ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕತೆಗೆ ಶ್ರಮಿಸಿ

Last Updated 21 ಮೇ 2015, 19:30 IST
ಅಕ್ಷರ ಗಾತ್ರ

ಜಗತ್ತಿನ ಇತಿಹಾಸದಲ್ಲೇ ಭಾರತ ವಿವಿಧತೆಯಲ್ಲಿ ಏಕತೆ ಸಾಧಿಸಿದ ಅಪರೂಪದ ರಾಷ್ಟ್ರ.  ಹಲವಾರು ಧರ್ಮೀಯ ರಿಗೆ ಆಶ್ರಯ ನೀಡಿರುವ ಪುಣ್ಯಭೂಮಿ.
ಆದರೆ ಇತ್ತೀಚಿನ ದಿನಗಳಲ್ಲಿ ಅತಿ ಬುದ್ಧಿವಂತರು ಹಾಗೂ ರಾಜಕೀಯ ನಾಯಕರ ಪ್ರಚೋದನಾತ್ಮಕ ಭಾಷಣ ಗಳಿಂದ ದೇಶದಲ್ಲಿ ಏಕತೆ ಮಾಯವಾಗಿ ಕೋಮುವಾದ ಬೆಳೆಯತೊಡಗಿದೆ.  ಸಹೋದರರಂತೆ ಇದ್ದ ಹಲವು ಧರ್ಮೀಯರ ನಡುವೆ ಕೋಮುವಾದಿಗಳು ಜಾತಿಯ ವಿಷ ಬೀಜ ಬಿತ್ತತೊಡಗಿದ್ದಾರೆ.

ದೇಶಕ್ಕಾಗಿ ಹೋರಾಡಿದ ಮಹಾನ್ ನಾಯಕರನ್ನು ತಮ್ಮ ತಮ್ಮ ಜಾತಿಗಳಿಗೆ ಸೀಮಿತಗೊಳಿಸುವುದು, ಅನ್ಯ ಕೋಮಿನ ಹೋರಾಟ ಗಾರರ ಬಗ್ಗೆ  ಅವಹೇಳನಕಾರಿಯಾಗಿ ಮಾತನಾಡು ವುದು, ಅವರ ಪ್ರತಿಮೆಗಳನ್ನು ಅವಮಾನಿಸುವುದು, ಅಂತರ್ಜಾಲಗಳಲ್ಲಿ ಅವಹೇಳನಕಾರಿಯಾಗಿ ಬರೆಯುವುದು  ಹೆಚ್ಚಾಗುತ್ತಿದೆ. ಇವುಗಳ ವಿರುದ್ಧ ನಡೆಯುವ ಪ್ರತಿಭಟನೆಗಳು ಕೆಲವೊಮ್ಮೆ ಹಿಂಸೆಗೆ ತಿರುಗುವ ಕಾರಣ, ಆಸ್ತಿಪಾಸ್ತಿ ನಾಶದ ಜೊತೆಗೆ ಎಷ್ಟೋ ಮಂದಿ ಪ್ರಾಣ  ಕಳೆದು ಕೊಳ್ಳುತ್ತಿರುವುದು ದುರದೃಷ್ಟಕರ.

ಇಂತಹ ಬೆಳವಣಿಗೆಗೆ ಕಾರಣವಾಗುವವರು ಯಾವುದೇ ಧರ್ಮದಲ್ಲಿದ್ದರೂ  ಬಂಧಿಸಿ, ಕಠಿಣ ಕಾನೂನು ಕ್ರಮ ಜರುಗಿಸಬೇಕು. ಎಲ್ಲ ಧರ್ಮೀಯರೂ ಸೇರಿ ಶಾಂತಿ ಸಭೆಗಳು, ರಾಷ್ಟ್ರೀಯ ಭಾವೈಕ್ಯ ಸಮ್ಮೇಳನಗಳನ್ನು ಆಯೋಜಿಸಿ, ಭಾರತೀಯರೆಲ್ಲ ಒಂದೇ ಎಂಬ ಭಾವನೆಯನ್ನು ಜನರಲ್ಲಿ ಮೂಡಿಸಲು ಶ್ರಮಿಸಬೇಕು.
- ಮೌಲಾಲಿ ಕೆ.ಆಲಗೂರ,
ಸಿಂದಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT