ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರ್‌ ಕೋಸ್ಟಾ: ಸೇವೆ ವಿಸ್ತರಿಸಲು ಯೋಜನೆ

Last Updated 19 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಹೈದರಾಬಾದ್: ವಿಮಾನಯಾನ ಸಂಸ್ಥೆ ಏರ್‌ ಕೋಸ್ಟಾ 2015ರ ಮೊದಲ ತ್ರೈಮಾಸಿಕದಲ್ಲಿ ದೇಶೀಯ ಮಾರ್ಗ­ಗಳಲ್ಲಿ ಸೇವೆ ವಿಸ್ತರಿಸುವ ಹಾಗೂ  2018ರ ವೇಳೆಗೆ ಅಂತರ­ರಾಷ್ಟ್ರೀಯ ಮಾರ್ಗಗಳಲ್ಲಿ ಹೊಸ ಸೇವೆ ಆರಂಭಿಸುವ ಯೋಜನೆ ಹೊಂದಿದೆ. 

ಅಂತರರಾಷ್ಟ್ರೀಯ ವಿಮಾನ ಸೇವೆ ಆರಂಭಿಸಲು ಕಂಪೆನಿಗೆ ಕನಿಷ್ಠ 15 ವಿಮಾನ­ಗಳ ಅಗತ್ಯವಿದೆ. ಆದರೆ ಸದ್ಯ  4 ವಿಮಾನಗಳು ದೇಶೀಯ ಮಾರ್ಗದಲ್ಲಿ ಮಾತ್ರ ಸಂಚಾರ ಸೇವೆ ಒದಗಿಸುತ್ತಿವೆ. ವಿಮಾನ­ಗಳ ಸಂಖ್ಯೆಯನ್ನು ವರ್ಷಕ್ಕೆ 4 ರಂತೆ ಹೆಚ್ಚಿಸುವುದಾಗಿ ಸಂಸ್ಥೆ ಅಧ್ಯಕ್ಷ ರಮೆಶ್‌ ಲಿಂಗಮನೇನಿ ಪ್ರಜಾಶವಾಣಿಗೆ ತಿಳಿಸಿ­ದ್ದಾರೆ.

₨183 ಕೋಟಿಗೆ 50 ಎಂಬ್ರೇರ್‌ ವಿಮಾನಗಳ ಖರೀದಿ ಮಾಡಲಾಗು­ವುದು. ಈ ಹೊಸ ವಿಮಾನಗಳು ದೇಶ ಮತ್ತು ವಿದೇಶಗಳ 2 ಮತ್ತು 3ನೇ ಹಂತದ ನಗರಗಳಿಗೆ ಸಂಪರ್ಕ ಕಲ್ಪಿಸ­ಲಿವೆ ಎಂದು ಅವರು ಹೇಳಿದ್ದಾರೆ.

ಮಾತೃಸಂಸ್ಥೆ ಎಲ್‌ಇಪಿಎಲ್‌ ಪ್ರಾಜೆಕ್ಟ್‌ ಲಿಮಿಟೆಡ್‌ನಿಂದ ಬೇರ್ಪ­ಡಲು ಹೈದರಾಬಾದ್‌ ಹೈಕೋರ್ಟ್‌ ಒಪ್ಪಿಗೆ ನೀಡಿದೆ. ಇದರಿಂದ ಹೆಚ್ಚಿನ ಹೂಡಿಕೆಗೆ ಅವಕಾಶ ಸಿಗಲಿದೆ ಎಂದು ಸಂಸ್ಥೆಯ ಮುಖ್ಯ ಹಣಕಾಸು ಅಧಿಕಾರಿ ವಿವೇಕ್‌ ಚೌಧರಿ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT