ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆ ಮಾರ್ಚ್‌ 30 ರಿಂದ

Last Updated 27 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು: ಇದೇ 30 ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಆರಂಭ ವಾಗಲಿದ್ದು ಏಪ್ರಿಲ್ 13 ರವರೆಗೆ ನಡೆಯಲಿವೆ.
ಈ ಬಾರಿ ಒಟ್ಟು 8,56,438 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಇದರಲ್ಲಿ ಸರ್ಕಾರಿ ಶಾಲೆಯ 3,48,684 ಮಕ್ಕಳು, ಅನುದಾನಿತ ಶಾಲೆಗಳ  2,67,155 ಮತ್ತು  ಅನುದಾನರಹಿತ ಶಾಲೆಗಳ 2,40,599 ವಿದ್ಯಾರ್ಥಿಗಳು ಸೇರಿದ್ದಾರೆ.

ರಾಜ್ಯದ  ಒಟ್ಟು 34 ಜಿಲ್ಲೆಗಳಿಂದ 3038 ಪರೀಕ್ಷಾ  ಕೇಂದ್ರಗಳಿದ್ದು, 148 ಸೂಕ್ಷ್ಮ ಪರೀಕ್ಷಾ ಕೇಂದ್ರಗಳು ಮತ್ತು 50 ಅತಿಸೂಕ್ಷ್ಮ ಪರೀಕ್ಷಾ ಕೇಂದ್ರಗಳು ಎಂದು ಗುರುತಿಸಲಾಗಿದೆ. 829 ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಸಿರುವ ಕೇಂದ್ರಗಳ ಯಾವುದೇ ದೂರುಗಳಿದ್ದಲ್ಲಿ ಸಂಬಂಧಪಟ್ಟ ಬಿ.ಇ.ಓ. ಮತ್ತು ಡಿ.ಡಿ.ಪಿ.ಐ. ಅಥವಾ ಸಂಚಾರಿ ಜಾಗೃತ ದಳವನ್ನು (ಮೊಬೈಲ್ ಸ್ಕ್ವಾಡ್) ಸಂಪರ್ಕಿಸಲು ಸೂಚಿಸಲಾಗಿದೆ.

ಪರೀಕ್ಷೆಗೆ ಸಂಬಂಧಿಸಿದಂತೆ ಅವ್ಯವಹಾರದಲ್ಲಿ ತೊಡಗುವ ಯಾವುದೇ ಶಿಕ್ಷಕರು, ಸಿಬ್ಬಂದಿ ಅಥವಾ ಪೋಷಕರ ವಿರುದ್ಧ ಕಠಿಣ ಕ್ರಮ ಕೈಗೊಂಡು, ಅಂಥವರ ವಿರುದ್ಧ  ಕ್ರಿಮಿ ನಲ್ ಮೊಕದ್ದಮೆ ಹೂಡಲು ಸಂಬಂಧ ಪಟ್ಟ ಪರೀಕ್ಷಾ ಕೇಂದ್ರದ ಅಧೀಕ್ಷಕರು ಮತ್ತು ಬಿ.ಇ.ಓ. ರವರಿಗೆ ಸೂಚಿಸಲಾಗಿದೆ ಎಂದು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT