ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸ್ರೇಲ್‌ನ ಮೂವರು ರಾಜತಾಂತ್ರಿಕ ಅಧಿಕಾರಿಗಳು ಸ್ವದೇಶಕ್ಕೆ

Last Updated 8 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಇಲ್ಲಿನ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ವಲಸೆ ಅಧಿಕಾರಿ ಮೇಲೆ ಹಲ್ಲೆ ಮಾಡಿದ ಆಪಾದನೆಗೆ ಗುರಿ­ಯಾ­ಗಿ­ರುವ ಇಸ್ರೇಲ್‌ನ ಮೂವರು ರಾಜ­ತಾಂತ್ರಿಕ ಅಧಿಕಾರಿಗಳನ್ನು ಸ್ವದೇಶಕ್ಕೆ ವಾಪಸು ಕಳುಹಿಸಲಾಗಿದೆ ಎಂದು ಇಸ್ರೇಲ್‌ನ ರಾಯಭಾರ ಕಚೇರಿ ಮಂಗಳ­ವಾರ ತಿಳಿಸಿದೆ.

ಈ ಮೂವರು ರಾಜತಾಂತ್ರಿಕ ಅಧಿ­ಕಾರಿ­ಗಳಲ್ಲಿ ಒಬ್ಬರು ವಲಸೆ ಅಧಿಕಾರಿ ಮೇಲೆ ಹಲ್ಲೆ ಮಾಡಿದ್ದು, ಇನ್ನಿಬ್ಬರು ಒರ­ಟಾಗಿ ವರ್ತಿಸಿದರು ಎಂಬ ಆರೋ­ಪದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದರು. ಇದನ್ನು ಗಂಭೀರವಾಗಿ ಪರಿ­ಗಣಿಸಿದ ಇಸ್ರೇಲ್‌ ದೂತಾವಾಸ, ಈ ಮೂವರನ್ನು  ಸ್ವದೇಶಕ್ಕೆ ವಾಪಸು ಕಳು­ಹಿ­ಸುವ ನಿರ್ಧಾರವನ್ನು ಸ್ವಯಂ ಪ್ರೇರಿತ­ವಾಗಿ ಕೈಗೊಂಡಿದೆ.

ಈ ಮಧ್ಯೆ, ಪ್ರಕರಣ ಕುರಿತಂತೆ ವಿವರವಾದ ವರದಿಯನ್ನು ಸಿದ್ಧ ಪಡಿಸಿ ವಿದೇಶಾಂಗ ಸಚಿವಾಲಯಕ್ಕೆ ಕಳುಹಿಸ­ಲಾಗು­ವುದು ಎಂದು ಪೊಲೀಸ್‌ ಮೂಲ­ಗಳು ತಿಳಿಸಿವೆ. ಈ ಮೂವರಿಗೆ ರಾಜ­ತಾಂತ್ರಿಕ ಅಧಿಕಾರಿಗಳಿಗೆ ಇದ್ದ ರಕ್ಷಣೆ ಇದ್ದ ಕಾರಣ ಅವರನ್ನು ಬಂಧಿಸಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT