ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಡಿಎಯತ್ತ ಜಯಲಲಿತಾ?

Last Updated 3 ಜೂನ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು.

ಇಬ್ಬರು ನಾಯಕರ ಮಾತುಕತೆಗೆ 30 ನಿಮಿಷ ನಿಗದಿ ಮಾಡಲಾಗಿತ್ತು. ಕೇಂದ್ರ ಸಚಿವ ಗೋಪಿನಾಥ್‌ ಮುಂಡೆ ಅವರ ನಿಧನದ ಹಿನ್ನೆಲೆಯಲ್ಲಿ ಸಭೆ ತಡವಾಗಿ ಆರಂಭ ಆಯಿತು.

ಇದರಿಂದ ಸಚಿವ ಸಂಪುಟ ಸಭೆಯೂ ವಿಳಂಬವಾಯಿತು. ಜಯಲಲಿತಾ ಅವರನ್ನು ಎನ್‌ಡಿಎ ತೆಕ್ಕೆಗೆ ಸೆಳೆಯಲು ಮೋದಿ ಪ್ರಯತ್ನಿಸುತ್ತಿದ್ದಾರೆ. ಎಐಎಡಿಎಂಕೆ ಪಕ್ಷವೂ ಎನ್‌ಡಿಎ ಮೈತ್ರಿಕೂಟಕ್ಕೆ ಸೇರಬಹುದು ಎನ್ನುವ ಊಹಾಪೋಹದ ನಡುವೆ ಈ ಇಬ್ಬರೂ ನಾಯಕರು ಮುಖಾಮುಖಿ ಆಗಿದ್ದಾರೆ. ಮೋದಿ ಅವರ ಭೇಟಿ ಕುರಿತು ಜಯಲಲಿತಾ ಸಂತಸ ವ್ಯಕ್ತಪಡಿಸಿದ್ದಾರೆ. ತಮಿಳುನಾಡಿಗೆ ವಿಶೇಷ ಪ್ಯಾಕೇಜ್‌ ನೀಡುವಂತೆ ಕೇಳಿಲ್ಲ ಎಂದು ಖಚಿತಪಡಿಸಿದ್ದಾರೆ.

ಮೋದಿ ನೇತೃತ್ವದ ಸರ್ಕಾರಕ್ಕೆ ಎಐಎಡಿಎಂಕೆ ಬೆಂಬಲ ಕೊಡುವುದೇ ಎಂಬ ಪ್ರಶ್ನೆಗೆ, ಲೋಕಸಭೆಯಲ್ಲಿ ಬಿಜೆಪಿ ಮತ್ತು ಎನ್‌ಡಿಎಗೆ ಸ್ಪಷ್ಟ ಬಹುಮತ ಇರುವುದರಿಂದ ನಮ್ಮ ಬೆಂಬಲದ ಅಗತ್ಯವಿಲ್ಲ ಎಂದು ಜಯಲಲಿತಾ ಹೇಳಿದರು. ಲೋಕಸಭೆಯಲ್ಲಿ ಬಿಜೆಪಿ 282 ಹಾಗೂ ಎನ್‌ಡಿಎ 336 ಸದಸ್ಯ ಬಲ ಹೊಂದಿದೆ.

ರಾಜ್ಯಸಭೆಯಲ್ಲಿ 10 ಸದಸ್ಯ ಬಲ ಹೊಂದಿರುವ ಎಐಎಡಿಎಂಕೆಯು ಸರ್ಕಾರವನ್ನು ಬೆಂಬಲಿಸುವ ಕುರಿತೂ ಖಚಿತವಾಗಿ ಉತ್ತರಿಸಲಿಲ್ಲ. 245 ಸದಸ್ಯರ ರಾಜ್ಯಸಭೆಯಲ್ಲಿ ಬಿಜೆಪಿ ಬಲ 42. ಎನ್‌ಡಿಎ ಪಕ್ಷಗಳು ಸೇರಿದರೆ 64 ಆಗಲಿದೆ. ಮೇಲ್ಮನೆಯಲ್ಲಿ ಯಾವುದೇ ಮಸೂದೆಯನ್ನು ಅಂಗೀಕರಿಸಲು ಸರ್ಕಾರಕ್ಕೆ 123 ಸದಸ್ಯರ ಬೆಂಬಲ ಬೇಕಿದೆ. ಅಗತ್ಯ ಬಹುಮತ ಇಲ್ಲದಿರುವುದರಿಂದ ಎಐಎಡಿಎಂಕೆ, ಬಿಜೆಡಿ ಮತ್ತಿತರ ಪಕ್ಷಗಳನ್ನು ಸೆಳೆಯುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ.

ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಅವರನ್ನು ಮೋದಿ ಇದಕ್ಕೂ ಮೊದಲು ಭೇಟಿ ಮಾಡಿದ್ದರು. ಒಡಿಶಾದ ಒಟ್ಟು 21 ಲೋಕಸಭೆ ಸ್ಥಾನಗಳಲ್ಲಿ ಬಿಜೆಡಿ 20 ಸ್ಥಾನಗಳನ್ನು ಗೆದ್ದಿದೆ. ರಾಜ್ಯಸಭೆಯಲ್ಲಿ ಬಿಜೆಡಿಯ ನಾಲ್ವರು ಸದಸ್ಯರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT