ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉನ್ನತೀಕರಣದಲ್ಲಿ ತಾರತಮ್ಯ...

Last Updated 1 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ರಾಜ್ಯದ ಖಜಾನೆ ಇಲಾಖೆಯಲ್ಲಿ ಖಜಾನೆ­ಗಳನ್ನು ಉನ್ನತೀಕರಿಸುವ ಕಾರ್ಯ ನಡೆದಿದೆ. ಒಟ್ಟು 57 ಹೊಸ ಹುದ್ದೆಗಳನ್ನು ಸೃಜಿಸಿ 42 ಖಜಾನೆಗಳನ್ನು ಉನ್ನತೀಕರಿಸಲು ಉದ್ದೇಶಿಸ­ಲಾಗಿದೆ. 

ಆಶ್ಚರ್ಯವೆಂದರೆ ದಕ್ಷಿಣ ಕರ್ನಾಟಕ­ದಲ್ಲಿ 34 ಖಜಾನೆಗಳು ಉನ್ನತೀಕರಣ ಪ್ರಕ್ರಿಯೆಗೆ ಒಳಗಾಗಿವೆ.  ಹೈದರಾಬಾದ್‌ ಕರ್ನಾಟಕದಲ್ಲಿ ಐದು ಖಜಾನೆಗಳು ಉನ್ನತೀಕರಣಗೊಳ್ಳುತ್ತಿವೆ.  ಉಳಿದಂತೆ ದಾವಣಗೆರೆ, ಹಾವೇರಿ, ಧಾರವಾಡ, ಉತ್ತರ ಕನ್ನಡ, ವಿಜಯಪುರ, ಬೆಳಗಾವಿ, ಬಾಗಲಕೋಟೆ, ಉಡುಪಿ, ಗದಗ ಇಷ್ಟೂ ಜಿಲ್ಲೆಗಳಲ್ಲಿ ಬರೀ ಮೂರು ಖಜಾನೆಗಳು ಉನ್ನತೀಕರಣವಾಗುತ್ತಿವೆ. ಏಕೆ ಹೀಗೆ?

ಈ ಭಾಗದ ಖಜಾನೆಗಳು ಉನ್ನತೀಕರಣಕ್ಕೆ ಅರ್ಹವಲ್ಲವೇ? ಯಾರಾದರೂ ಇದರ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆಯೇ? ಕಾಲ ಮಿಂಚಿ ಹೋದ ನಂತರ ಚಿಂತಿಸಿ ಫಲವೇನು? ಇನ್ನುಳಿದ ಖಜಾನೆಗಳಾದ ಶಿರಸಿ, ಹರಪನಹಳ್ಳಿ, ಜಮಖಂಡಿ, ಸುರಪುರ, ಶಹಾಪುರ ಮುಂತಾದವುಗಳು ಉನ್ನತೀಕರಣಕ್ಕೆ  ಅರ್ಹವಲ್ಲವೇ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT