ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್‌ಪಿಜಿ,ಸೀಮೆಎಣ್ಣೆ ದರ ಹೆಚ್ಚಳ ಸಾಧ್ಯತೆ

Last Updated 5 ಜುಲೈ 2014, 7:09 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಪೆಟ್ರೋಲಿ­ಯಂ ಸಚಿವಾಲಯ ಗೃಹ ಬಳಕೆ ಅಡುಗೆ ಅನಿಲದ (ಎಲ್‌ಪಿಜಿ) ಬೆಲೆ­ಯನ್ನು ಪ್ರತಿ ಸಿಲಿಂಡರ್‌ಗೆ ₨ 250 ಮತ್ತು ಪ್ರತಿ ಲೀಟರ್‌ ಸೀಮೆಎಣ್ಣೆಗೆ ₨ 4ರಂತೆ ದರ ಏರಿಸುವ ಪ್ರಸ್ತಾವವನ್ನು ರಾಜಕೀಯ ವ್ಯವಹಾರಗಳ ಸಂಪುಟ ಉಪಸಮಿತಿ (ಸಿಸಿಪಿಎ) ಮುಂದೆ ಶೀಘ್ರ ಇರಿಸುವ ಸಾಧ್ಯತೆ ಇದೆ.

ಈ ನಿಟ್ಟಿನಲ್ಲಿ ಕರಡು ಪ್ರಸ್ತಾವ­ವನ್ನು ಪೆಟ್ರೋಲಿಯಂ ಸಚಿವಾಲಯ ಸಿದ್ಧ ಪಡಿಸುತ್ತಿದೆ ಎಂದು ಮೂಲಗಳು ಶುಕ್ರವಾರ ತಿಳಿಸಿವೆ.
ಜತೆಗೆ, ಡೀಸೆಲ್‌ ಮಾರಾಟ ದರ­ದಲ್ಲಿ ಆಗುತ್ತಿರುವ ನಷ್ಟ ಪ್ರಮಾಣ (ಪ್ರತಿ ಲೀಟರ್‌ಗೆ ₨3.40) ಸರಿದೂ­ಗುವವರೆಗೂ ಈಗ ಇರುವಂತೆ ಪ್ರತಿ ತಿಂಗಳು ಪ್ರತಿ ಲೀಟರ್‌ಗೆ ಸರಾಸರಿ 40ರಿಂದ 50 ಪೈಸೆ ಹೆಚ್ಚಳ ಮುಂದು­ವರಿಸುವಂತೆ ಮನವಿ ಮಾಡಿಕೊ­ಳ್ಳುವ ಸಾಧ್ಯತೆ ಕೂಡ ಇದೆ ಎಂದು ಮೂಲಗಳು ಹೇಳಿವೆ.

ಈ ಮಧ್ಯೆ, 2010ರ ಜೂನ್‌ನಲ್ಲಿ ಪೆಟ್ರೋಲ್‌ ದರ ನಿಗದಿಯನ್ನು ಸರ್ಕಾ­ರದ ನಿಯಂತ್ರಣದಿಂದ ಮುಕ್ತ ಮಾಡಿದಂತೆ ಡೀಸೆಲ್‌ ದರ ನಿಗದಿ­ಯನ್ನೂ ಮುಂದಿನ ದಿನಗಳಲ್ಲಿ ಮುಕ್ತ ಮಾಡಬೇಕೆಂದು ಕೋರುವ ಚಿಂತನೆ ಪೆಟ್ರೋಲಿಯಂ ಸಚಿವಾಲ­ಯಕ್ಕೆ ಇದೆ ಎಂದೂ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT