ಬೆಂಗಳೂರು: ದೇಶದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಪ್ರಮುಖ ಕಂಪೆನಿ ಇನ್ಫೊಸಿಸ್ ಪ್ರಸಕ್ತ ಹಣಕಾಸು ವರ್ಷದ ಎರಡನೆಯ ತ್ರೈಮಾಸಿಕದಲ್ಲಿ (ಜುಲೈ–ಸೆಪ್ಟೆಂಬರ್) ಮಾರುಕಟ್ಟೆ ನಿರೀಕ್ಷೆ ಮೀರಿ ರೂ 3,096 ಕೋಟಿ ನಿವ್ವಳ ಲಾಭ ಗಳಿಸಿದೆ.

ಕಂಪೆನಿಯ ನಿವ್ವಳ ಲಾಭ 2013–14ನೇ ಸಾಲಿನ ಎರಡನೆಯ ತ್ರೈಮಾಸಿಕದಲ್ಲಿ ರೂ 2,407 ಕೋಟಿಯಷ್ಟಿತ್ತು. ಪ್ರಸಕ್ತ ಅವಧಿಯಲ್ಲಿ ಇದು ಶೇ 28.6ರಷ್ಟು ಗಣನೀಯ ಏರಿಕೆ ಕಂಡಿದೆ. ಇದರಿಂದ ಕಂಪೆನಿ ಈಗಾಗಲೇ ಷೇರು ಹೊಂದಿರುವವರಿಗೆ ಹೆಚ್ಚುವರಿಯಾಗಿ ಒಂದು ಷೇರನ್ನು ಉಚಿತವಾಗಿ ನೀಡುವುದಾಗಿ ಪ್ರಕಟಿಸಿದೆ. ಪ್ರತಿ ಷೇರಿಗೆ ರೂ 30ರಂತೆ ಮಧ್ಯಂತರ ಲಾಭಾಂಶವನ್ನೂ ಪ್ರಕಟಿಸಿದೆ.

‘ಸಿಇಒ’ ಸಿಕ್ಕಾ ಮೋಡಿ
2ನೇ ತ್ರೈಮಾಸಿಕದ ಫಲಿತಾಂಶ ಐ.ಟಿ ಮಾರುಕಟ್ಟೆಗೆ ಇನ್ಫೊಸಿಸ್ನ ಪುನರಾಗಮನವನ್ನು ಸೂಚಿಸುತ್ತದೆ ಎಂದು ಕಂಪೆನಿಯ ಹೊಸ ‘ಸಿಇಒ’ ವಿಶಾಲ್ ಸಿಕ್ಕಾ ಹೇಳಿದ್ದಾರೆ. ಸಿಕ್ಕಾ ಆಗಸ್ಟ್ನಲ್ಲಿ ‘ಸಿಇಒ’ ಆಗಿ ನೇಮಕಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಮಾರಾಟ ಹೆಚ್ಚಿರುವುದೇ ನಿವ್ವಳ ಲಾಭ ಏರಿಕೆಗೆ ಕಾರಣ. ಒಟ್ಟಾರೆ ವರಮಾನವೂ 2ನೇ ತ್ರೈಮಾಸಿಕದಲ್ಲಿ ರೂ 13,342 ಕೋಟಿಗೆ ಏರಿಕೆ ಕಂಡಿದೆ. ಇದರಿಂದ ಕಂಪೆನಿ 2014–15ನೇ ಸಾಲಿನ ವರಮಾನ ಮುನ್ನೋಟದಲ್ಲಿ ಶೇ 79ರಷ್ಟು ಏರಿಕೆ ಅಂದಾಜು ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.