ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಜಿಪ್ಟ್‌ ರಸ್ತೆ ಅಪಘಾತ: 13 ಮಂದಿ ಸಾವು

Last Updated 30 ಮೇ 2015, 10:39 IST
ಅಕ್ಷರ ಗಾತ್ರ

ಕೈರೊ (ಪಿಟಿಐ): ಭದ್ರತಾ ವಾಹನ ಮತ್ತು ಟ್ರಕ್ ನಡುವೆ ಸಂಭವಿಸಿದ ಅಪಘಾತದಲ್ಲಿ 13 ಮಂದಿ ಪೊಲೀಸರು ಮೃತಪಟ್ಟು, ಮೂವರು ಗಾಯಗೊಂಡಿರುವ ಘಟನೆ ಇಲ್ಲಿ ಶುಕ್ರವಾರ ನಡೆದಿದೆ.

ಕೈರೊದಿಂದ 115 ಕಿ.ಮೀ ದೂರದಲ್ಲಿರುವ ಸುಯೆಫ್‌–ಮೆನ್ಯ ರಸ್ತೆಯಲ್ಲಿ ಈ ಅವಘಡ ಸಂಭವಿಸಿದೆ. ಗಾಯಗೊಂಡವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಕಳಪೆ ಗುಣಮಟ್ಟದ ರಸ್ತೆ, ಸೂಕ್ತ ನಿರ್ವಹಣೆ ಇಲ್ಲದ ವಾಹನಗಳು ಹಾಗೂ ಅಸಡ್ಡೆ ಚಾಲನೆಯ ಕಾರಣದಿಂದ ವಿಶ್ವದಲ್ಲಿಯೇ ಈಜಿಪ್ಟ್‌ ಹೆಚ್ಚು ಅಪಘಾತದ ಪ್ರಮಾಣ ಹೊಂದಿದೆ.

ಈಜಿಪ್ಟ್‌ ಅಧ್ಯಕ್ಷ ಅಬ್ದೆಲ್‌ ಫತ್ತಾಹ್‌ ಅಲ್–ಸಿಸಿ ಅವರು ರಸ್ತೆ ಅಪಘಾತಗಳನ್ನು ತಡೆಗಟ್ಟಲು ಯೋಜನೆ ರೂಪಿಸಲು ಸಮುದಾಯ ಅಭಿವೃದ್ಧಿ ತಜ್ಞರ ತಂಡಕ್ಕೆ ಸೂಚಿಸಿದ್ದಾರೆ.

ಅಪಘಾತ ಪ್ರಮಾಣ ತಗ್ಗಿಸಲು ಸಂಚಾರ ನಿಯಮಗಳಿಗೆ ತಿದ್ದುಪಡಿ ತರಲು ಸರ್ಕಾರ ಚಿಂತಿಸಿದ್ದು, ಹೊಸ ತಿದ್ದುಪಡಿಯ ಪ್ರಕಾರ ಮಾದಕ ವಸ್ತುಗಳನ್ನು ಸೇವಿಸಿ ಚಾಲನೆ ಮಾಡುವವರು ದಂಡದ ಜತೆಗೆ ಕನಿಷ್ಠ ಒಂದು ವರ್ಷ ಜೈಲು ವಾಸ ಅನುಭವಿಸಬೇಕಾಗುತ್ತದೆ.

ಅಪಘಾತದಲ್ಲಿ ಒಬ್ಬ ಅಥವಾ ಹೆಚ್ಚು ವ್ಯಕ್ತಿಗಳು ಗಾಯಗೊಂಡರೆ ಚಾಲಕನಿಗೆ ಕನಿಷ್ಠ ಎರಡು ವರ್ಷಗಳ ಕಾಲ ಜೈಲು ಶಿಕ್ಷೆ ನೀಡಲಾಗುವುದು. ವಿಶ್ವ ಆರೋಗ್ಯ ಸಂಸ್ಥೆಯ ಅಂಕಿಅಂಶಗಳ ಪ್ರಕಾರ ವಿಶ್ವದಲ್ಲಿಯೇ ಈಜಿಪ್ಟ್‌ ಅಪಘಾತದಲ್ಲಿ 10ನೇ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಭಾರತ ಹಾಗೂ ಚೀನಾ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT