ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಬ್ಬರು ಶಿವಸೇನೆ ಶಾಸಕರ ಅಮಾನತು

ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ಟೋಲ್‌ ಸಂಗ್ರಹ ವಿವಾದ
Last Updated 9 ಜೂನ್ 2014, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಟೋಲ್‌ ಸಂಗ್ರ­ಹದ ವಿರುದ್ಧ ಕೊಲ್ಹಾ­ಪುರದಲ್ಲಿ ನಡೆ­ಯುತ್ತಿರುವ ಪ್ರತಿಭಟನೆ ಮಹಾರಾಷ್ಟ್ರ ವಿಧಾನಸಭೆಯಲ್ಲೂ ಪ್ರತಿ­-­ಧ್ವನಿಸಿದ್ದು, ಈ ವಿವಾದಕ್ಕೆ ಸಂಬಂಧಿಸಿ­ದಂತೆ  ಕಲಾಪಕ್ಕೆ ಅಡ್ಡಿಪಡಿಸಿದಕ್ಕಾಗಿ ಶಿವ­ಸೇನೆಯ ಇಬ್ಬರು ಸದಸ್ಯರನ್ನು ಸದನ­ದಿಂದ ಅಮಾನತು ಮಾಡ­ಲಾಗಿದೆ.

ವಿಧಾನಸಭೆಯಲ್ಲಿ ಬಿಜೆಟ್‌ ಕುರಿತು ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಶಿವಸೇನೆಯ ಶಾಸಕ ಸುಜಿತ್‌ ಮಿಂಚೆ­ಕರ್‌ ಮತ್ತು ರಾಜೇಶ ಕ್ಷೀರಸಾಗರ್‌ ಅವರು ಎದ್ದು ನಿಂತು ಟೋಲ್‌ ಸಂಗ್ರಹ ಹಿಂದಕ್ಕೆ ಪಡೆಯಬೇಕು ಎಂದು ಘೋಷಣೆ ಕೂಗಲು ಆರಂಭಿಸಿದರು.

ಘೋಷಣೆ ಕೂಗುತ್ತಿದ್ದ ಸದಸ್ಯರು ಸ್ಪೀಕರ್‌ ಅವರ ಬಳಿ ಬಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸಭೆಯಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಗಿದ್ದರಿಂದ ಸಭಾಧ್ಯಕ್ಷರು ಕಲಾಪವನ್ನು ಹತ್ತು ನಿಮಿಷಗಳ ಕಾಲ ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT