ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏನಿದೆ ನೈತಿಕ ಬಲ?

Last Updated 15 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಪೌರೋಹಿತ್ಯ ವೃತ್ತಿಗೆ ಸಂಬಂಧಿಸಿದ  ವಿಷಯ­ಗಳನ್ನೇ ಪಠ್ಯಕ್ರಮವನ್ನಾಗಿಸಿ, ರಾಜ್ಯದಲ್ಲಿ ವೈದಿಕ ಪರಂಪರೆಗೆ ಪುಷ್ಟಿ ನೀಡಲೆಂದೇ ಪ್ರಾರಂಭವಾದ  ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಮೊದಲ ಕುಲಪತಿಗಳಾಗಿ ದಲಿತ ಮತ್ತು ಸಮಾಜಮುಖಿ, ವೈಚಾರಿಕ ಮತ್ತು ಮಾನವೀಯ ಮೌಲ್ಯಗಳಿಗೆ ಸಂಪೂರ್ಣ ವಿರಾಮ ನೀಡಿದವರು ಪ್ರೊ.ಜಿ. ಮಲ್ಲೇಪುರಂ ವೆಂಕಟೇಶ್.

ಅವರು ಈ ಹುದ್ದೆಯಿಂದ ನಿವೃತ್ತಿಯಾದ ನಂತರ ದಲಿತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ­ರಾಗಿ ಮಾನವೀಯ ವಿಚಾರಗಳ ಬಗ್ಗೆ (ಪ್ರ.ವಾ.­ಸೆ.೧೫) ಮಾತನಾಡಿದ್ದಾರೆ. ಯಾವ ನೈತಿಕ ಬಲದಿಂದ ಮಾತನಾಡಿದ್ದಾರೆಂಬುದು ನನಗೆ ತಿಳಿ­­ಯುತ್ತಿಲ್ಲ.  ತಮ್ಮ ಭಾಷಣದಲ್ಲಿ ದೃಶ್ಯ ಮಾಧ್ಯ­ಮ­ದಲ್ಲಿನ ಕ್ರೌರ್ಯ ಮತ್ತು ಹಿಂಸಾತ್ಮಕ ಕಾರ್ಯ­ಕ್ರಮಗಳ ಬಗ್ಗೆ ಪ್ರಸ್ತಾಪಿಸಿರುವ ಅವರು, ಜ್ಯೋತಿಷ, ವಾಸ್ತು, ಮಾಟ-ಮಂತ್ರ, ಯಂತ್ರ-ತಂತ್ರ, ಹೋಮ-ಹವನ, ರಾಹು ಕಾಲ, ಗುಳಿಕ ಕಾಲ, ಜಾತಕ ಫಲ ಇನ್ನೂ ಮುಂತಾದ ಕಾರ್ಯ­ಕ್ರಮಗಳು ಅದೇ ಮಾಧ್ಯಮಗಳಲ್ಲಿ   ವಿಜೃಂಭಿಸುತ್ತಿದ್ದರೂ ಇವುಗಳ ಬಗ್ಗೆ ಚಕಾರ­ವೆತ್ತ­ದಿರುವುದೂ ಆಶ್ಚರ್ಯ ಎನ್ನಿಸುತ್ತದೆ! 

ಕರ್ನಾ­ಟಕ ದಲಿತ ಪ್ರಾಧಿಕಾರವನ್ನು ಸರ್ಕಾರ ಘೋಷಿ­ಸಬೇಕೆಂದು ಸಮ್ಮೇಳನಾಧ್ಯಕ್ಷರಾಗಿ  ಅವರು ಫರ್ಮಾನು ಸಹ ಹೊರಡಿಸಿದ್ದಾರೆ. ಒಂದು ವೇಳೆ ಅಂಥಾ ಪ್ರಾಧಿಕಾರ ಏನಾದರೂ ಪ್ರಾರಂಭ­ಗೊಂಡರೆ, ಅದರ ಪ್ರಥಮ ಅಧ್ಯಕ್ಷ­ರಾಗಿಯೂ  ಅವರೇ ಆಯ್ಕೆಯಾಗಿ ಇತಿಹಾಸ ಸೃಷ್ಟಿಸಿದರೂ ಆಶ್ಚರ್ಯವಿಲ್ಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT