ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲ ಕಾಲಕ್ಕೂ ಬೇಕು

Last Updated 29 ಮೇ 2015, 19:30 IST
ಅಕ್ಷರ ಗಾತ್ರ

ಮನೆಯವರೆಂದಿಗೂ ಸ್ನೇಹಿತರಾಗಲಾರರು. ಮನದ ಸ್ನೇಹವನ್ನು ತುಂಬಿ ಕೊಡುವ ಗೆಳೆಯ ಗೆಳತಿಯರಿದ್ದರೆ ಅದರ ನೆನಪೆ ಚಂದ ಜೀವಕೆ. ಚಿಕ್ಕಂದಿನ ಗೆಳೆತನದಲ್ಲಿ ಒಂದನೆ ಕ್ಲಾಸಿನಿಂದ ಹತ್ತನೆ ಕ್ಲಾಸಿನವರೆಗೂ ನನ್ನ ಗೆಳತಿಯಾಗಿದ್ದ ಮಾಣಿಕ್ಯಳು ತುಂಬು ಸ್ನೇಹವನ್ನು ನೀಡಿದ್ದಳು. ಎಷ್ಟೋ ದಿನಗಳು ಶಾಲೆಯಲ್ಲಿ ಅವಳು ತರುತ್ತಿದ್ದ ತಿಂಡಿಯನ್ನೇ ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೆ. ಆಗಷ್ಟೇ ಪ್ರಾರಂಭವಾಗಿದ್ದ ‘ಸುಧಾ’ ಪತ್ರಿಕೆಯನ್ನು ಕೊಂಡು ತರುತ್ತಿದ್ದಳು. ಇಬ್ಬರೂ ಒಂದೊಂದೆ ಪುಟಗಳನ್ನು ಒಟ್ಟಿಗೆ ಕುಳಿತು ಒದುತ್ತಿದ್ದೆವು.

ಅವಳು ನನಗೆ ಲೆಕ್ಕಗಳನ್ನು ಹೇಳಿಕೊಡುತ್ತಿದ್ದರೆ ನಾನು ಅವಳಿಗೆ ಇಂಗ್ಲಿಷ್ ಹೇಳಿ ಕೊಡುತ್ತಿದ್ದೆ. ಜಾತ್ರೆ, ಸಿನಿಮಾ ಎಲ್ಲದಕ್ಕೂ ಜತೆಗಾತಿ. ಒಂದೇ ರೀತಿಯ ಬಟ್ಟೆಯಲ್ಲಿ ಲಂಗ, ಬ್ಲೌಸ್ ಹೊಲೆಸಿಕೊಳ್ಳುತ್ತಿದ್ದೆವು. ಕಾಲಾನುಕ್ರಮದಲ್ಲಿ ಅವಳೆಲ್ಲೋ ನಾನೆಲ್ಲೋ ಆದರೆ ಮನದಲ್ಲಿ ಹುದುಗಿಹೋದ ಸ್ನೇಹ ಮಾತ್ರ ಸದಾ ಹಸಿರಾಗಿ ಉಳಿದುಕೊಂಡಿದೆ. ನಂತರ ಬಂದು ಹೋದ ಗೆಳತಿಯರು ಸ್ನೇಹಿತರಾಗಿ ಉಳಿಯಲಿಲ್ಲ.

ಅವರೆಲ್ಲ ಅಗತ್ಯ ಬಂದಷ್ಟು ದಿನವಿದ್ದು ನಂತರ ಸ್ನೇಹದ ಮುಖವಾಡವನ್ನು ಮುಲಾಜಿಲ್ಲದೆ ಕಿತ್ತೆಸೆದು ನಡೆದಾಗ ಅಪ್ರತಿಭಳಾದರೂ ಸಾವರಿಸಿಕೊಂಡಿದ್ದೆ. ಈಗೀಗ ಬರವಣಿಗೆಯ ಕಾಯಕ ಕೈಗೊಂಡ ದಿನಗಳಿಂದ ಪೂರ್ಣಿಮಾ, ಜಯಲಕ್ಷ್ಮಿ ಅವರು ಸಾಹಿತ್ಯದ ಗೆಳತಿಯರಾಗಿ ಆತ್ಮೀಯರಾಗಿದ್ದಾರೆ.

ಹಾಗೆಯೇ ಶಾಂತ, ಶಾರದ, ಕೃಪಾ.... ಹೀಗೆ ಗೆಳೆತನದ ಪಟ್ಟಿ ಬೆಳೆಯುತ್ತಿದೆ. ಅದರಲ್ಲಿ ದೂರವಿದ್ದರೂ ಮಾನಸಿಕವಾಗಿ ಹತ್ತಿರವಿರುವಂತಹ ಪ್ರಮೀಳ ಅವರೊಂದಿಗೆ  ಪ್ರವಾಸ ಹೋಗುವಾಗಿನ ಆನಂದ, ಸಿನಿಮಾ ನೋಡುವಾಗಿನ ಸಂತೋಷವು ಈ ಮಧ್ಯವಯಸ್ಸಿನಲ್ಲೂ ಮನಕ್ಕೆ ಮುದ ತರುತ್ತಿದೆ. ಹಾಗೂ ಆತ್ಮೀಯವಾಗಿ ವ್ಯವಹರಿಸುವ ಹಾಡುಹಕ್ಕಿ ಭಾವಗೀತೆಗಳ ಭಾವನಾಜೀವಿಯಾದ ಭಾರತಿ ನನ್ನ ಸ್ನೇಹಜೀವಿಯಾದ ಗೆಳತಿ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತಿದೆ. ಇಂತಹ ಸ್ನೇಹ ಸಂಜೀವಿನಿಗಳು ಎಲ್ಲ ಕಾಲಕ್ಕೂ ಇರಲಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT