ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಎಪಿ ಪುನರ್‌ರಚನೆ: ಕೇಜ್ರಿವಾಲ್‌

Last Updated 8 ಜೂನ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಆಮ್‌ ಆದ್ಮಿ ಪಕ್ಷವನ್ನು (ಎಎಪಿ) ಕೆಳ­ಹಂತದಿಂದ ರಾಷ್ಟ್ರೀಯ ಮಟ್ಟ­ದ­ವರೆಗೆ ಸಂಪೂರ್ಣ­ ಪುನರ್‌­ರಚಿಸು­ವು­ದಾಗಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌  ಭಾನು­ವಾರ ಪ್ರಕಟಿಸಿದ್ದಾರೆ. 

‘ನಾನೂ ಮನುಷ್ಯ. ತಪ್ಪು ಮಾಡು­­ವುದು ಸಹಜ. ಪಕ್ಷದ ಸದಸ್ಯ­ರಾಗಿ ಯೋಗೇಂದ್ರ ಯಾದವ್‌ ಅವರಿಗೆ ಆ ತಪ್ಪುಗಳನ್ನು ಎತ್ತಿ ತೋರಿಸುವ ಹಕ್ಕು ಇದೆ’ ಎಂದು ಹೇಳುವ ಮೂಲಕ ಅವರು ಭಿನ್ನಮತೀಯರನ್ನು ಓಲೈಸುವ ಕಸರತ್ತು ಮಾಡಿದ್ದಾರೆ.

ಮೂರು ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿಯ ಸಮಾರೋಪದಲ್ಲಿ ಪಕ್ಷ ಪುನರ್‌ ರಚಿಸುವ ನಿರ್ಧಾ­ರ­ವನ್ನು ಕೇಜ್ರಿ­ವಾಲ್‌್ ಘೋಷಿಸಿ­ದರು. ‘ರಾಜಕೀಯ ವ್ಯವ­ಹಾರ ಸಮಿತಿ ಹಾಗೂ ರಾಷ್ಟ್ರೀಯ ಕಾರ್ಯ­­ಕಾ­ರಿಣಿ ಸೇರಿದಂತೆ ಪಕ್ಷದ ಎಲ್ಲ ಸಮಿತಿ­ಗ­ಳನ್ನು ಪುನರ್‌­­ರಚಿಸ­ಲಾಗು­ತ್ತದೆ. 

ವಿವಿಧ ವರ್ಗ­ಗ­ಳನ್ನು ಪ್ರತಿನಿ­ಧಿಸುವ ‘‘ಹೊಸ ಜನ­ರನ್ನು’’ ಮುಂದಿನ ಒಂದು ವರ್ಷ­ಗಳಲ್ಲಿ ಪಕ್ಷಕ್ಕೆ ಸೇರಿಸಿಕೊಳ್ಳಲಾಗುತ್ತದೆ’ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಪುನರ್‌ರಚನೆ ಸಂಬಂಧ ಸಲಹೆ ನೀಡು­­­ವುದಕ್ಕಾಗಿ ಪಕ್ಷದ ಕರ್ನಾಟಕ ಘಟ­ಕದ ಸಂಚಾಲಕ ಪೃಥ್ವಿ ರೆಡ್ಡಿ ನೇತೃತ್ವ­ದಲ್ಲಿ ಆರು ಸದಸ್ಯರನ್ನೊಳಗೊಂಡ ಸಮಿತಿ ರಚಿಸಲಾಗಿದೆ.

ಪಕ್ಷದಲ್ಲಿ ಆಂತ­ರಿಕ ಸಂಘರ್ಷದ ಬಗ್ಗೆ ಕೇಳಿದ ಪ್ರಶ್ನೆಗೆ, ‘ಭಿನ್ನಾಭಿಪ್ರಾಯ ಸಹಜ. ಮುಂದಿನ ದಿನಗಳಲ್ಲಿ ಪಕ್ಷ ಬಲಿಷ್ಠ­ವಾಗಿ ಬೆಳೆಯ­ಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಯೋಗೇಂದ್ರ ಯಾದವ್‌ ಜತೆಗಿನ ತಮ್ಮ ಅಸಮಾಧಾನ­ವನ್ನು ಮುಚ್ಚಿ­ಹಾ­ಕಲು ಯತ್ನಿಸಿದ ಅವರು, ‘ಅವರು ನನ್ನ ಅಣ್ಣ. ನನ್ನನ್ನು ಬೈಯುವ ಅಧಿ­ಕಾರ ಅವರಿಗೆ ಇದೆ. ಅವರ ಸಲಹೆ­ಗ­ಳನ್ನು ನಾನು ಗಂಭೀರವಾಗಿ ಪರಿಗ­ಣಿಸು­ತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT