ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡರಲ್ಲೊಂದು

Last Updated 1 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ನಮ್ಮ ‘ವಿಚಾರವಾದಿ’ಗಳಿಗೆ ಕುವೆಂಪು ಅವರ ಬಗೆಗೆ ಅತ್ಯಾದರ, ಗೌರವಗಳಿವೆಯಷ್ಟೆ. ಕುವೆಂಪು ಅವರಿಗೆ ಭಗವದ್ಗೀತೆ ಪೂಜ್ಯವಾಗಿತ್ತು (ಗಾಂಧಿ, ವಿವೇಕಾನಂದರಿಗೆ ಕೂಡ). ಅವರ ‘ವಿಭೂತಿಪೂಜೆ’ಯ ಪರಿಕಲ್ಪನೆ ಗೀತೆಯಿಂದಲೇ ಪ್ರೇರಿತ (10.41). ಅಷ್ಟೇ ಅಲ್ಲ, ‘ಅನಿಕೇತನ’ ತತ್ವ್ತ ಕೂಡ ಅಲ್ಲಿಂದಲೇ ಬಂದದ್ದು (ಅದನ್ನು ಅವರೇ ನನಗೊಮ್ಮೆ ತಿಳಿಸಿದರು):

ತುಲ್ಯ ನಿಂದಾಸ್ತುತಿರ್ಮೌನೀ ಸಂತುಷ್ಟೋ ಯೇನ ಕೇನಚಿತ್‌/
ಅನಿಕೇತಃ ಸ್ಥಿರಮತಿರ್ಭಕ್ತಿಮಾನ್‌ ಮೇ ಪ್ರಿಯೋ ನರಃ//(12.19)
ಇಲ್ಲಿರುವ ‘ಅನಿಕೇತಃ’ (ನಿವಾಸವಿಲ್ಲದವನು) ಎಂಬ ಮಾತು ಗಮನಾರ್ಹ. (ಇನ್ನು, ಕುವೆಂಪು ಪ್ರಕಾರ, ಶ್ರೀಕೃಷ್ಣನ ವರ್ಣವ್ಯವಸ್ಥೆ ಇಡೀ ಜಗತ್ತಿಗೆ ಅನ್ವಯಿಸುವಂಥದು; ಭರತಖಂಡಕ್ಕೆ ಮಾತ್ರವಲ್ಲ).

ಎಂದಮೇಲೆ, ಭಗವದ್ಗೀತೆಯ ನಿಂದೆ ಕುವೆಂಪು ಅವರಿಗೆ ಅಪಚಾರ ಬಗೆದಂತಲ್ಲವೆ? ಕುವೆಂಪು ಪ್ರಶಂಸೆ, ಗೀತಾನಿಂದೆ– ಎರಡರಲ್ಲೊಂದನ್ನು ವಿಚಾರವಾದಿಗಳು ಆರಿಸಿಕೊಳ್ಳಬೇಕು!
–ಸಿ.ಪಿ.ಕೆ., ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT