ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪಖಂಡಕ್ಕೆ ನೊಬೆಲ್ ಶಾಂತಿ

ಪ್ರಶಸ್ತಿ ಹಂಚಿಕೊಂಡ ಭಾರತದ ಸತ್ಯಾರ್ಥಿ, ಪಾಕಿಸ್ತಾನದ ಮಲಾಲಾ
Last Updated 10 ಅಕ್ಟೋಬರ್ 2014, 20:07 IST
ಅಕ್ಷರ ಗಾತ್ರ

ಓಸ್ಲೋ(ಪಿಟಿಐ): ಭಾರತದ ಮಕ್ಕಳ ಹಕ್ಕುಗಳ ಹೋರಾಟಗಾರ ಕೈಲಾಶ್‌ ಸತ್ಯಾರ್ಥಿ ಹಾಗೂ ಪಾಕಿಸ್ತಾನದಲ್ಲಿ ಹೆಣ್ಣುಮಕ್ಕಳ ಶಿಕ್ಷಣದ ಹೋರಾಟ­ಗಾರ್ತಿ ಮಲಾಲಾ ಯೂಸುಫ್‌ಝೈ ಅವರು ೨೦೧೪ನೇ ಸಾಲಿನ ನೊಬೆಲ್‌ ಶಾಂತಿ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.

೬೦ ವರ್ಷದ ಸತ್ಯಾರ್ಥಿ ಅವರು ‘ಬಚ್‌ಪನ್‌ ಬಚಾವೋ ಆಂದೋಲನ್‌’ (ಬಾಲ್ಯ ರಕ್ಷಿಸಿ ಆಂದೋಲನ) ಸ್ವಯಂ­ಸೇವಾ ಸಂಸ್ಥೆ ಮೂಲಕ ೩೦ ವರ್ಷಗ­ಳಿಂದಲೂ ಮಕ್ಕಳ ಹಕ್ಕು­ಗಳ ರಕ್ಷಣೆಗಾಗಿ ಹೋರಾಟ ಮಾಡುತ್ತಿ­ದ್ದಾರೆ. ಮಕ್ಕಳ ಮಾರಾಟ, ಬಾಲ ಕಾರ್ಮಿಕ ಪದ್ಧತಿ ನಿಯಂತ್ರಣಕ್ಕೆ ಈ ಸಂಸ್ಥೆ ಮುಂಚೂಣಿ­ಯಲ್ಲಿ ನಿಂತು ಕೆಲಸ ಮಾಡುತ್ತಿದೆ.

ಮದರ್‌ ತೆರೆಸಾ ಬಳಿಕ ಭಾರತಕ್ಕೆ ನೊಬೆಲ್‌್ ಶಾಂತಿ ಪ್ರಶಸ್ತಿ ಸಂದಿರುವುದು ಇದು ಎರಡನೇ ಬಾರಿ.
‘ಬಚ್‌ಪನ್‌ ಬಜಾವೋ ಆಂದೋ­ಲನ್‌’ ಸ್ವಯಂಸೇವಾ ಸಂಸ್ಥೆ ನಡೆಸು­­­ತ್ತಿರುವ ಸತ್ಯಾರ್ಥಿ, ಗಾಂಧಿ ಪರಂಪರೆ­ಮುಂದುವರಿ­ಸಿಕೊಂಡು ಬಂದಿದ್ದಾರೆ. ಆರ್ಥಿಕ ಲಾಭ­ಕ್ಕಾಗಿ ಮಕ್ಕಳ ಮೇಲೆ ನಡೆಯುತ್ತಿರುವ ಶೋಷಣೆ­ಗಳ ವಿರುದ್ಧ ವಿವಿಧ ಸ್ವರೂಪದ ಶಾಂತಿಯುತ ಪ್ರತಿಭಟನೆಗಳ ನೇತೃತ್ವ ವಹಿಸಿದ್ದಾರೆ’ ಎಂದು ಸಮಿತಿ ತಿಳಿಸಿದೆ.

‘ವಯಸ್ಸು ಚಿಕ್ಕದಾದರೂ ಮಲಾಲಾ ಅನೇಕ ವರ್ಷಗಳಿಂದ ಹೆಣ್ಣುಮಕ್ಕಳ ಶಿಕ್ಷಣ­ಕ್ಕಾಗಿ ಹೋರಾಟ ನಡೆಸುತ್ತ ಬಂದಿ­ದ್ದಾರೆ. ತಮ್ಮಂತೆಯೇ ಇರುವವರ ಸ್ಥಿತಿ­ಗತಿ ಸುಧಾರಿಸುವುದಕ್ಕೆ  ಮಕ್ಕಳು ಹಾಗೂ ಹದಿಹರೆಯದವರೂ ಯಾವ ರೀತಿ ಕೊಡುಗೆ ನೀಡ­ಬಹುದು ಎನ್ನುವು­ದಕ್ಕೆ ಅವರು ಉದಾ­ಹರಣೆ­ಯಾಗಿ ನಿಲ್ಲು­­ತ್ತಾರೆ. ದಿಟ್ಟ ಹೋರಾಟದ ಮೂಲಕ ಹೆಣ್ಣು­ಮಕ್ಕಳ ಶಿಕ್ಷಣದ ಹಕ್ಕುಗಳ ಪ್ರಮುಖ ಧ್ವನಿಯಾಗಿದ್ದಾರೆ’ ಎಂದು ಆಯ್ಕೆ ಸಮಿತಿ ಬಣ್ಣಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT