ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರಾಖಂಡದಲ್ಲಿ ಮೇಘಸ್ಫೋಟ, ಭೂಕುಸಿತ: 12 ಸಾವು

Last Updated 1 ಜುಲೈ 2016, 9:42 IST
ಅಕ್ಷರ ಗಾತ್ರ

ಪಿಥೊರ್‌ಘರ್‌, ಗೋಪೇಶ್ವರ್(ಪಿಟಿಐ): ಉತ್ತರಾಖಂಡದಲ್ಲಿ ಮತ್ತೆ ಮೇಘಸ್ಫೋಟ ಸಂಭವಿಸಿದ್ದು, ಶುಕ್ರವಾರ ಅಲ್ಲಲ್ಲಿ ಸಂಭವಿಸಿರುವ ಭೂಕುಸಿತ ಹಾಗೂ ಪ್ರವಾಹಕ್ಕೆ 12 ಜನ ಸಾವಿಗೀಡಾಗಿದ್ದಾರೆ. 25 ಮಂದಿ ಕಾಣೆಯಾಗಿದ್ದಾರೆ.

ಪಿಥೋರ್‌ಘರ್‌ ಹಾಗೂ ಚಮೋಲಿ ಜಿಲ್ಲೆಯ ಗ್ರಾಮಗಳಲ್ಲಿ ಸಂಭವಿಸಿದ ಭೂಕುಸಿತದಿಂದ ಹಲವು ಮನೆಗಳು ಹಾನಿಗೀಡಾಗಿವೆ. ಪಿಥೊರ್‌ಘರ್‌ ಜಿಲ್ಲೆಯಲ್ಲಿ ಎಂಟು ಜನ, ಚಮೋಲಿ ಜಿಲ್ಲೆಯಲ್ಲಿ ನಾಲ್ವರು ಮೃತಪಟ್ಟ ಬಗ್ಗೆ ವರದಿಯಾಗಿದೆ.

ಪಿಥೊರ್‌ಘರ್‌ ಜಿಲ್ಲೆಯ ಸಿಂಗಲಿ ಪ್ರದೇಶದ 50 ಕಿ.ಮೀ. ವ್ಯಾಪ್ತಿಯಲ್ಲಿ ಬೆಳಿಗ್ಗೆ ಮೇಘಸ್ಫೋಟ ಸಂಭವಿಸಿದ್ದು ಎರಡು ತಾಸಿನಲ್ಲಿ 100 ಮಿ.ಮೀ. ಮಳೆ ಬಿದ್ದಿದೆ. ಇದರಿಂದ ಏಳು ಹಳ್ಳಿಗಳು ಜಲಾವೃತವಾಗಿದ್ದು, ಮನೆಗಳಿಗೆ ನೀರು ನುಗ್ಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಂಗಲಿಗ್ರಾಮದಲ್ಲಿ ಐದು ಶವಗಳು ಪತ್ತೆಯಾಗಿದ್ದು, ಕಾಣೆಯಾದವರಿಗಾಗಿ ಹುಡಕಾಟ ನಡೆದಿದೆ. ಸಂಕಷ್ಟದಲ್ಲಿರುವವರ ರಕ್ಷಣೆಗೆ ಪರಿಹಾರ ಕಾರ್ಯ ಕೈಗೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT