ಯಾಗಕ್ಕೆ ಸಿದ್ಧವಿಲ್ಲ: ಶಿವಸೇನೆ

Last Updated 24 ಸೆಪ್ಟೆಂಬರ್ 2014, 9:56 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಸೀಟು ಹೊಂದಾಣಿಕೆಗೆ ಸಂಬಂ­ಧಿಸಿದಂತೆ ಇನ್ನೊಂದು ಮಹಾ­ತ್ಯಾಗಕ್ಕೆ ಶಿವಸೇನೆ  ಸಿದ್ಧವಿಲ್ಲ ಎಂದು ಪಕ್ಷದ ಹಿರಿಯ ಮುಖಂಡ ರಾಮದಾಸ್‌ ಕದಂ ಹೇಳಿದ್ದಾರೆ.

ಬಿಜೆಪಿ ಜತೆಗಿನ ಸುಮಾರು ಮೂರು ದಶಕಗಳ ಮೈತ್ರಿ ಮುರಿಯದಿರಲು ಈ ಒಪ್ಪಂದಕ್ಕೆ ಬರಲಾಗಿದೆ. ಇದರಡಿ ಅವರಿಗೆ ಹೆಚ್ಚುವರಿಯಾಗಿ ಅವರಿಗೆ ಆರು ಸೀಟುಗಳನ್ನು ಬಿಟ್ಟು­ಕೊ­ಡಲಾಗಿದೆ. ಪಕ್ಷವು ಇದುವರೆಗೆ ಒಟ್ಟು 18 ಸೀಟುಗಳನ್ನು ತ್ಯಾಗ ಮಾಡಿದೆ. ಆದರೆ, ಇನ್ನು  ಈ ರೀತಿಯ ಇನ್ನೊಂದು ಮಹಾತ್ಯಾಗವನ್ನು ಯಾರೂ ನಿರೀಕ್ಷಿಸುವುದು ಬೇಡ ಎಂದು ಅವರು ಸ್ಪಷ್ಟಪಡಿಸಿದರು.

ಮಂಗಳವಾರ ಬಿಜೆಪಿ–ಶಿವಸೇನಾ ನಿಲುವು ಸಡಿಲಿಸಿ­ದ್ದರಿಂದ ಸೀಟು ಹಂಚಿಕೆ ಬಿಕ್ಕಟ್ಟು ಸುಸೂ­ತ್ರ­ವಾಗಿ ಬಗೆಹರಿಯಿತು. ಮೈತ್ರಿ ಒಪ್ಪಂದ­ದಂತೆ ಶಿವಸೇನಾ 151 ಕ್ಷೇತ್ರಗಳಲ್ಲಿ ಸ್ಪರ್ಧಿ­ಸಲಿದೆ. ಬಿಜೆಪಿಗೆ 130 ಕ್ಷೇತ್ರಗ­ಳನ್ನು ಬಿಟ್ಟುಕೊಟ್ಟಿದೆ. ಆದರೆ, ಕಾಂಗ್ರೆಸ್‌ ಮತ್ತು ಎನ್‌ಸಿಪಿ ನಡುವೆ ಹಗ್ಗಾ­ಜಗ್ಗಾಟ ಇನ್ನೂ ಮುಂದುವ­ರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT