ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪವಾಸ ಸಾಕು, ಪರಿವರ್ತನೆ ಬೇಕು

ಅಕ್ಷರ ಗಾತ್ರ

ಜನರ ಮೌಢ್ಯವನ್ನು ತೊಡೆದುಹಾಕುವ ಕಾನೂ­ನನ್ನು ಜಾರಿ­ಗೊಳಿಸುವಂತೆ ಸರ್ಕಾರವನ್ನು ಒತ್ತಾ­ಯಿಸಿ ಪ್ರಗತಿಪರರೆಂದು ಬಿಂಬಿಸಿ­ಕೊಂಡ ಕೆಲವು ಸ್ವಾಮಿಗಳ ಗುಂಪೊಂದು ಬೆಂಗ­ಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಮೂರು­ದಿನ ಸತ್ಯಾಗ್ರಹ ನಡೆಸಿತು.

ಇದು ಮಾಧ್ಯಮ­ಗಳಲ್ಲಿ ಹೆಚ್ಚಿನ ಪ್ರಚಾರ ಪಡೆ­ಯಿತು. ಕಾನೂನನ್ನು ಜಾರಿಗೊಳಿಸಲು ಸರ್ಕಾರಕ್ಕೆ ನೀಡಿದ ಮೂರು ದಿನಗಳ ಗಡುವು ನಡುವೆಯೇ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಮಡೆ­ಸ್ನಾನಕ್ಕೆ ಸುಪ್ರೀಂಕೋರ್ಟ್‌ ಅವಕಾಶ ಮಾಡಿಕೊಟ್ಟಿದೆ. ಸ್ವಾಮಿಗಳ ಉಪವಾಸ ಇದರ ಮೇಲೆ ಯಾವ ಪರಿ­ಣಾಮ ಬೀರದಿರುವುದು ಚಿಂತನಾರ್ಹ.

ಸ್ವಾಮಿಗಳ ಹೋರಾಟ ಇದೇ ಮೊದಲ ಸಲವಲ್ಲ. ಹಿಂದೆ ನಡೆದ ಹೋರಾಟಗಳು ಯಾವ ಪರಿಣಾಮ ಬೀರದೆ ಶೂನ್ಯ­ವಾಗಿ ಕರಗಿವೆ. ಇದರಿಂದ ಹೋರಾ­ಟದ ಸ್ವಾಮಿಗಳು ಆತ್ಮಾ­ವಲೋಕನ ಮಾಡಿ­ಕೊ­ಳ್ಳುವ ಸದವಕಾಶ ಈಗ ಒದಗಿಬಂದಿದೆ. ಮೊದಲು ತಮ್ಮ ಮಠಗಳನ್ನು ಶುಚಿಗೊಳಿಸಿ ಸರಿ­ಪಡಿಸ­ಬೇಕು. ‘ಮಠದೊಳಗಣ ಬೆಕ್ಕು ಇಲಿಯ ಕಂಡು ಪುಟನೆ ನೆಗೆದಂತೆ’ ಸಾಧುವಲ್ಲದ ಚಟು­ಟಿಕೆ­ಗಳಿಂದ ಮುಕ್ತ­ಗೊಳಿಸಿ, ಅಲ್ಲಿ ಶ್ರದ್ಧಾಭಕ್ತಿ ನೆಲೆಗೊಳಿಸ­ಬೇಕು. ಅಂದಾಗ ಮಾತ್ರ ಸ್ವಾಮಿಗಳ ಪ್ರಭಾವ ಸಮಾಜದ ಮೇಲೆ ಪರಿಣಾಮ ಬೀರಬ­ಲ್ಲದು. ಅದೆಲ್ಲವನ್ನೂ ಬಿಟ್ಟು ಉದ್ಯಾನ­ಗಳಲ್ಲಿ, ಗಾಜಿನ ಮನೆ­ಯಲ್ಲಿ, ಹೈಟೆಕ್‌ ಭವನ­ಗಳಲ್ಲಿ ಸ್ವಾಮಿ­ಗಳು ಮಾಡುವ ಉಪ­ವಾಸ, ಹೋರಾಟಗಳಿಗೂ ರಾಜ­ಕಾರಣಿ­ಗಳ ಹೋರಾ­ಟಕ್ಕೂ ಯಾವ ವ್ಯತ್ಯಾಸ ಕಾಣು­ವುದಿಲ್ಲ. ಸ್ವಾಮಿಗಳಿಗೆ ಸಮಾಜದ ಸ್ವಾಸ್ಥ್ಯದ  ಬಗ್ಗೆ ನಿಜ­ವಾದ ಕಾಳಜಿ ಇದ್ದರೆ, ಅವರು ಉಪವಾಸ, ಧರಣಿ­ಗಳನ್ನು ತೊರೆದು, ಮಠಗಳಿಂದ ಹೊರ­ಬಂದು, ಕ್ರೈಸ್ತ ಮಿಷ­ನರಿ­ಗಳಂತೆ ಮನೆ ಮನೆಗೆ ತೆರಳಿ ತಮ್ಮ ತತ್ವ­ ಸಂದೇ­ಶದಿಂದ ಜನರ ಮನಸ್ಸನ್ನು ಪರಿವ­ರ್ತಿ­ಸುವ ಸೇವೆಗೆ ತೊಡಗ­ಬೇಕು. ಸ್ವಾಮಿ­ಗಳಿಂದ ಇಂಥ ಮನಪರಿ­ವರ್ತನೆಯ ಸೇವೆ ಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT