ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎತ್ತರಕ್ಕೇರಿದಂತೆ ಹೃದಯಾಘಾತ

Last Updated 5 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ಹೃದಯಾಘಾತ...
ಈ ಪದ ಕೇಳಿದರೇನೆ ಎದೆ ಜುಮ್ಮೆನ್ನುತ್ತದೆ. ಇಂದು ಎಲ್ಲ ವಯೋಮಾನ ದವರನ್ನೂ ಇದು ಕಾಡುತ್ತಿದೆ. ಆಧುನಿಕ ಜೀವನ ಶೈಲಿಯೇ ಹೃದಯಾಘಾತಕ್ಕೆ ಪ್ರಮುಖ ಕಾರಣ ಎನ್ನಲಾಗುತ್ತದೆ. ವೈದ್ಯಕೀಯ ಕ್ಷೇತ್ರದಲ್ಲಿ ಪ್ರತಿದಿನ ಹೃದಯಾಘಾತದ ಕಾರಣ ಕಂಡುಹಿಡಿಯುವ ಸಂಶೋಧನೆಗಳು ನಡೆಯುತ್ತಲೇ ಇರುತ್ತವೆ.

ನಗರೀಕರಣದ ಭರಾಟೆ ಮನುಷ್ಯನ ಜೀವನದ ಮೇಲೆ ಗಂಭೀರ ಪರಿಣಾಮ ಬೀರಿದೆ. ಅನಿವಾರ್ಯ ಆಯ್ಕೆಯ ನಗರ ಜೀವನ ಆರೋಗ್ಯದ ಮೇಲೆ ನಾನಾ ತೊಂದರೆ ನೀಡುತ್ತಿದೆ. ಕಾಂಕ್ರಿಟ್‌ ಕಾಡು ಹೆಚ್ಚಿದಂತೆಲ್ಲ ಆರೋಗ್ಯವೂ ಹದಗೆಡುತ್ತಿದೆ. ಇಂತಹುದರ ಬೆನ್ನು ಹತ್ತಿದ ಅಧ್ಯಯನಕಾರರಿಗೆ ಹೊಸ ಅಂಶವೊಂದು ಪತ್ತೆಯಾಗಿದೆ.

ನಗರೀಕರಣದಿಂದಾಗಿ ಎಲ್ಲರಿಗೂ  ನೆಲಮಹಡಿಯಲ್ಲೇ ಸೂರುಸಿಗುವುದು ಕಷ್ಟ.  ಇದರಿಂದಾಗಿ ಎತ್ತರೆತ್ತರದ ಫ್ಲಾಟ್‌ ಗಳಲ್ಲಿ ಮನೆ ಖರೀದಿ ಅನಿವಾರ್ಯ. ಮಹಡಿಗಳ ಮೇಲೆ ಮಹಡಿ ಕಟ್ಟಿ ಮನೆ ನೀಡುವವರೂ ಇಂದು ಹೆಚ್ಚಿದ್ದಾರೆ. ಕಡಿಮೆ ಬೆಲೆಗೆ ಮನೆ ಬೇಕೆಂದರೆ ಕೊನೆಯ ಮಹಡಿಗೆ ಬನ್ನಿ ಎಂಬ ಪುಕ್ಕಟೆ ಸಲಹೆಯೂ ಸಿಗುತ್ತದೆ. ಆದರೆ ಎತ್ತರಕ್ಕೇರಿದಂತೆ ಹೃದಯಾಘಾತದಿಂದ ಬದುಕಿ ಉಳಿಯುವ ಪ್ರಮಾಣವೂ ಕಡಿಮೆ ಎನ್ನುತ್ತದೆ ಅಧ್ಯಯನ.

2007 ರಿಂದ 2012 ರ ನಡುವೆ ಕೆನಡಾದ  ಸಂಶೋಧಕರು ಹೃದಯಾಘಾತದಿಂದ ತೊಂದರೆಗೊಳಗಾದವರ ಅಧ್ಯಯನ ನಡೆಸಿದ್ದಾರೆ. ಟೊರಾಂಟೊ ಸುತ್ತಲಿನ ಖಾಸಗಿ ನಿವಾಸಗಳಿಂದ ಹೃದಯಾಘಾತ ಸಂಬಂಧ 7,842 ಕರೆಗಳನ್ನು ಸಂಶೋಧಕರು ಸ್ವೀಕರಿ ಸಿದ್ದರು.  ಹೃದಯಾಘಾತಕ್ಕೆ ಒಳಗಾದ ಮೂರನೇ ಮಹಡಿಯ ಕೆಳಗೆ ವಾಸಿಸುವ ಶೇ 4.2 ರಷ್ಟು ವ್ಯಕ್ತಿಗಳು ಆಸ್ಪತ್ರೆಯಿಂದ ಕೆಲವೇ ದಿನಗಳಲ್ಲಿ ಬಿಡುಗಡೆಯಾದರು. ಎತ್ತರದ ಮಹಡಿಗಳಲ್ಲಿ ವಾಸಿಸಿ ಹೃದಯಾಘಾತಕ್ಕೆ ಒಳಗಾಗಿ ಬಿಡುಗಡೆಯಾದವರ ಪ್ರಮಾಣ ಶೇ 2.6 ರಷ್ಟಿತ್ತು. 16 ನೇ ಮಹಡಿಯಲ್ಲಿ ವಾಸಿಸುತ್ತಿದ್ದವರಲ್ಲಿ ಶೇ 0.9ರಷ್ಟು ಮಂದಿ ಮಾತ್ರ ಬದುಕಿದ್ದರು. 25 ನೇ ಮಹಡಿಯಿಂದ ಎತ್ತರದಲ್ಲಿ ವಾಸವಿದ್ದ 30 ಹೃದಯಾಘಾತದ ರೋಗಿಗಳು ಬದುಕಿಯೇ ಇರಲಿಲ್ಲ.

ಈ ಅಧ್ಯಯನ ವಿವರಗಳು ‘Canadian Medical Journal’ ನಲ್ಲಿ ಪ್ರಕಟವಾಗಿವೆ.
ಎತ್ತರದ ಮಹಡಿಗಳಲ್ಲಿ ವಾಸವಿ ರುವವರು ಆಸ್ಪತ್ರೆಯ ಚಿಕಿತ್ಸೆಗೆ ಸಕಾಲದಲ್ಲಿ ಲಭ್ಯವಾಗುವುದು ಕಷ್ಟವಾಗುತ್ತದೆ. ಹೃದಯಾಘಾತವಾದವರಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಬೇಕು. ಇದರಿಂದ ಅವರ ಜೀವತಾವಧಿ ಹೆಚ್ಚಿಸಬಹುದು ಎನ್ನುತ್ತಾರೆ ಟೊರಾಂಟೊದ ಸೇಂಟ್‌ ಮೈಕೆಲ್‌ ಆಸ್ಪತ್ರೆಯ ವೈದ್ಯ ಇಯಾನ್ ಆರ್.ಡ್ರೆನ್ನರ್‌.

ಯಾವುದೇ ನಿವಾಸಗಳಿಂದ ವ್ಯಕ್ತಿ ಯೊಬ್ಬರಿಗೆ ಹೃದಯಾಘಾತವಾಗಿರುವ ಬಗ್ಗೆ ಕರೆ ಬಂದಾಗ ಅಲ್ಲಿಗೇ ಧಾವಿಸುವ ವೈದ್ಯಕೀಯ ಸಿಬ್ಬಂದಿಗೆ ಪ್ರವೇಶದ್ವಾರ ತೆರೆಸುವುದೇ ಸವಾಲಾಗುತ್ತಿದೆ. ಕೆಟ್ಟು ನಿಂತ ಎಲಿವೇಟರ್‌ಗಳು, ಲಿಫ್ಟ್‌ಗಳು ಇತ್ಯಾದಿ ಕಾರಣಗಳು ರೋಗಿಯನ್ನು ಇನ್ನಷ್ಟು ದುರ್ಬಲಗೊಳಿಸುತ್ತವೆ ಎಂಬ ವಿವರವನ್ನು ಇಯಾನ್‌ ನೀಡುತ್ತಾರೆ.            

ಹೃದಯಾಘಾತಕ್ಕೆ ಸಾಮಾನ್ಯ ಕಾರಣಗಳು :

* ಅತಿಯಾದ ಧೂಮಪಾನ

* ಹೆಚ್ಚಿನ ಕೊಲೆಸ್ಟ್ರಾಲ್ ಪ್ರಮಾಣ
* ಮಧುಮೇಹ
* ಅಧಿಕ ರಕ್ತದ ಒತ್ತಡ
* ಬೊಜ್ಜು
* ಅನಾರೋಗ್ಯಕರ ಆಹಾರ     ಹವ್ಯಾಸ
* ದೈಹಿಕ ಕಾರಣಗಳು
* ವಂಶವಾಹಿ
* ಸೂಕ್ತ ಮಾಹಿತಿಯ ಕೊರತೆ

ಸಹೃದಯರು ಇವರು...
* ಭಾರತದಲ್ಲಿ ಪ್ರತಿ ನಾಲ್ಕು ನಿಮಿಷಕ್ಕೆ ಒಬ್ಬ ಹೃದಯಾಘಾತದಿಂದ ಮೃತಪಡುತ್ತಾರೆ. ಇವರ ವಯಸ್ಸು 30 ರಿಂದ 50
* ಶೇ 25 ರಷ್ಟು ಹೃದಯಾಘಾತ ದಿಂದ ಮೃತಪಡುತ್ತಿರುವವರ ವಯಸ್ಸು 40 ರ ಒಳಗೆ.
* ಭಾರತದಲ್ಲಿ 30 ವರ್ಷದೊಳಗಿನ 900 ಜನರು ಹೃದಯ ಸಂಬಂಧಿ ತೊಂದರೆಯಿಂದ ಪ್ರತಿದಿನ ಮೃತಪಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT