ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರ್‌ ಇಂಡಿಯಾ: 197 ಪೈಲಟ್‌ಗಳ ನೇಮಕಕ್ಕೆ ಚಾಲನೆ

Last Updated 2 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ದೇಶದ ಪ್ರಮುಖ ವಿಮಾನಯಾನ ಸಂಸ್ಥೆ ‘ಏರ್‌ ಇಂಡಿಯಾ’ 2015–16ರಲ್ಲಿ 197 ಪೈಲಟ್‌ಗಳನ್ನು ನೇಮಿಸಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಿದೆ.

‘ಸೇವೆ ವಿಸ್ತರಿಸುವ ಉದ್ದೇಶದಿಂದ ಮತ್ತು ಮುಂದಿನ ಎರಡು ವರ್ಷಗಳಲ್ಲಿನ ಪೈಲಟ್‌ಗಳ ನಿವೃತ್ತಿ­ಯನ್ನು ಗಮನದಲ್ಲಿಟ್ಟುಕೊಂಡು ಹೊಸ ಪೈಲಟ್‌ಗಳ ನೇಮಕಕ್ಕೆ ಮುಂದಾಗಿದೆ’ ಎಂದು ನಾಗರಿಕ ವಿಮಾನಯಾನ ರಾಜ್ಯ ಸಚಿವ ಮಹೇಶ್‌ ಶರ್ಮಾ ಅವರು ಲೋಕಸಭೆಗೆ ಮಾಹಿತಿ ನೀಡಿದರು.

ಫೆ. 1ರಂತೆ ಏರ್‌ ಇಂಡಿಯಾದಲ್ಲಿ 1,464 ಪೈಲಟ್‌­ಗಳಿದ್ದಾರೆ. 2014–15ರಲ್ಲಿ ಒಬ್ಬರನ್ನು ಮಾತ್ರ ನೇಮಿಸಿಕೊಂಡಿತ್ತು. 2013–14ರಲ್ಲಿ ಯಾವುದೇ ಹೊಸ ನೇಮಕ ನಡೆದಿರಲಿಲ್ಲ. 2012–13ರಲ್ಲಿ ಇಬ್ಬರು ಪೈಲೆಟ್‌, 2011–12ರಲ್ಲಿ 39 ಪೈಲೆಟ್‌ಗಳನ್ನು ನೇಮಿಸಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT