ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರಾಖಂಡದ 18 ಪೊಲೀಸರು ತಪ್ಪಿತಸ್ಥರು

ನಕಲಿ ಎನ್‌ಕೌಂಟರ್‌ ಪ್ರಕರಣ
Last Updated 6 ಜೂನ್ 2014, 20:03 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ನಕಲಿ ಎನ್‌­ಕೌಂಟರ್‌ ಪ್ರಕರಣವೊಂದಕ್ಕೆ ಸಂಬಂಧಿಸಿ­ದಂತೆ ಉತ್ತರಾಖಂಡದ 18 ಪೊಲೀಸ­ರನ್ನು ತಪ್ಪಿತಸ್ಥರು ಎಂದು ದೆಹಲಿಯ ಸಿಬಿಐ ವಿಶೇಷ ಕೋರ್ಟ್‌ ಶುಕ್ರವಾರ ಘೋಷಿ­ಸಿದೆ. ಶಿಕ್ಷೆ ಪ್ರಮಾಣವನ್ನು ಶನಿವಾರ (ಜೂನ್‌ 7) ಪ್ರಕಟಿಸು­ವುದಾಗಿ ತಿಳಿಸಿದೆ.

ಇವರಲ್ಲಿ ಏಳು ಮಂದಿ ವಿರುದ್ಧ ಕೊಲೆ ಆಪಾದನೆ, ಉಳಿದ 10 ಜನರ ವಿರುದ್ಧ ಕ್ರಿಮಿನಲ್‌ ಒಳಸಂಚು, ಅಪ­ಹರಣ ಮತ್ತಿತರ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ಮತ್ತೊಬ್ಬ ತಪ್ಪಿತಸ್ಥ ಬೇರೊಂದು ಪ್ರಕರಣದಲ್ಲಿ ಈಗಾಗಲೇ ಜೈಲು ಶಿಕ್ಷೆ ಅನುಭವಿಸು­ತ್ತಿರುವ ಕಾರಣ ಆತನಿಗೆ ಈ ಪ್ರಕರಣ­ದಲ್ಲಿ ಕೋರ್ಟ್‌ ವಿನಾಯ್ತಿ ನೀಡಿದೆ.

ಗಾಜಿಯಾಬಾದ್ ಮೂಲದ ಎಂಬಿಎ ಪದವೀಧರ ರಣವಿೀರ್‌ ಸಿಂಗ್‌ 2009ರ ಜುಲೈನಲ್ಲಿ ನೌಕರಿ ಹುಡುಕಿ­ಕೊಂಡು ಡೆಹ್ರಾಡೂನ್‌ಗೆ ಹೋಗಿದ್ದರು. ಅಲ್ಲಿನ ಅರಣ್ಯ ವ್ಯಾಪ್ತಿಯಲ್ಲಿ ಪೊಲೀ­ಸರು ಎನ್‌ಕೌಂಟರ್‌ ಹೆಸರಿನಲ್ಲಿ ಸಿಂಗ್ ಅವರನ್ನು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿದ್ದ ಪ್ರಕರಣ ಇದಾಗಿದೆ.

2009ರ ಜುಲೈ 3ರಂದು ಉತ್ತರಾಖಂಡಕ್ಕೆ ರಾಷ್ಟ್ರಪತಿ ಅವರು ಭೇಟಿ ನೀಡಿದ್ದ ಕಾರಣ ಬಿಗಿ ಭದ್ರತೆ ಆಯೋಜಿಸಲಾಗಿತ್ತು. ರಣವೀರ್‌ (ಹತ್ಯೆಯಾದವ) ಇಬ್ಬರು ಸ್ನೇಹಿತರೊಂದಿಗೆ ಬೈಕ್‌ನಲ್ಲಿ ವೇಗವಾಗಿ ಸಂಚರಿಸುತ್ತಿದ್ದ. ತಪಾಸಣೆಗಾಗಿ ತಡೆದು ನಿಲ್ಲಿಸಿದ ಪೊಲೀಸರಿಂದ ರಣವೀರ್‌ ರಿವಾಲ್ವಾರ್‌ ಕಸಿದುಕೊಂಡ ಎಂಬ ಉತ್ತರಾಖಂಡ ಪೊಲೀಸರು ವಾದವನ್ನು ನ್ಯಾಯಾಲಯ ತಳ್ಳಿಹಾಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT