ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗಾರ್ಹತೆಗೆ ಏನೆಲ್ಲಾ...

Last Updated 17 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ನಿರುದ್ಯೋಗ ಸಮಸ್ಯೆಯನ್ನು ಎದುರಿಸುತ್ತಿರುವ ಯುವಜನತೆಯನ್ನು ‘ಉದ್ಯೋಗದೆಡೆಗೆ ಮುನ್ನುಗ್ಗಿ’ ಎಂಬ ಘೋಷ ವಾಕ್ಯದೊಂದಿಗೆ ಕೌಶಲದ ತರಬೇತಿ ನೀಡುತ್ತಿರುವ ಸಂಸ್ಥೆ ಟೀಮ್‌ಲೀಸ್. ಭಾರತದಲ್ಲಿ ಹಲವು ಕಂಪೆನಿಗಳಿಗೆ ಮಾನವ ಸಂಪನ್ಮೂಲ ಸೇವೆ ನೀಡುತ್ತಿದೆ ಈ ಕಂಪೆನಿ.

ಭಾರತದಲ್ಲಿ ಕೈಗಾರಿಕೆಗಳು ಅಭಿವೃದ್ಧಿ ಹೊಂದುತ್ತಿರುವಂತೆ, ಉದ್ಯೋಗಾವಕಾಶಗಳೂ ಹೆಚ್ಚಾಗಿವೆ. ಆದರೆ ಇರುವ ಅವಕಾಶಗಳ ಬಗ್ಗೆ ಪೂರಕ ಮಾಹಿತಿ ಮಾತ್ರ ಜನರಿಗೆ ಲಭ್ಯವಿಲ್ಲ. ಜೊತೆಗೆ ಸಂಸ್ಥೆಯೊಂದಕ್ಕೆ ಅಗತ್ಯ ಕೌಶಲ ಹೊಂದಿರುವ ನೌಕರರಲ್ಲೂ ಕೊರತೆ ಎದ್ದು ಕಾಣುತ್ತಿದೆ. ಇಂಥ ಸಮಸ್ಯೆಗಳ ನಿವಾರಣೆಗೆಂದು ಹುಟ್ಟಿಕೊಂಡಿದ್ದು ವೃತ್ತಿಪರ ಕೌಶಲ ತರಬೇತಿ ನೀಡುವ ಸಂಸ್ಥೆಗಳು.

ನಿರುದ್ಯೋಗ ಸಮಸ್ಯೆಯನ್ನು ಎದುರಿಸುತ್ತಿರುವ ಯುವಜನತೆಯನ್ನು ‘ಉದ್ಯೋಗದೆಡೆಗೆ ಮುನ್ನುಗ್ಗಿ’ ಎಂಬ ಘೋಷ ವಾಕ್ಯದೊಂದಿಗೆ ಕೌಶಲದ ತರಬೇತಿ ನೀಡುತ್ತಿರುವ ಸಂಸ್ಥೆ ಟೀಮ್‌ಲೀಸ್. ಭಾರತದಲ್ಲಿ ಹಲವು ಕಂಪೆನಿಗಳಿಗೆ ಮಾನವ ಸಂಪನ್ಮೂಲ ಸೇವೆ ನೀಡುತ್ತಿರುವ ಕಂಪೆನಿಯ ಉಪಾಧ್ಯಕ್ಷೆ ನೀತಿ ಶರ್ಮಾ ಅವರು ಯುವಜನತೆಯ ನಿರುದ್ಯೋಗ ಸಮಸ್ಯೆ ಮತ್ತು ಅದನ್ನು ನಿವಾರಿಸಿಕೊಳ್ಳಬಹುದಾದ ಹಲವು ತರಬೇತಿಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ.

2002ರಿಂದ ಆರಂಭಗೊಂಡಿರುವ ಟೀಮ್‌ಲೀಸ್‌, ಟೆಲಿಕಾಂ, ಐಟಿ, ಬ್ಯಾಂಕಿಂಗ್, ರೀಟೇಲ್ ಮತ್ತು ಉತ್ಪಾದನಾ ಕ್ಷೇತ್ರದಲ್ಲಿನ ಹಲವು
ಉದ್ಯೋಗಾವಕಾಶಗಳ ಕುರಿತು ಮಾಹಿತಿ ನೀಡುತ್ತಾ ಬಂದಿದ್ದು, ಐಐಜೆಟಿ ಎಂಬ ಹೆಸರಿನಲ್ಲಿ ವೃತ್ತಿಪರ ತರಬೇತಿಯನ್ನೂ ನೀಡುತ್ತಿದೆ. ಐದು ನಿಮಿಷಕ್ಕೆ ಒಬ್ಬರಿಗೆ ಕೆಲಸದಂತೆ ವರ್ಷಕ್ಕೆ ಸರಾಸರಿ ಎರಡು ಲಕ್ಷ ಮಂದಿಗೆ ಉದ್ಯೋಗಾವಕಾಶವನ್ನು ಒದಗಿಸುತ್ತಿದೆ.

ಶಿಕ್ಷಣ, ಉದ್ಯೋಗಾರ್ಹತೆ ಹಾಗೂ ಉದ್ಯೋಗ ಈ ಮೂರರ ನಡುವಿನ ಅಂತರವನ್ನು ತುಂಬುವ ಉದ್ದೇಶದೊಂದಿಗೆ ಸರ್ಕಾರದೊಂದಿಗೆ ಕೈ ಜೋಡಿಸಿ ಎಂಪ್ಲಾಯ್ಮೆಂಟ್ ಎಕ್ಸ್‌ಚೇಂಜ್ ಕೇಂದ್ರಗಳನ್ನೂ ನಿರ್ಮಿಸಿದೆ. ಐಐಜೆಟಿ ಎಜುಕೇಶನ್ ಇನ್ಸ್‌ಟಿಟ್ಯೂಟ್ ಬ್ರಾಂಡ್‌ನಲ್ಲಿ ಕೆಲಸ ನಿರ್ವಹಿಸುತ್ತಿರುವ ಸಂಸ್ಥೆ, ಕರ್ನಾಟಕದಲ್ಲಿ ಐದು ತರಬೇತಿ ಸಂಸ್ಥೆ ಹಾಗೂ ನಾಲ್ಕು ಎಂಪ್ಲಾಯ್ಮೆಂಟ್ ಎಕ್ಸ್‌ಚೇಂಜ್ ಕೇಂದ್ರಗಳನ್ನು ಹೊಂದಿದೆ.

ತರಬೇತಿ ಬಯಸುವುದಿಲ್ಲ
‘ಇಂದಿನ ಯುವಜನರು ಓದು ಮುಗಿದಾಕ್ಷಣ ಒಳ್ಳೆ ಸಂಬಳ ಸಿಗುವ ಕೆಲಸವೇ ಬೇಕೆಂದು ಬಯಸುತ್ತಾರೆ. ಆದರೆ ಅದಕ್ಕೆ ತಕ್ಕ ಅರ್ಹತೆಯನ್ನು ಪಡೆಯುವಲ್ಲಿ ಮಾತ್ರ ವಿಫಲರಾಗುತ್ತಿದ್ದಾರೆ. ಭಾರತದಲ್ಲಿ ನಿರುದ್ಯೋಗ ಸಮಸ್ಯೆಯಿದೆ ಎಂಬುದನ್ನು ಹೇಳುತ್ತಾರೆಯೇ ಹೊರತು ಅದನ್ನು ನಿವಾರಣೆ ಮಾಡುವಲ್ಲಿ ಪ್ರಾಯೋಗಿಕವಾಗಿ ಯೋಚಿಸುವವರು ಕಡಿಮೆಯಾಗಿದ್ದಾರೆ. ಆ ನಿಟ್ಟಿನಲ್ಲಿ ವೃತ್ತಿ ಕೌಶಲ ಅಗತ್ಯ’ ಎನ್ನುತ್ತಾರೆ ನೀತಿ.

ಉದ್ಯೋಗಾರ್ಹತೆ ಹೊಂದಲು ಶಿಕ್ಷಣದಲ್ಲಿ ಎಷ್ಟೇ ಮುಂದಿದ್ದರೂ ಕೆಲಸಕ್ಕೆ ಅಗತ್ಯವಾದ ಕೌಶಲ ಹೊಂದುವಲ್ಲಿ ಕೆಲವರು ಹಿಂದೆ ಬೀಳುತ್ತಾರೆ. ಇನ್ನೂ ಕೆಲವರು ಮೂಲ ಶಿಕ್ಷಣವನ್ನು ಮಾತ್ರ ಪಡೆದುಕೊಂಡು ಕೆಲಸ ಸಿಗದೆ ಪರದಾಡುತ್ತಿರುತ್ತಾರೆ. ಇದಕ್ಕೆ ಭಾಷೆ, ಸಂವಹನ ಕಲೆ, ನಡವಳಿಕೆಯೂ ಕಾರಣವಾಗಿರಬಹುದು. ಅದಕ್ಕೆಂದು ಇಂಗ್ಲಿಷ್ ಸಂವಹನ ತರಗತಿ, ವ್ಯಕ್ತಿತ್ವ ವಿಕಸನ ತರಬೇತಿ, ಕಂಪ್ಯೂಟರ್, ಇನ್ನಿತರ ಅಗತ್ಯ ತಾಂತ್ರಿಕ ತರಬೇತಿಯನ್ನೂ ನೀಡುತ್ತಿದೆ. ವಿದ್ಯಾರ್ಥಿಗಳಿಗೆಂದು ಪಾರ್ಟ್‌ ಟೈಮ್ ಕೆಲಸಗಳಿಗೂ ಹಲವು ಅವಕಾಶಗಳನ್ನು ನೀಡಿದೆ.

ಶಿಕ್ಷಣ ಪದ್ಧತಿ ಬದಲಾಗಬೇಕು
ಈಗ ಶಿಕ್ಷಣವೂ ವ್ಯವಹಾರವಾಗುತ್ತಿರುವ ಕಾರಣ, ಎಂಥ ಶಿಕ್ಷಣ ಪದ್ಧತಿಯೂ ಶಿಕ್ಷಣದ ಅವಧಿ ಮುಗಿದ ನಂತರ ಒಬ್ಬ ವಿದ್ಯಾರ್ಥಿ ಉದ್ಯೋಗಕ್ಕೆ ಅರ್ಹನಿರುವಂತೆ ತಯಾರು ಮಾಡುತ್ತಿದೆ ಎಂದು ಹೇಳಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಶೈಕ್ಷಣಿಕ ಹಂತದಲ್ಲೇ ಕೆಲವು ಔದ್ಯೋಗಿಕ ತರಬೇತಿಗಳನ್ನು ನೀಡುವುದು ಒಳ್ಳೆಯದು. ಈ ನಿಟ್ಟಿನಲ್ಲಿ ಸರ್ಕಾರದೊಂದಿಗೆ ಕೈ ಜೋಡಿಸಿ, ಓದುವಾಗಲೇ ಉದ್ಯೋಗಕ್ಕೆ ಅಗತ್ಯವಾದ ಆತ್ಮವಿಶ್ವಾಸ, ಸಂವಹನ ಇನ್ನಿತರ ಕೌಶಲಗಳನ್ನು ನೀಡುವ ಯೋಜನೆಯನ್ನೂ ಹೊಂದಿದೆ. ಈ ನಿಟ್ಟಿನಲ್ಲಿ ಲರ್ನಿಂಗ್ ಸರ್ವೀಸ್, ಎಂಟರ್‌ಪ್ರೈಸ್ ಲರ್ನಿಂಗ್ ಸರ್ವೀಸ್ ಇನ್ಸ್‌ಟಿಟ್ಯೂಷನಲ್ ಲರ್ನಿಂಗ್, ಪ್ಲೇಸ್‌ಮೆಂಟ್ ಸರ್ವೀಸ್ ಹಾಗೂ ಅಸೆಸ್ಮೆಂಟ್ ಸರ್ವೀಸ್ ಹೀಗೆ ಹಲವು ಸೇವೆಗಳನ್ನು ಒದಗಿಸುತ್ತಿದೆ. ಗ್ರಾಮೀಣ ಯುವಜನತೆಗೆಂದೇ ಜಿಲ್ಲೆಗಳಲ್ಲೂ ಈ ವೃತ್ತಿ ತರಬೇತಿ ಕೇಂದ್ರಗಳನ್ನು ಪರಿಚಯಿಸಿದೆ. ಇದರಿಂದ ಹಳ್ಳಿಗಳಲ್ಲೇ ಉತ್ತಮ ಉದ್ಯೋಗ ಸೃಷ್ಟಿಯಾಗುವಂತೆ ಮಾಡಿ, ನಗರಗಳಿಗೆ ವಲಸೆ ಹೋಗುವುದನ್ನೂ ತಡೆಯಬಹುದು ಎಂಬುದು ಸಂಸ್ಥೆಯ ಉದ್ದೇಶ. ಎರಡು ತಿಂಗಳಿನಿಂದ ಒಂದು ವರ್ಷದ ಅವಧಿಯ ಕೋರ್ಸ್‌ಗಳು ಇಲ್ಲಿವೆ.
ಮಾಹಿತಿಗೆ: 080 3300 2345.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT