ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಬೋಲಾ: ಹೆಚ್ಚಿದ ಭೀತಿ...

ಸುದ್ದಿ ಹಿನ್ನೆಲೆ
Last Updated 20 ಅಕ್ಟೋಬರ್ 2014, 8:39 IST
ಅಕ್ಷರ ಗಾತ್ರ

ಜಾಗತಿಕ ಮಟ್ಟದಲ್ಲಿ ಕಟ್ಟು­ನಿಟ್ಟಿನ ಕ್ರಮಗಳನ್ನು ಕೈಗೊ­ಳ್ಳ­­ದಿದ್ದರೆ ‘ಈ ತಲೆಮಾರಿನ ದುರಂತ’ ಎಂದು  ಇತಿಹಾಸದಲ್ಲಿ ದಾಖಲಾಗ­ಲಿದೆ­­ಯೆಂದು  ಶಂಕಿಸ­ಲಾಗಿರುವ ಎಬೋಲಾ ಕಾಯಿಲೆ ಈಗ ವಿಶ್ವದಾ­ದ್ಯಂತ ಇನ್ನಷ್ಟು ಭೀತಿ ಮೂಡಿಸಿದೆ.

ಆರಂಭದಲ್ಲಿ ದಕ್ಷಿಣ ಆಫ್ರಿಕಾದ ಮೂರು ದೇಶ­ಗಳಲ್ಲಿ ಮಾತ್ರ ಕಂಡು ಬಂದಿದ್ದ ಈ ಮಾರ­ಣಾಂತಿಕ ಸಾಂಕ್ರಾ­ಮಿಕ ಎಬೋಲಾ  ಕಾಯಿಲೆಯು ಇದು­ವರೆಗೆ ನಾಲ್ಕು ಸಾವಿರಕ್ಕೂ ಹೆಚ್ಚು ಜನರನ್ನು ಬಲಿ ತೆಗೆದು­ಕೊಂಡಿದೆ. ಈ ಎಲ್ಲ ಸಾವುಗಳು ಪಶ್ಚಿಮ ಆಫ್ರಿಕಾದ ದೇಶಗಳಲ್ಲಿಯೇ ಸಂಭವಿಸಿವೆ.ಆದರೆ, ಮ್ಯಾಡ್ರಿಡ್‌ನ ದಾದಿ­ಯೊಬ್ಬಳು ಇದಕ್ಕೆ ಬಲಿಯಾದ ನಂತರ, ಈ ದೇಶಗಳ ಗಡಿಯಾಚೆಯೂ ಈ ಕಾಯಿಲೆ ಹರಡವು ಭೀತಿ ಹೆಚ್ಚಿದೆ.

4,477 ಬಲಿ
ಏಳು ದೇಶಗಳಲ್ಲಿ ದಾಖಲಾದ ಒಟ್ಟು 8,399 ಕಾಯಿಲೆಪೀಡಿತರ ಪೈಕಿ, 4,4773 ಜನರು ಇದುವರೆಗೆ ಎಬೋಲಾಕ್ಕೆ ಬಲಿಯಾಗಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಕಟ್ಟುನಿಟ್ಟಿನ ಕ್ರಮ
ಆಸ್ಟ್ರೇಲಿಯಾದಿಂದ ಜಿಂಬಾಬ್ವೆ, ಬ್ರೆಜಿಲ್‌ನಿಂದ ಸ್ಪೇನ್‌ವರೆಗೆ, ಎಬೋಲಾ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಎಬೋಲಾ ಜ್ವರ ಕಾಣಿಸಿಕೊಂಡವರು ಮನೆಯಿಂದ ಹೊರಗೆ ಬರದಂತೆ ಎಚ್ಚರಿಸಲಾಗಿದೆ ಅಥವಾ ಅವರನ್ನು  ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿ ಇರಿಸ­ಲಾಗಿದೆ.
ಈ ಕಾಯಿಲೆಯು ಇತರ ದೇಶಗಳಿಗೆ ಹರಡದಂತೆ ಪರಿಣಾಮಕಾರಿ ಕ್ರಮ­ಗಳನ್ನು ಕೈಗೊಳ್ಳದಿದ್ದರೆ, 2015ರ ಜನವರಿ ವೇಳೆಗೆ ಕಾಯಿಲೆ ಪೀಡಿತರ ಸಂಖ್ಯೆ 14 ಲಕ್ಷಕ್ಕೆ ಹೆಚ್ಚಳಗೊಳ್ಳಬಹುದು ಎಂದು ಅಮೆರಿಕದ ಕಾಯಿಲೆ ನಿಯಂತ್ರಣ ಮತ್ತು ಪ್ರತಿಬಂಧಕ ಕೇಂದ್ರ ಎಚ್ಚರಿಸಿದೆ.

ಸದ್ಯಕ್ಕೆ ಪ್ರತಿ ವಾರ ಒಂದು ಸಾವಿರ­ದಷ್ಟು ಹೊಸ ಪ್ರಕರಣಗಳು ವರದಿ­ಯಾಗುತ್ತಿವೆ. ಎರಡು ತಿಂಗಳಲ್ಲಿ ಪ್ರತಿ ವಾರ 10 ಸಾವಿರಕ್ಕೂ  ಹೆಚ್ಚು ಹೊಸ ಪ್ರಕರಣಗಳು ವರದಿಯಾಗಲಿವೆ. ಇದಕ್ಕೆ ಅನುಗುಣವಾಗಿ ಸಾವಿನ ಸಂಖ್ಯೆ  ಹೆಚ್ಚ­ಲಿದೆ ಎಂದೂ ಶಂಕಿಸ­ಲಾಗಿದೆ.

ನೆರವಿನ ಕೊರತೆ
ಈ ಕಾಯಿಲೆ ವಿರುದ್ಧದ ಹೋರಾಟಕ್ಕೆ  100 ಕೋಟಿ ಡಾಲರ್‌ (₨ 6000 ಕೋಟಿ) ಅಗತ್ಯ ಇದೆ ಎಂದು ಅಂದಾಜಿ­ಸಲಾಗಿದೆ. ಈ ಪ್ರಮಾಣದ ನೆರವು ತಕ್ಷಣಕ್ಕೆ ದೊರೆಯದಿರುವುದರಿಂದ  ಈ ಮಾರ­ಣಾಂತಿಕ ಕಾಯಿಲೆ ವಿರುದ್ಧದ ಜಾಗತಿಕ ಪ್ರಯತ್ನ ನಿರೀಕ್ಷಿತ ಫಲ ನೀಡುತ್ತಿಲ್ಲ.

ಕೈಜೋಡಿಸಿದ ಅಮೆರಿಕ, ಚೀನಾ
ಆಫ್ರಿಕಾದ ದೇಶಗಳಲ್ಲಿ ಈ ಕಾಯಿಲೆ ಇನ್ನಷ್ಟು ವ್ಯಾಪಕ ಪ್ರಮಾಣದಲ್ಲಿ ಹರಡುವುದನ್ನು ತಪ್ಪಿಸಲು ಅಮೆರಿಕ ಮತ್ತು ಚೀನಾ ದೇಶಗಳು ತಮ್ಮೆಲ್ಲ   ಭಿನ್ನಾಭಿಪ್ರಾಯ ಬದಿಗಿಟ್ಟು ಜಂಟಿಯಾಗಿ ಕಾರ್ಯ­ಕ್ರಮ ಹಮ್ಮಿಕೊಳ್ಳಲು  ನಿರ್ಧರಿಸಿವೆ. ಸಾರ್ವಜನಿಕರ ಆರೋಗ್ಯಕ್ಕೆ ಬೆದರಿಕೆ ಒಡ್ಡಿರುವ ಈ ಕಾಯಿಲೆ ನಿಯಂತ್ರಿಸಲು ಜಾಗತಿಕ ಪ್ರಯತ್ನದ ಅಗತ್ಯ ಇದೆ ಎಂದೂ   ಉಭಯ ದೇಶಗಳು ಅಭಿಪ್ರಾ­ಯ­­ಪಟ್ಟಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT